ಸುದ್ದಿಮೂಲ ವಾರ್ತೆ ಬೆಂಗಳೂರು,, ಅ.14:
ಸರ್ಕಾರಿ ಶಾಲೆ, ಕಾಲೇಜು ಹಾಗೂ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಪತ್ರ ಬರೆದ ಹಿನ್ನೆೆಲೆ ತನಗೆ ಮತ್ತು ತನ್ನ ಕುಟುಂಬಕ್ಕೆೆ ಬೆದರಿಕೆಗಳು ಬರುತ್ತಿಿದೆ ಎಂದು ಸಚಿವ ಪ್ರಿಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಸಂಬಂಧ ಎಕ್ಸ್ಪೋಸ್ಟ್ ಮಾಡಿರುವ ಅವರು, ಕಳೆದ ಎರಡು ದಿನಗಳಿಂದ ತನ್ನ ಮೊಬೈಲ್ ನಿರಂತರವಾಗಿ ರಿಂಗಣಿಸುತ್ತಿಿದೆ. ಕರೆಗಳು ಬೆದರಿಕೆಗಳಿಂದ ಕೂಡಿದೆ. ತನ್ನನ್ನು ಹಾಗೂ ತನ್ನ ಕುಟುಂಬವನ್ನು ಹೆದರಿಸುವ, ಅವಾಚ್ಯ ಶಬ್ದಗಳಿಂದ ನಿಂದಿಸುವ ಕೆಲಸ ನಡೆಯುತ್ತಿಿದೆ. ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಪತ್ರ ಬರೆದಿದ್ದಕ್ಕೆೆ ಬೆದರಿಕೆಗಳ ಕರೆಗಳು ಬರುತ್ತಿಿವೆ ಎಂದು ತಿಳಿಸಿದ್ದಾರೆ.
ನಾನು ಇದರಿಂದ ವಿಚಲಿತನಾಗಿಲ್ಲ. ಅಚ್ಚರಿಗೂ ಒಳಗಾಗಿಲ್ಲ. ಆರ್ಎಸ್ಎಸ್ ಮಹಾತ್ಮ ಗಾಂಧಿ ಅಥವಾ ಅಂಬೇಡ್ಕರ್ನನ್ನೇ ಬಿಟ್ಟಿಿಲ್ಲ, ಇನ್ನು ನನ್ನನ್ನು ಬಿಡುತ್ತಾಾರಾ. ಒಂದು ವೇಳೆ ಅವರು ವೈಯ್ಯಕ್ತಿಿಕ ನಿಂದನೆ ಮತ್ತು ಬೆದರಿಕೆಗಳಿಂದ ನನ್ನನ್ನು ಮೌನವಾಗಿಸಬಹುದು ಎಂದು ತಿಳಿದುಕೊಂಡಿದ್ದರೆ ಅದು ಅವರ ತಪ್ಪುು ಗ್ರಹಿಕೆಯಾಗಿದೆ. ಇದು ಕೇವಲ ಆರಂಭವಾಗಿದೆ ಎಂದು ಹೇಳಿದ್ದಾರೆ.
ಬುದ್ಧ, ಬಸವಣ್ಣ, ಬಾಬಸಾಹೇಬ್ ತತ್ವ ಸಿದ್ಧಾಾಂತಗಳ ಮೇಲೆ ಸಮಾಜ ನಿರ್ಮಿಸುವ ಸಮಯ ಬಂದಿದೆ. ಅತ್ಯಂತ ಅಪಾಯಕಾರಿ ಆರ್ಎಸ್ಎಸ್ ನಿಂದ ದೇಶವನ್ನು ಶುದ್ಧೀಕರಿಸುವಂತೆ ಕರೆ ನೀಡಿದ್ದಾರೆ.
ಆರ್ಎಸ್ಎಸ್ ನಿಷೇಧ ಮಾಡಿ ಅಂತ ನಾನು ಹೇಳಿಲ್ಲ: ಆರ್ಎಸ್ಎಸ್ ನಿಷೇಧ ಮಾಡಿ ಅಂತ ನಾನು ಎಲ್ಲಿ ಹೇಳಿದ್ದೇನೆ. ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆ ಬೇಡ ಅಂದಿದ್ದೇನೆ ಅಷ್ಟೇ ಎಂದು ಸಚಿವ ಪ್ರಿಿಯಾಂಕ್ ಖರ್ಗೆ ಸೋಮವಾರ ಸ್ಪಷ್ಟನೆ ನೀಡಿದ್ದಾರೆ. ನಾನೊಬ್ಬ ಹಿಂದೂ. ಆದರೆ ಹಿಂದೂ ಧರ್ಮದ ವಿರೋಧಿ ಅಲ್ಲ. ನಾನು ಆರ್ಎಸ್ಎಸ್ನ ವಿರೋಧಿ. ಕರಾವಳಿ, ಮಲೆನಾಡಿನಲ್ಲಿ ಯಾರು ಬಲಿಯಾಗಿದ್ದಾರೆ. ಅವರ ಮಾಹಿತಿಯನ್ನ ತೆಗೆಯಿರಿ. ಬೇರೆ ಸಂಘಟನೆಯವರು ದೊಣ್ಣೆೆ ಹಿಡಿದು ಓಡಾಡಿದ್ರೆೆ ಒಪ್ಪುುತ್ತಾಾರೆಯೇ. ದಲಿತ, ಹಿಂದುಳಿದ ಸಂಘಟನೆಗಳು ದೊಣ್ಣೆೆ ಹಿಡಿದರೆ ಏನು ಕತೆ. ಶಾಲೆಗಳಲ್ಲಿ ಆರ್ಎಸ್ಎಸ್ ತಲೆ ಕೆಡಿಸುವುದನ್ನು ನಿಲ್ಲಬೇಕು. ಆರ್ಎಸ್ಎಸ್ ಅತಿ ರಹಸ್ಯವಾದ ಸಂಘಟನೆ. ಬಿಜೆಪಿ ಆರ್ಎಸ್ಎಸ್ನ ಕೈಗೊಂಬೆ. ಆರ್ಎಸ್ಎಸ್ ಇಲ್ಲದೇ ಬಿಜೆಪಿ ಶೂನ್ಯ. ಧರ್ಮ ಇಲ್ಲದೇ ಆರ್ಎಸ್ಎಸ್ ಶೂನ್ಯ ಎಂದು ಟೀಕಿಸಿದರು.
ಈ ಹಿಂದೆ ಆರ್ಎಸ್ಎಸ್ಅನ್ನು ನೆಹರು, ಇಂದಿರಾ ಗಾಂಧಿಯಿಂದಲೇ ಬ್ಯಾಾನ್ ಮಾಡಲಾಗಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಿಯಿಸುತ್ತಾಾ, ‘ಸರ್ದಾರ್ ಪಟೇಲ್ ಆರ್ಎಸ್ಎಸ್ ಬ್ಯಾಾನ್ ಮಾಡಿದ್ದರು. ಇತಿಹಾಸದ ಪುಟವನ್ನು ತಿರುಗಿಸಿ ಆರ್ಎಸ್ಎಸ್ ಓದಲಿ. ಸಂಘದವರು ಬಂದು ಪಟೇಲರ ಕೈ ಕಾಲಿಗೆ ಬಿದ್ದಿದ್ರು. ನಾವು ಕೇಂದ್ರದ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ನಿಯತ್ತು ರಾಷ್ಟ್ರ ಧ್ವಜಕ್ಕೆೆ ಇರುತ್ತದೆ. ಹೀಗಂತ ಆಗ ಕ್ಷಮೆ ಕೋರಿದ್ದರು. ಆಗ ಆರ್ಎಸ್ಎಸ್ ಬ್ಯಾಾನ್ ತೆರವು ಮಾಡಲಾಗಿತ್ತು. ಇದು ವಿಷಕಾರಿ ಎಂದು ನೆಹರು ಅವರಿಗೆ ಆಗ ಪಟೇಲರೇ ಪತ್ರ ಬರೆದಿದ್ದರು. ಬಿಜೆಪಿಯವರು ಈಗ ಪಟೇಲರ ಪ್ರತಿಮೆ ಕಟ್ಟಿಿದ್ದಾರೆ. ಅವರೇ ಹೇಳಿರೋದು ಇದು ವಿಷಕಾರಿ ಅಂತ. ಕೈಕಾಲಿಗೆ ಬಿದ್ದಾಗ ಪಟೇಲರು ಒಪ್ಪಿಿದ್ದರು ಎಂದು ತಿರುಗೇಟು ನೀಡಿದ್ದಾರೆ.