Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಪ್ತಗಿರಿ ಸಹಕಾರಿ ಸಂಘದ 25 ನೇ ವರ್ಷದ ವಾರ್ಷಿಕೋತ್ಸವ 20 ರೂ.ಗೆ ವೈದ್ಯಕೀಯ ಸೇವೆ ಶ್ಲಾಘನೀಯ - ಹಿರೇಮಠ

 ಸುದ್ದಿಮೂಲ ವಾರ್ತೆ ಸಿಂಧನೂರು, ೆ.08:
ಸಹಕಾರಿ ಸಂಘಗಳು ಹಣಕಾಸಿನ ವ್ಯವಹಾರದ ಜೊತೆಗೆ ಸಾಮಾಜಿಕ ಸೇವೆಗಳನ್ನು ಮಾಡಬೇಕಿದೆ. ಸಪ್ತಗಿರಿ ಸೌಹಾರ್ದ ಸಹಕಾರಿಯು ಕೇವಲ 20 ರೂ.ಗಳಿಗೆ ವೈದ್ಯಕೀಯ ತಪಾಸಣಾ ಸೇವೆಗೆ ಮುಂದಾಗಿರುವದು ಶ್ಲಾಾಘನೀಯವಾಗಿದೆ ಎಂದು ವಿಕಾಸ ಕೋ-ಅಪರೇಟಿವ್ ಬ್ಯಾಾಂಕಿನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು.
ನಗರದ ಬಸವ ವೃತ್ತದಲ್ಲಿ ರವಿವಾರ ಸಪ್ತಗಿರಿ ಸೌಹಾರ್ದ ಸಹಕಾರಿ ಸಂಘವು ಭಾರತಿ ಮೆಡಿಕಲ್ ಹಾಗೂ ಜನರಲ್ ಸ್ಟೋೋರ್‌ಸ್‌ ಸಹಕಾರದೊಂದಿಗೆ 20 ರೂ.ಗಳಿಗೆ ವೈದ್ಯಕೀಯ ತಪಾಸಣೆ ಮಾಡುವ ಸಪ್ತಗಿರಿ ಕ್ಲಿಿನಿಕ್ ಉದ್ಘಾಾಟಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ಕೇವಲ ಸಾಲ ನೀಡುವದು, ವಸೂಲಾತಿ ಮಾಡುವದು ಕೆಲಸವಲ್ಲ. ಸದಸ್ಯರಿಗೆ ಅನುಕೂಲ ಕಲ್ಪಿಿಸುವ ನಿಟ್ಟಿಿನಲ್ಲಿ ವಿಭಿನ್ನವಾದ ಆಲೋಚನೆಗಳೊಂದಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಸೇವೆ ಒದಗಿಸಬೇಕು. ಆ ನಿಟ್ಟಿಿನಲ್ಲಿ ಸಪ್ತಗಿರಿ ಸಹಕಾರಿಯು ಮಹತ್ವದ ಹೆಜ್ಜೆೆಯಿಟ್ಟಿಿದೆ. ಆರೋಗ್ಯ ತಪಾಸಣೆ ದುಬಾರಿಯಾಗುತ್ತಿಿರುವ ಕಾಲಘಟ್ಟದಲ್ಲಿ ಬಡವರಿಗೆ, ಸದಸ್ಯರಿಗೆ ಅನುಕೂಲ ಕಲ್ಪಿಿಸಲು ಕೇವಲ 20 ರೂ.ಗಳಿಗೆ ವೈದ್ಯಕೀಯ ಸೇವೆ ನೀಡುತ್ತಿಿರುವದು ಅತ್ಯುತ್ತಮ ಕಾರ್ಯವಾಗಿದೆ ಎಂದರು.
ಸಹಕಾರಿಯ ಅಧ್ಯಕ್ಷ ವೈ.ನಾಗರಾಜ ಶ್ರೇೇಷ್ಠಿಿ ಮಾತನಾಡಿ, ನಮ್ಮ ಸಹಕಾರಿಯು ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಪರಿಶ್ರಮದಿಂದ 25 ವರ್ಷಕ್ಕೆೆ ಕಾಲಿಟ್ಟಿಿದ್ದು, ಇದರ ಭಾಗವಾಗಿ ಸಪ್ತಗಿರಿ ಕ್ಲಿಿನಿಕ್ ಅರಂಭಿಸುತ್ತಿಿದ್ದೇವೆ. ಎಂಬಿಬಿಎಸ್ ವೈದ್ಯರಾದ ಡಾ.ಪಾಂಡುರಂಗ ಶೆಟ್ಟಿಿ ಅವರು ವೈದ್ಯಕೀಯ ತಪಾಸಣೆಯನ್ನು ನಿತ್ಯವೂ ಬೆಳಗ್ಗೆೆ 10 ಗಂಟೆಯಿಂದ ಮಧ್ಯಾಾಹ್ನ 2 ಗಂಟೆಯವರೆಗೆ ಲಭ್ಯವಿದ್ದು, ಸೇವೆ ನೀಡುವರು. ಇದರ ಲಾಭ ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಡಾ.ಇ.ಪಾಂಡುರಂಗ ಶೆಟ್ಟಿಿ, ಸಹಕಾರಿಯ ಸಂಸ್ಥಾಾಪಕ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಉಪಾಧ್ಯಕ್ಷ ಯಲ್ಲಪ್ಪ ಜಂತ್ಲಿಿ, ಸಿಇಓ ಆನಂದ ಕೆ ಸೇರಿದಂತೆ ನಿರ್ದೇಶಕರು ಹಾಗೂ ಇತರರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ