ಬಳ್ಳಾರಿ, ಜು. 15:ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ಬಳ್ಳಾರಿ ಎಪಿಎಂಸಿ ಹಮಾಲರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸಿದ್ದವಾಗಿರುವ ಪರಿಷ್ಕೃತ ದರಪಟ್ಟಿಯು ಆಗಸ್ಟ್ 1ರ ಮಂಗಳವಾರದಿಂದ ಜಾರಿಗೆ ಬರಲಿದೆ.
ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ ಮತ್ತು ಹಮಾಲರ ಸಂಘದ ಅಧ್ಯಕ್ಷ ಎಂ. ರವಿಪ್ರಸಾದ್ ಅವರು ಜಂಟಿಯಾಗಿ ಹಮಾಲರ ಪರಿಷ್ಕೃತ ದರಪಟ್ಟಿಗೆ ಶನಿವಾರ ಸಹಿ ಮಾಡಿ, ಆಗಸ್ಟ್ 1ರ ಮಂಗಳವಾರದಿAದ ನೂತನ ಪರಿಷ್ಕೃತ ದರಪಟ್ಟಿ ಜಾರಿಗೆ ಬರಲಿದೆ. ವಿವಿಧ ಹಂತದಲ್ಲಿ ಹಮಾಲರು ಮತ್ತು ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಸಭೆ ನಡೆಸಿ ಪರಿಷ್ಕೃತ ದರಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಈ ಒಪ್ಪಂದವು ಮೂರು ವರ್ಷಗಳ ಕಾಲ ಜಾರಿಯಲ್ಲಿರಲಿದೆ ಎಂದು ಹೇಳಿದರು.
ಹಮಾಲರ ಸಂಘದ ಅಧ್ಯಕ್ಷ ಎಂ. ರವಿಪ್ರಸಾದ್ ಅವರು, ಪರಿಷ್ಕೃತ ದರಪಟ್ಟಿ ಪ್ರಕಾರ ಉದ್ಯಮಿಗಳು, ವ್ಯಾಪಾರಿಗಳು ಹಮಾಲರಿಗೆ ಹಣ ಪಾವತಿ ಮಾಡಬೇಕು. ಅಲ್ಲದೇ, ಹಮಾಲರ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು ಹಮಾಲರು ಉದ್ಯಮಿಗಳ ಜೊತೆ, ಉದ್ಯಮಿಗಳು ಹಮಾಲರ ಜೊತೆ ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಂಡು ಸುಗಮವಾಗಿ ದೈನಂದಿನ ವ್ಯವಹಾರದ ಚಟುವಟಿಕೆಗಳನ್ನು ನಡೆಸಬೇಕು ಎಂದು ಮನವಿ ಮಾಡಿದರು.
ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ ಅವರು, ಹಮಾಲರು ಉದ್ಯಮಿಗಳು ಮತ್ತು ವ್ಯಾಪಾರಿಗಳ ಜೊತೆಯಲ್ಲಿ ಸೌಹಾರ್ದಯುತವಾಗಿ ವ್ಯವಹರಿಸಬೇಕು. ಯಾವುದೇ ಕಾರಣಕ್ಕೂ ಶಿಸ್ತು, ಸಂಯಮಗಳನ್ನು ಮೀರಿ ಅಸಭ್ಯವಾಗಿ – ಅಶ್ಲೀಲವಾಗಿ ವ್ಯವಹರಿಸಬಾರದು ಎಂದು ಹೇಳಿದರು.
ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರುಗಳಾದ ಬಿ. ಮಹಾರುದ್ರಗೌಡರು, ಎ. ಮಂಜುನಾಥ್, ಕೆ. ರಮೇಶ್ (ಬುಜ್ಜಿ), ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿಗಳಾದ ಎಸ್. ದೊಡ್ಡನಗೌಡ, ಸೊಂತ ಗಿರಿಧರ, ಖಜಾಂಚಿ ಪಿ. ಮಾಲಣ್ಣ, ಕಾರ್ಯಕಾರಿ ಸಮಿತಿ ಸದಸ್ಯರು, ಫರ್ಟಿಲೈರ್ಸ್ ಸಂಘದ ಜಿ. ಐನಾಥರೆಡ್ಡಿ, ಹಮಾಲಿ ಸಂಘದ ಮೇಸ್ತಿçಗಳಾದ ಬಿ. ಸುಂಕಣ್ಣ, ಬಿ. ಆಂಜನೇಯಲು, ಬಿ. ಕೃಷ್ಣ, ಬಿ. ಅಂಜಿನಪ್ಪ ಮತ್ತು ಇತರರು ಉಪಸ್ಥಿರಿದ್ದರು.