ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯಿಂದ ನಗರ ಸ್ವಚ್ಛತೆಗೆ ಖರೀದಿಸಿದ ಸ್ವೀಪಿಂಗ್ ಯಂತ್ರ, ಒಳಚರಂಡಿ ನಿರ್ವಹಣೆಯ ರೆಹಿಕಲ್ ಮೌಂಟೆಡ್ ರೋಬೋಟ್ ಯಂತ್ರಕ್ಕೆೆ ಹಾಗೂ ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ವಿವಿಧ ಐಇಸಿ ಚಟುವಟಿಕೆಗಳಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಾಭಿವೃದ್ಧಿಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿದರು.
ರಾಯಚೂರು ಮಹಾನಗರ ಪಾಲಿಕೆ ಖರೀದಿಸಿದ ಸ್ವಚ್ಛತಾ ವಾಹನಗಳಿಗೆ ಸಚಿವರಿಂದ ಚಾಲನೆ

