ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ಹೊಸ ವರ್ಷ ಆಚರಣೆಗೆ ರಾಯಚೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಿದ್ಧತೆಗಳು ಆರಂಭಗೊಂಡಿದ್ದುಘಿ, ಸ್ಥಳೀಯ ಸಂಸ್ಥೆೆಗಳ ಸ್ಪರ್ಧಾಕಾಂಕ್ಷಿಿಗಳು ಪಾರ್ಟಿ ಆಯೋಜಿಸಿ ಮತ ಬೇಟೆಗೆ ಮುಂದಾಗಿರುವುದು ಗೊತ್ತಾಾಗಿದೆ.
ರಾಯಚೂರು ನಗರ ಸೇರಿ ಗ್ರಾಾಮೀಣ ಭಾಗದಲ್ಲೂ ಮುಂಬರುವ ಚುನಾವಣೆಗಳ ಗುರಿಯಾಗಿಸಿಕೊಂಡಿರುವ ಆಕಾಂಕ್ಷಿಿಗಳು ಸಂಘ-ಸಂಸ್ಥೆೆಗಳು, ಗೆಳೆಯರ ಬಳಗದ ಹೆಸರಲ್ಲಿ ಡಿ.31ರ ರಾತ್ರಿಿ ಹೊಸ ವರ್ಷದ ಸ್ವಾಾಗತಕ್ಕೆೆ ಭರ್ಜರಿ ತಯಾರಿ ಮಾಡಿಕೊಂಡಿದ್ದರು.
ಅಲ್ಲದೆ, ನಗರ ಪ್ರದೇಶದಲ್ಲಿನ ಪಾಲಿಕೆಯ ಚುನಾವಣೆ ಆಕಾಂಕ್ಷಿಿಗಳು ತಮ್ಮ ಬಡಾವಣೆಯ ಮಹಿಳೆಯರಿಗೆ, ದಂಪತಿಗಳಿಗೆ ಹೋಟೇಲ್, ಆಯಾ ವಾರ್ಡ್ಗಳ ಗೊತ್ತಿಿದ್ದವರ ಮನೆಗಳಲ್ಲಿಯೇ ಮಧ್ಯರಾತ್ರಿಿ ಕೇಕ್ ಕತ್ತರಿಸಿ, ಊಟದ ವ್ಯವಸ್ಥೆೆ ಮಾಡಿಸಿ ಪರೋಕ್ಷವಾಗಿ ಮತಬೇಟೆಗೆ ಇಳಿದಿರುವುದು ಹೊಸ ವರ್ಷದ ಆಚರಣೆ ವೇದಿಕೆಯಾಯಿತು.
ಇನ್ನೂ ಯುವಕರು, ಪುರುಷರಿಗೆ ಪ್ರತ್ಯೇಕವಾಗಿ ಪಾರ್ಟಿಗಳ ಆಯೋಜಿಸಿ ಭೋಜನ ಕೂಟ ಏರ್ಪಡಿಸಿದ್ದ ಆಕಾಂಕ್ಷಿಿಗಳು 2025 ಕ್ಕೆೆ ವಿದಾಯ ಮತ್ತು 2026 ಕ್ಕೆೆ ಸ್ವಾಾಗತಿಸಲು ವಿವಿಧ ಸಾಂಸ್ಕೃತಿಕ ಹಾಗೂ ಇನ್ನಿಿತರೆ ಚಟುವಟಿಕೆಗಳ ಮೂಲಕ ಮನ ಗೆಲ್ಲುವ ಕಸರತ್ತು ಮಾಡಿದ್ದು ಕಂಡು ಬಂದಿತು.
ಅಲ್ಲದೆ, ವಿವಿಧ ವೃತ್ತಘಿ, ರಸ್ತೆೆಗಳಲ್ಲಿನ ಬೇಕರಿಗಳಲ್ಲಿ ಬಗೆಬಗೆಯ ಕೇಕ್ಗಳ ತಯಾರಿಸಿ ಅವುಗಳ ಮಾರಾಟ, ಖರೀದಿ ಜೋರಾಗಿ ಸಾಗಿತ್ತುಘಿ. ಸಂಜೆಯಾಗುತ್ತಲೆ ಜನ ಬೇಕರಿಗೆ ಬಂದು ಮುಗಿಬಿದ್ದು ಕೇಕ್ ಖರೀದಿಸಿಕೊಂಡು ಹೋಗುವುದು ಸಾಮಾನ್ಯವಾಗಿತ್ತುಘಿ.
ಹೊಸ ವರ್ಷದ ಆಚರಣೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಬಂದೋಬಸ್ತ್ ವ್ಯವಸ್ಥೆೆ ಮಾಡಿವೆ.
ಬಂದೋಬಸ್ತ್ಗಾಗಿ ಇಬ್ಬರು ಹೆಚ್ಚುವರಿ ಎಸ್ಪಿ, ನಾಲ್ವರು ಡಿಎಸ್ಪಿ, 15 ಜನ ಸಿಪಿಐ,23ಜನ ಪಿಎಸ್ಐ, 84ಜನ ಎಎಸ್ಐ, 510 ಪೇದೆಗಳು, 9 ಸಶಸ ಮೀಸಲು ತುಕಡಿ, 2 ಕೆಎಸ್ಆರ್ಪಿ 1 ಎಎಸ್ಪಿ ತಂಡಗಳ ನಿಯೋಜಿಸಲಾಗಿದೆ ಎಂದು ಎಸ್ಪಿ ಪುಟ್ಟಮಾದಯ್ಯ ಎಂ ತಿಳಿಸಿದ್ದಾಾರೆ.
ಹೊಸ ವರ್ಷಾಚರಣೆಯ ನೆಪದಲ್ಲಿ ಮಾದಕ ವಸ್ತು ಸೇವಿಸಿ, ಯುವಕರು ಬೈಕ್ ವ್ಹೀಲಿ ಮಾಡುವುದು ಕಿರಿಕಿರಿ ತಂದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹೊಸ ವರ್ಷದ ಪಾರ್ಟಿ, ಮತ ಬೇಟೆಗೆ ಆಕಾಂಕ್ಷಿಗಳು ಮುಂದು

