Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಯಾಣಿಕರಿಗೆ ಅನುಕೂಲ ಕಲ್ಪಿಿಸಲು 16 ನಗರ ಹೊಸ ಬಸ್‌ಗಳಿಗೆ ಚಾಲನೆ ಆಧುನಿಕ ವಿನ್ಯಾಾಸ ಬಸ್‌ಗಳು : ಶಾಸಕ ಮೆಚ್ಚುಗೆ

ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ರಾಯಚೂರು ನಗರದ ವಿವಿಧೆಡೆ ನಿತ್ಯ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಿಸುವ ಉದ್ದೇಶದಿಂದ 16 ನಗರ ಹೊಸ ಬಸ್‌ಗಳಿಗೆ ಚಾಲನೆ ನೀಡಲಾಗಿದ್ದು, ಇದರಿಂದ ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ರಾಯಚೂರು ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ ಎಸ್. ಪಾಟೀಲ್ ಅವರು ಹೇಳಿದರು.
ಶುಕ್ರವಾರ ನಗರದ ಕೆ.ಕೆ.ಆರ್.ಟಿ.ಸಿ ಮೂರನೇ ಘಟಕದಲ್ಲಿ ಹಮ್ಮಿಿಕೊಳ್ಳಲಾಗಿದ್ದ 16 ನಗರ ಸಾರಿಗೆ ಬಸ್ಸುಗಳಿಗೆ ಪೂಜಾ ಕಾರ್ಯಕ್ರಮಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಕಲ್ಯಾಾಣ ಕರ್ನಾಟಕ ರಸ್ತೆೆ ಸಾರಿಗೆ ನಿಗಮವು ನಗರ ಸಾರಿಗೆ ವ್ಯವಸ್ಥೆೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮೆ॥ ಟಾಟಾ ಮೋಟಾರ್ಸ ತಯಾರಿಕೆಯ ಹೊಸ ನಗರ ಸಾರಿಗೆ ಬಸ್ಸಗಳನ್ನು ಸೇರ್ಪಡೆಗೊಳಿಸುತ್ತಿಿರುವುದು ಸಂತಸದ ಸಂಗತಿಯಾಗಿದೆ.
ಈ ಬಸ್‌ಗಳಿಗೆ 187 ಎಚ್.ಪಿ. ಸಾಮರ್ಥ್ಯದ ಬಿಎಸ್-6 ಎಂಜಿನ್‌ಗಳನ್ನು ಅಳವಡಿಸಲಾಗಿದ್ದು, ಈ ಬಸ್‌ಗಳನ್ನು ಆಟೋಮೋಟಿವ್ ಇಂಡಸ್ಟ್ರಿಿ ಸ್ಟ್ಯಾಾಂಡರ್ಡ- ಎಐಎಸ್-052 ಬಸ್ ಕೋಡ್ ನಂತೆ ನಿರ್ಮಿಸಲಾಗಿದೆ. ಈ ಬಸ್ ಗಳು 40 ಪ್ರಯಾಣಿಕ ಆಸನಗಳನ್ನು ಹೊಂದಿದ್ದು, ಎಲ್ಇಡಿ ಟ್ಯೂಬ್ ಲೈಟ್ ಅಳವಡಿಸುವುದರೊಂದಿಗೆ ಒಳಾಂಗಣವನ್ನು ಉತ್ತಮವಾಗಿ ವಿನ್ನಾಾನಿಸಗೊಳಿಸಲಾಗಿದೆ ಎಂದರು.
ಈ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟು ನಾಲ್ಕು ಸಿ.ಸಿ. ಕ್ಯಾಾಮೆರಾಗಳನ್ನು ಆಳವಡಿಸಿಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಸ್ವಯಂ ಚಾಲಿತ ಅಗ್ನಿಿ ನಂದಕ ಉಪಕರಣಗಳನ್ನು, ರಿವರ್ಸ್ ಪಾರ್ಕಿಂಗ್ ಅಲರಾಮ್ ವ್ಯವಸ್ಥೆೆ ಹಾಗೂ ಲೋಕೇಶನ್ ಟ್ರಾಾಕಿಂಗ್, ಪ್ಯಾಾನಿಕ್ ಬಟನಗಳನ್ನು ಅಳವಡಿಸಲಾದ. ಬಸ್‌ಗಳನ್ನು ಸರಿಯಾಗಿ ಉಪಯೋಗಿಸಬೇಕೆಂದು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ, ನೂತನ ಬಸ್‌ಗಳಲ್ಲಿ ಶಾಸಕರು ಸಂಚರಿಸಿ ಬಸ್‌ಗಳ ಗುಣಮಟ್ಟ ಪರೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ರವಿ ಜಲ್ದಾಾರ್, ರಾಯಚೂರು ವಿಭಾಗದ ಸಂಚಾರಿ ಅಧಿಕಾರಿ ಚಂದ್ರಶೇಖರ ಕೆ.ಎಲ್., ವಿಭಾಗದ ತಾಂತ್ರಿಿಕ ಅಭಿಯಂತರರಾದ ನಾಗರಾಜ್ ವಾರದ್, ಆಡಳಿತ ಅಧಿಕಾರಿ ದೇವರಾಜ್, ಡಿಪೋ ವ್ಯವಸ್ಥಾಾಪಕ ನಾನೇಗೌಡ, ಭದ್ರತಾ ಮತ್ತು ಜಾಗೃತಿ ಅಧಿಕಾರಿ ಶ್ರೀನಿವಾಸ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮುಖಂಡರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ