ಸುದ್ದಿಮೂಲ ವಾರ್ತೆ
ನೆಲಮಂಗಲ, ನ.30: ಪ್ರತಿಯೊಬ್ಬರು ಮಠಕ್ಕೆ ದೇವಸ್ಥಾನಕ್ಕೆ ಬರುವಾಗ ನಮ್ಮಲ್ಲಿರುವ ಎಲ್ಲಾ ಅಹಂಕಾರಗಳನ್ನು ಹೊರಗಿಟ್ಟೆ ಬರಬೇಕು ಎಂದು ಮೈಸೂರಿನ ನಿವೃತ್ತ ಪ್ರಾದ್ಯಾಪಕ ಪ್ರೋ ಕೃಷೇಗೌಡ ತಿಳಿಸಿದರು.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀ ಮೇಲಣಗವಿ ವೀರಸಿಂಹಾಸನ ಮಠದಲ್ಲಿ ನಡೆದ ಕಾರ್ತೀಕ ಜ್ಞಾನ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಮನುಷ್ಯ ಹೇಗೆ ಕಾರು, ಬೈಕುಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುತ್ತಾನೋ ಅದೇ ತರ ಪ್ರಿತಿ, ಭಕ್ತಿ,ಆತ್ಮಸ್ಥೈರ್ಯಗಳನ್ನು ಮನದೊಳಗೆ ಬಿಟ್ಟುಕೊಳ್ಳಬೇಕು.
ಮೇಲಣವಿ ಮಠದ ವೀರ ಸಿಂಹಾಸನ ಸಂಸ್ಥಾನ ಮಠ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಾತನಾಡಿ, ದೀಪದ ಕಡೆಗೆ ನಾವು ಲಕ್ಷ ಕೊಡಬೇಕು. ದೀಪದ ಬೆಳಕಿನಲ್ಲಿ ನಾವು ಓರೆ ಕೋರೆಗಳನ್ನು ತಿದ್ದುಕೊಂಡು ಮುಂದೆ ಸಾಗಬೇಕು. ಮನೆಯಲ್ಲಿ ಸೂತಕವಾದಾಗ ನಾವು ಸ್ನಾನ ಮಾಡುತ್ತೇವೆ. ಆದರೆ, ಟಿ.ವಿ ಮತ್ತು ಪತ್ರಿಕೆಗಳಲ್ಲಿ ಕೊಲೆ ಸುಲಿಗೆ ಇರುತ್ತವೆ. ಹಾಗಾದರೆ ಅದು ಸೂತಕವಲ್ಲವೇ? ನಮ್ಮ ಮನಸ್ಸು ಸೂತಕವಾಗಿದೆ. ನಾವುಗಳು ಜ್ಞಾನ ದೀಪೋತ್ಸವ ಆಚರಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ವಿಶ್ವನಾಥ ಹಿರೇಮಠ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಏಮ್ಮಿಗನೂರು ಮಠದ ಡಾ.ವಾಮಾನಚಾರ್ಯ ಸ್ವಾಮಿಜಿ , ಬಳ್ಳಾರಿಯ ಅರಗಿನದೋಣಿಯ ಮಠದ ಶ್ರೀ ಸಿದ್ದಲಿಂಗಾ ಶಿವಾಚಾರ್ಯ, ಕಂಭಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮಿಜಿ, ವನಕಲ್ಲು ಮಠದ ಡಾ.ಬಸವರಮಾನಂದ ಸ್ವಾಮಿಗಳು ಉಪಸ್ಥಿತಿತರಿದ್ದರು. ಕಾರ್ಯಕ್ರಮದಲ್ಲಿ ಹಲವರನ್ನು ಸನ್ಮಾನಿಸಲಾಯಿತು.