ಸುದ್ದಿಮೂಲ ವಾರ್ತೆ ಮಾನ್ವಿ, ಡಿ.26:
ಪಿಯುಸಿ ಹಂತದಲ್ಲೇ ಕಲಿಕೆಯ ಜೊತೆಗೆ ವಿದ್ಯಾಾರ್ಥಿ ಗಳ ಭವಿಷ್ಯತ್ತಿಿಗೆ ಭದ್ರ ಬುನಾದಿ ಹಾಕುವ ದೃಷ್ಟಿಿಯಿಂದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ನೇತಾಜಿ ಕೆರಿಯರ್ ಅಕಾಡೆಮಿ ಆರಂಭಿಸಲಾಗಿದೆ ಎಂದು ನೇತಾಜಿ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಕೆ.ಈ.ನರಸಿಂಹ ಹೇಳಿದರು.
ಅವರು ಶುಕ್ರವಾರ ನೇತಾಜಿ ಶಿಕ್ಷಣ ಸಂಸ್ಥೆೆಯಲ್ಲಿ ಆರಂಭಿಸಲಾದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ಇದು ಸಂಸ್ಥೆೆಯ ಬಹುದಿನಗಳ ಕನಸು. ಗ್ರಾಾಮೀಣ ಭಾಗದ ರೈತ ಕುಟುಂಬದ ವಿದ್ಯಾಾರ್ಥಿಗಳಿಗೆ ಅನುಕೂಲವಾಗಲಿ ಎಂದು ಈ ಅಕಾಡೆಮಿ ಆರಂಭಿಸಲಾಗಿದೆ. ಅನುಭವಿ ಸಂಪನ್ಮೂಲ ವ್ಯಕ್ತಿಿ ಗಳಿಂದ ಮತ್ತು ಈಗಾಗಲೇ ಉದ್ಯೋೋಗ ಪಡೆದ ಅಧಿಕಾರಿಗಳಿಂದ ಮಾರ್ಗದರ್ಶನ ನೀಡಲಾಗುತ್ತದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ಮಧ್ಯಾಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತರಗತಿ ನಡೆಯುತ್ತವೆ. ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು ಮಾನ್ವಿಿ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಿಯ ಪಿಯುಸಿ ಮತ್ತು ಡಿಗ್ರಿಿ ಅಭ್ಯಾಾಸ ಮಾಡುವ ವಿದ್ಯಾಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬಹುದು.
ಎಸ್.ಡಿ.ಎ., ಎ್.ಡಿ.ಎ, ಶಿಕ್ಷಕ, ಉಪನ್ಯಾಾಸಕ, ಬ್ಯಾಾಂಕಿಂಗ್, ಪೊಲೀಸ್, ಕಂದಾಯ ಹಾಗೂ ಆಡಳಿತಾತ್ಮಕ ಇಲಾಖೆಯ ಕ್ಲಾಾಸ್ ಒನ್ , ಕ್ಲಾಾಸ್ ಟು ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿಿ, ಸಹ ಕಾರ್ಯದರ್ಶಿ ಕೆ.ರವಿವರ್ಮ, ತರಬೇತಿದಾರರಾದ ಹೆಚ್.ಟಿ.ನಾಯಕ, ಹುಸೇನ್ ಬಾಷಾ, ಆಂಜನೇಯ ಹಾಗೂ ಉಪನ್ಯಾಾಸಕರಾದ ಆರ್ೀ, ಚಂದ್ರು ಜಾದವ್ ಹಾಗೂ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ನೇತಾಜಿ ಅಕಾಡೆಮಿ ಆರಂಭ- ಕೆ.ಈ.ನರಸಿಂಹ

