ಸುದ್ದಿಮೂಲ ವಾರ್ತೆ ಕೊಪ್ಪಳ, ನ.30:
ಇಂದು ಜಗತ್ತಿಿನಲ್ಲಿ ನವ ಮಾಧ್ಯಮಗಳು ಬಂದಿವೆ. ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳಿಂದಾಗಿ ಸೃಜಲಶೀಲ ಸಾಹಿತ್ಯವು ದೂರವಾಗುತ್ತಿಿದೆ ಎಂದು ಕೊಪ್ಪಳ ವಿಶ್ವವಿದ್ಯಾಾಲಯ ಕುಲಪತಿ ಬಿ ಕೆ ರವಿ ಹೇಳಿದರು.
ಅವರು ಇಂದು ಕೇಂದ್ರ ಸಾಹಿತ್ಯ ಆಕಾಡೆಮಿ, ಭಾಗ್ಯನಗರದ ಶಕ್ತಿಿ ಶಾರದೆಯ ಮೇಳ. ಸಾಹಿತ್ಯ ವೇದಿಕೆಯಿಂದ ಇಂದು ಆಯೋಜಿಸಿರುವ ಸೃಜನ ಸಮ್ಮಿಿಲನ ಉದ್ಘಾಾಟಿಸಿ ಮಾತನಾಡಿದರು. ಈ ಹಿಂದಿನಿಂದಲೂ ಆಕಾಶವಾಣಿಗಳಲ್ಲಿ ಸೃಜಲಶೀಲ ಸಾಹಿತ್ಯದ ಪ್ರಸ್ತುತಿ ಬರುತ್ತಿಿದೆ. ಕೊಪ್ಪಳದಲ್ಲಿ ಸೃಜಲಶೀಲ ಸಾಹಿತ್ಯಕ್ಕೆೆ ಹೆಚ್ಚು ಒತ್ತು ನೀಡಲಾಗುತ್ತಿಿದೆ. ಈ ಸಂದರ್ಭದಲ್ಲಿ ಸಾಹಿತ್ಯ ಆಕಾಡೆಮಿಯು ಸೃಜಲಶೀಲ ಸಮ್ಮಿಿಲನದಲ್ಲಿ ಕಾವ್ಯ, ಕಥೆ. ಆತ್ಮಕಥನ. ಪ್ರಬಂಧ ಪ್ರಸ್ತುತಿ ಪಡಿಸುತ್ತಿಿರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಪ್ರೋೋ ಅಲ್ಲಮಪ್ರಭು ಬೆಟ್ಟದೂರು ವಹಿಸಿದ್ದರು. ಪ್ರಾಾಸ್ತಾಾವಿಕವಾಗಿ ಸಾಹಿತ್ಯ ಆಕಾಡೆಮಿಯ ಸಾಮಾನ್ಯ ಸಲಹಾ ಸಮಿತಿ ಸದಸ್ಯರಾದ ಬಸವರಾಜ ಸಾದರ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾವ್ಯ ಪ್ರಸ್ತುತಿ ಸಾವಿತ್ರಿಿ ಮುಜಮದಾರ. ಕಥಾ ಪ್ರಸ್ತುತಿಯನ್ನು ಇಸ್ಮಾಾಯಿಲ್ ತಳಕಲ್, ಆತ್ಮಕಥೆ ಪ್ರಸ್ತುತಿಯನ್ನು ಎ ಎಂ ಮದರಿ, ಪ್ರಬಂಧ ಪ್ರಸ್ತುತಿ ಈರಪ್ಪ ಕಂಬಳಿ ಮಾಡಿದರು.
ಮಾಲಾ ಬಡಿಗೇರಿ ಪ್ರಾಾರ್ಥನೆ ಮಾಡಿದರು. ಡಿ ಎಂ ಬಡಿಗೇರಿ ಸ್ವಾಾಗತಿಸಿದರು. ವಿಜಯಲಕ್ಷ್ಮಿಿ ಕೋಟಗಿ ವಂದಿಸಿದರು.
ನವಮಾಧ್ಯಮಗಳು ಸೃಜನಶೀಲ ಸಾಹಿತ್ಯ ದೂರ ಮಾಡಿವೆ – ಬಿ ಕೆ ರವಿ

