ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಸೆ.28: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಕೊಡುಗೆ ಜವಬ್ದಾರಿ ಹೆಚ್ಚಾಗಿರುವುದರ ಜೊತೆಗೆ ಮಕ್ಕಳಿಗೆ ಇಷ್ಟವಾದ ಕೊರ್ಸುಗಳನ್ನು ಕೊಡಿಸಿದಾಗ ಮಾತ್ರ ಅವರು ಯಸಸ್ಸು ಕಾಣಲು ಸಾಧ್ಯ ಎಂದು ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿದ್ಯಾಶಂಕರ್ ತಿಳಿಸಿದರು.
ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್ ಸಮೂಹ ಸಂಸ್ಥೆಯಲ್ಲಿ ನೂತನ ಇಂಜಿನಿಯರಿಂಗ್ ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳನ್ನು ಕಾಲೇಜಿಗೆ ದಾಖಲು ಮಾಡಿದರೆ ಅವರ ಜವಾಬ್ದಾರಿ ಮುಗಿಯುವುದಿಲ್ಲ. ಅವರ ಬಗ್ಗೆ ನಿಗಾವಹಿಸಬೇಕು. ಆಗಿಂದಾಗ್ಗೆ ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಆಕಾಶ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಅಮರ್ಗೌಡ ಮಾತನಾಡಿ, ಇಂಜಿನಿಯರಿಂಗ್ ವೃತ್ತಿ ಶಿಕ್ಷಣದಲ್ಲಿ ಒಂದಾಗಿದೆ. ಇಂಜಿನರ್ಗಳು ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಚಂದ್ರಯಾನದಲ್ಲಿ ಇಂಜಿನಿಯರ್ಗಳ ಪಾತ್ರ ಅಪಾರವಾದುದು. ನಮ್ಮ ಸಮೂಹ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆಲ್ಲ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕಗವಾಗಿ ಪ್ರಗತಿಸಾಧಿಲಿಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡಲಾಗೆ, ಕಲಿಕೆಗೆ ಉತ್ತಮ ವಾತಾವರಣವಿದ್ದು ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಲಿಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಕಲ್ಪಿಸಲು ಆಡಳಿತ ಮಂಡಳಿ ಸದಾಸಿದ್ದವಿದೆ ಎಂದರು.
ಇದೆ ವೇಳೆ ಅಕಾಶ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ. ಮುನಿರಾಜು, ಪುಷ್ಪಮುನಿರಾಜು, ನಿರ್ದೇಶಕ ಅಕಾಶ್ ಮುನಿರಾಜು, ಆಕಾಶ್ ಮೆಡಿಕಲ್ ಸೈನ್ಸ್ ಮತ್ತು ರೀಸರ್ಚ್ ಸೆಂಟರ್ನ ಪಾಂಶುಪಾಲರಾದ ಡಾ.ಶಿವಪ್ರಕಾಶ್, ಅಕಾಶ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಕಾಶ್ ಎಸ್ ದಬೀರ್, ಉಪವೈದ್ಯಕೀಯ ಅಧೀಕ್ಷಕ ಡಾ.ಬ್ರಿಜೇಶ್, ಆರ್.ಎಂ.ಓ ಡಾ.ಸುನಿಲ್ ಹೆಗ್ಡೆ, ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಇದ್ದರು.