ಸುದ್ದಿಮೂಲ ವಾರ್ತೆ ಮಾನ್ವಿ, ಜ.06:
ಇದೇ ಜನವರಿ 10 ರಂದು ಶನಿವಾರ ನೇತಾಜಿ ಶಿಕ್ಷಣ ಸಂಸ್ಥೆೆಯ ನೇತಾಜಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಉದ್ಘಾಾಟನೆ ಹಾಗೂ ನೇತಾಜಿ ವಿಜ್ಞಾನ ವೈಭವ ಕಾರ್ಯಕ್ರಮದ ಅಡಿ ಮೂರು ದಿನಗಳ ಕಾಲ ವಿಜ್ಞಾನ ವಸ್ತು ಪ್ರದರ್ಶನ ಆರಂಭಗೊಳ್ಳಲಿದೆ ಎಂದು ನೇತಾಜಿ ಶಿಕ್ಷಣ ಸಂಸ್ಥೆೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ ತಿಳಿಸಿದ್ದಾರೆ.
ಈ ಕುರಿತು ಪತ್ರಿಿಕಾ ಪ್ರಕಟಣೆ ನೀಡಿರುವ ಅವರು ನೇತಾಜಿ ಪದವಿ ಪೂರ್ವ ಕಾಲೇಜಿನಲ್ಲಿ ಇದುವರೆಗೆ ಕಲಾ ಮತ್ತು ವಾಣಿಜ್ಯ ವಿಭಾಗಗಳು ಮಾತ್ರ ಇದ್ದು ಇದೇ ಶೈಕ್ಷಣಿಕ ವರ್ಷದಿಂದ ವಿಜ್ಞಾನ ವಿಭಾಗಗಕ್ಕೆೆ ಇಲಾಖೆಯಿಂದ ಅನುಮತಿ ದೊರೆತಿರುವುದು ಸಂಸ್ಥೆೆಯ ಮತ್ತೊೊಂದು ಮೈಲಿಗಲ್ಲಾಗಿದೆ. ಇದರ ಅಂಗವಾಗಿ ವಿಜ್ಞಾನ ವಿಭಾಗದ ಉದ್ಘಾಾಟನೆ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಿಕೊಳ್ಳಲಾಗಿದೆ. ಈ ವಸ್ತು ಪ್ರದರ್ಶನದಲ್ಲಿ ವಿಜ್ಞಾನ, ಇತಿಹಾಸ, ಗಣಿತ, ವಾಣಿಜ್ಯ, ಕಲಾ, ಕೃಷಿ, ಸಾಹಿತ್ಯ, ಸಂಸ್ಕೃತಿ, ಭಾಷೆ, ಖಗೋಳಶಾಸ, ಭೂಮಿ ಸಂರಕ್ಷಣೆ, ಆಯುರ್ವೇದ, ಅಬ್ಯಾಾಕಸ್, ಮುಂತಾದ ವಿಷಯಗಳಿಗೆ ಸಂಬಂಧಿಸಿದ ವರ್ಕಿಂಗ್ ಮಾಡೆಲ್ಗಳು, ಸ್ಥಿಿರ ಮಾದರಿಗಳು, ಪ್ರಯೋಗಗಳು, ಪುಷ್ಪ ಪ್ರದರ್ಶನ, ಸೋಲಾರ್ ಸಿಸ್ಟಮ್, ಸೇರಿದಂತೆ ಒಟ್ಟು 270 ಕ್ಕೂ ಹೆಚ್ಚು ಪ್ರದರ್ಶನಗಳು ಇರುತ್ತವೆ. ಈ ವಸ್ತು ಪ್ರದರ್ಶನ ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ ಸಂಸ್ಕೃತಿಯ ಸಂಗಮವಾಗಿದೆ ಎಂದು ಹೇಳಿದ್ದಾರೆ.
ವಿಜ್ಞಾನ ಕಾಲೇಜು ಉದ್ಘಾಾಟನೆ ಹಾಗೂ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ, ನೇತಾಜಿ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಕೆ.ಈ.ನರಸಿಂಹ ಸೇರಿದಂತೆ ನಗರದ ಗಣ್ಯರು, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಶನಿವಾರ ಮಧಾಹ್ನ 1 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅಂದು ಸಂಜೆ 4-30 ರ ವರೆಗೆ ಮತ್ತು ದಿನಾಂಕ 12 ರಂದು ಸೋಮವಾರ ಹಾಗೂ 13 ರಂದು ಮಂಗಳವಾರ ಬೆಳಿಗ್ಗೆೆ 10 ಗಂಟೆಯಿಂದ ಸಂಜೆ 4-30 ರ ವರಗೆ ವಿದ್ಯಾಾರ್ಥಿಗಳಿಗೆ, ಪಾಲಕರಿಗೆ, ಸಾರ್ವಜನಿಕರಿಗೆ ವಸ್ತು ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಿಸಲಾಗಿದೆ ಎಂದು ವಿಜಯಲಕ್ಷ್ಮೀ ತಿಳಿಸಿದ್ದಾರೆ.
ಮಾನ್ವಿ: ಜ.10 ರಂದು ನೇತಾಜಿ ವಿಜ್ಞಾನ ಕಾಲೇಜು ಉದ್ಘಾಟನೆ, ವಸ್ತು ಪ್ರದರ್ಶನಕ್ಕೆ ಚಾಲನೆ

