ಸುದ್ದಿಮೂಲ ವಾರ್ತೆ ಲಿಂಗಸುಗೂರು, ನ.21:
ನವಜಾತ ಶಿಶು ಆರೈಕೆಯಲ್ಲಿ ಎದೆ ಹಾಲು ಉಣಿಸುವಿಕೆ ಹಾಗೂ ಕಾಂಗರೂ ಮದರ್ ಕೇರ್ನಿಂದ ಶಿಶುವಿನ ಮರಣ ಪ್ರಮಾಣ ತಡೆಗಟ್ಟ ಬಹುದು ಮತ್ತು ಮಗುವಿನ ಆರೋಗ್ಯ ಕಾಪಾಡಬಹುದಾಗಿದೆ ಎಂದು ಮಕ್ಕಳ ತಜ್ಞ ಡಾ. ಸಂಜೀವರೆಡ್ಡಿಿ ಸಲಹೆ ನೀಡಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆೆಯಲ್ಲಿ ಏರ್ಪಡಿಸಲಾದ ನವಜಾತ ಶಿಶು ಸಪ್ತಾಾಹ ಕಾರ್ಯಕ್ರಮದಲ್ಲಿ ತಾಯಂದಿರು, ಗರ್ಭಿಣಿಯರಿಗೆ ಹುಟ್ಟಿಿದ ಮಕ್ಕಳ ಸಮಗ್ರ ಆರೈಕೆ ಮಾಹಿತಿ ನೀಡಿದರು ಒಂದು ವರ್ಷ ದೊಳಗಿನ ಎಲ್ಲಾಾ ಲಸಿಕೆಗಳ ಮಹತ್ವ ಕುರಿತು ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಾಣೇಶ್ ಜೋಷಿ ತಿಳಿಸಿದರು. ಮಗುವನ್ನು ಬೆಚ್ಚಗೆ ಇಡುವ ಕಾಂಗರೂ ಮದರ್ ಕೇರ್ ವಿಧಾನಗಳನ್ನು ಪ್ರಾಾತ್ಯಕ್ಷಿಕೆ ಮೂಲಕ ಶುಶ್ರೂಷಕ ಅಧಿಕಾರಿ ಮರ್ಲಿನಾ, ಪ್ರೇೇಮಾ, ಹನಮಂತರಾಯ ವಿವರಿಸಿದರು. ವ್ಯವಸ್ಥಾಾಪಕಿ ಶಿವಲೀಲಾ ಮೇಟಿ. ಪದ್ಮಾಾವತಿ ನಾಯಕ, ಆಪ್ತ ಸಮಾಲೊಚಕಿ ರೋಸ್ ಮೇರಿ, ಆಶಾ ಕಾರ್ಯಕರ್ತರು, ತಾಯಂದಿರು ಇದ್ದರು.
ಲಿಂಗಸುಗೂರ ಸರಕಾರಿ ಆಸ್ಪತ್ರೆೆಯಲ್ಲಿ ನವಜಾತ ಶಿಶು ಸಪ್ತಾಾಹ

