ಸುದ್ದಿಮೂಲ ವಾರ್ತೆ ಬೆಂಗಳೂರು, ಜ.01:
ಹೊಸ ವರ್ಷದ ಸಂಭ್ರಮ ಆಚರಣೆಯ ವೇಳೆ ಬೆಂಗಳೂರು ನಗರದಲ್ಲಿ 587.51 ಕೋಟಿ ರೂ ಮದ್ಯ ವಹಿವಾಟು ನಡೆದಿದೆ.
ಅಬಕಾರಿ ಇಲಾಖೆ ಡಿ.31ರಂದು ಬೆಳಿಗ್ಗೆೆ 6ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಿಸಲಾಗಿತ್ತು. ಹೀಗಾಗಿ ಅಧಿಕ ಮದ್ಯ ಮಾರಾಟವಾಗಿದೆ. ಇದರಿಂದ ಇಲಾಖೆಗೆ ಉತ್ತಮ ಆದಾಯ ಬಂದಿದೆ ಎಂದು ರಾಜ್ಯ ಮದ್ಯದ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಗುರುಮೂರ್ತಿ ಹೇಳಿದ್ದಾರೆ.
ಕಳೆದ ವರ್ಷ ಇದೇ ದಿನಕ್ಕೆೆ ಹೋಲಿಕೆ ಮಾಡಿದರೆ ಈ ವರ್ಷ ಹೆಚ್ಚು ಮದ್ಯ ಮಾರಾಟವಾಗಿದೆ. ಐಎಂಎಲ್, ಬಿಯರ್ ಮಾರಾಟದಿಂದ 587.51 ಕೋಟಿ ರೂ. ವಹಿವಾಟು ನಡೆದಿದ್ದು ಕಳೆದ ವರ್ಷಕ್ಕೆೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಈ ವರ್ಷ ಅಬಕಾರಿ ಇಲಾಖೆ ಬೊಕ್ಕಸಕ್ಕೆೆ ಭರ್ಜರಿ ಆದಾಯ ಹರಿದು ಬಂದಿದೆ.
ಬಾಕ್ಸ್
ಯಾವ ವರ್ಷ ಎಷ್ಟು ಮಾರಾಟವಾಗಿತ್ತು
2024ರ ಡಿ.29, 30, 31ರಂದು 8.25 ಲಕ್ಷ ಬಾಕ್ಸ್ ಐಎಂಎಲ್ ಮತ್ತು 5.03 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ ಆ ವರ್ಷ 420.77 ಕೋಟಿ ರೂ ಆದಾಯ ಗಳಿಸಲಾಗಿತ್ತು. 2025ರ ಡಿ.29, 30, 31ರಂದು 9.84 ಲಕ್ಷ ಬಾಕ್ಸ್ ಐಎಂಎಲ್ ಅಂದರೆ ಕಳೆದ ವರ್ಷಕ್ಕೆೆ ಹೋಲಿಸಿದರೆ 1.59 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಮತ್ತು ಇದೇ ದಿನದಂದು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆೆ ಹೋಲಿಸಿದರೆ 1.61 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಐಎಂಎಲ್, ಬಿಯರ್ ಮಾರಾಟದಿಂದ ಈ ವರ್ಷ ಅಬಕಾರಿ 587.51 ಕೋಟಿ ಆದಾಯವಾಗಿದೆ. ಇದನ್ನು ಕಳೆದ ವರ್ಷಕ್ಕೆೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಆದಾಯ ಹರಿದು ಬಂದಿದೆ.
ಬಾಕ್ಸ್
ಬಿಎಂಟಿಸಿಗೆ 10 ಲಕ್ಷ ರೂ. ಆದಾಯ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಡಿ.31ರಂದು ಒಂದೇ ದಿನ 10 ಲಕ್ಷ ರೂ. ಆದಾಯ ಹರಿದು ಬಂದಿದೆ.
ಡಿ.31ರಂದು ಬೆಳಿಗ್ಗೆೆ 6 ಗಂಟೆಯಿಂದ ಮಧ್ಯರಾತ್ರಿಿ 3 ಗಂಟೆವರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಕರು ಬಸ್ಗಳಲ್ಲಿ ಓಡಾಡಿದ್ದಾರೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಾಪಕ ಪ್ರಭಾಕರ್ ರೆಡ್ಡಿಿ ಹೇಳಿದ್ದಾರೆ.
ಹೊಸ ವರ್ಷದ ಆಚರಣೆ ಹಿನ್ನೆೆಲೆಯಲ್ಲಿ ಬಿಎಂಟಿಸಿ ಹೆಚ್ಚುವರಿ ಬಸ್ಗಳ ಸೇವೆ ಆರಂಭಿಸಿತ್ತು. ಹೆಚ್ಚುವರಿಯಾಗಿ 200 ಟ್ರಿಿಪ್ ಹಾಗೂ 4400 ಕಿ.ಮೀ. ದೂರ ಬಸ್ಗಳ ಓಡಾಡಿವೆ. ರಾತ್ರಿ 11ಗಂಟೆಯಿಂದ ಮಧ್ಯರಾತ್ರಿ 3ಗಂಟೆವರೆಗೆ ಬಿಎಂಟಿಸಿ ಬಸ್ಗಳ ಸೇವೆ ಇತ್ತು ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಾಪಕ ಪ್ರಭಾಕರ್ರೆಡ್ಡಿಿ ಹೇಳಿದ್ದಾರೆ.
ಕೋರಮಂಗಲ, ಇಂದಿರಾನಗರ, ಮಾಲ್ ಆ್ ಏಶಿಯಾ, ಎಂಜಿ ರಸ್ತೆೆ ಹೀಗೆ ಹಲವು ಕಡೆಗಳಲ್ಲಿ ಬಸ್ಗ್ಗಳ ಸೇವೆ ವಿಸ್ತರಣೆ ಮಾಡಲಾಗಿತ್ತು. ಡಿಸೆಂಬರ್ 20ರಂದು 6 ಕೋಟಿ 75 ಲಕ್ಷ ರೂ ಆದಾಯ ಇತ್ತು. ಐಟಿ ಬಿಟಿ ಜನರಿಗೆ ರಜೆ ಇರುವ ಕಾರಣ, ಡಿಸೆಂಬರ್ 24ರಿಂದ ಬಸ್ ಪ್ರಯಾಣಿಕರ ಸಂಖ್ಯೆೆ ಇಳಿಕೆ ಆಗಿತ್ತು ಎಂದು ಹೇಳಿದ್ದಾರೆ.
ಡಿಸೆಂಬರ್ 25, 27, 28ರಂದು ಕಡಿಮೆ ಪ್ರಯಾಣಿಕರು ಓಡಾಟ ಮಾಡಿದ್ದು, 60 ಲಕ್ಷ ರೂ ಆದಾಯ ಕಡಿಮೆ ಆಗಿತ್ತು. 6 ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆೆ ಇಳಿಕೆ ಇತ್ತು. ಆದರೆ ಹೊಸ ವರ್ಷ ಹಿನ್ನೆೆಲೆ ಬುಧವಾರ ಒಂದೇ ದಿನ 1 ಲಕ್ಷ ಪ್ರಯಾಣಿಕರು ಹೆಚ್ಚಾಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
8 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋೋದಲ್ಲಿ ಪ್ರಯಾಣ
ಡಿ.31ರಂದು ನಮ್ಮ ಮೆಟ್ರೋೋದ ವಿವಿಧ ಮಾರ್ಗಗಳಲ್ಲಿ ಅಂದಾಜು8,93,903 ಪ್ರಯಾಣಿಕರು ಸಂಚರಿಸಿ 3 ಕೋಟಿ 8 ಲಕ್ಷ ರೂ. ಆದಾಯ ಬಂದಿದೆ.
ಡಿ.31ರ ಬೆಳಗ್ಗೆ 5ಗಂಟೆಯಿಂದ ನಸುಕಿನ 3:10ರವರೆಗೆ ಮೆಟ್ರೋೋ ಸಂಚಾರ ಸಮಯ ವಿಸ್ತರಿಸಲಾಗಿತ್ತು. ಎಂ.ಜಿ. ರಸ್ತೆೆ ನಿಲ್ದಾಣ ಹೊರತುಪಡಿಸಿ, ಹಳದಿ, ನೇರಳೆ ಮತ್ತು ಹಸಿರು ಮಾರ್ಗಗಳ ಎಲ್ಲಾ ನಿಲ್ದಾಣಗಳು ಕಾರ್ಯನಿರ್ವಹಿಸಿದ್ದವು. ಪ್ರಮುಖವಾಗಿ ಕೋರಮಂಗಲ, ಎಂ.ಜಿ. ರಸ್ತೆೆ, ಬ್ರಿಗೇಡ್ ರಸ್ತೆೆ, ಇಂದಿರಾನಗರದಂತಹ ಪ್ರದೇಶಗಳಲ್ಲಿ ಜನರು ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಮೆಟ್ರೋೋಗೆ ಅಧಿಕ ಆದಾಯ ಬಂದಿದೆ ಎನ್ನಲಾಗಿದೆ.

