Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈಡಿಗ-ಬಿಲ್ಲವರ ಶಕ್ತಿ ಪ್ರದರ್ಶನ, ಸಚಿವ ಶಿವರಾಜ್ ತಂಗಡಗಿ ಸಂಧಾನ ಡಾ.ಪ್ರಣವಾನಂದಶ್ರೀ ನೇತೃತ್ವದ ಐವರ ನಿಯೋಗ ಸಿಎಂ ಭೇಟಿ ನಿರ್ಧಾರ

ಸುದ್ದಿಮೂಲ ವಾರ್ತೆ ಬೆಂಗಳೂರು, ೆ.13:
ಡಾ.ಪ್ರಣವಾನಂದ ಶ್ರೀಗಳ ಏಳುನೂರು ಕಿಲೋಮೀಟರ್ ಪಾದಯಾತ್ರೆೆಗೆ ರಾಜ್ಯ ಸರ್ಕಾರ ಸ್ಪಂದನೆ ನೀಡಿ ೆ.28ರ ವರೆಗೆ ಮುಖ್ಯಮಂತ್ರಿಿಗಳ ಜೊತೆ ಮಾತುಕತೆಗೆ ವ್ಯವಸ್ಥೆೆ ಮಾಡುವುದಾಗಿ ಮುಖ್ಯಮಂತ್ರಿಿಗಳ ನಿರ್ದೇಶನದಂತೆ ಮುಷ್ಕರ ಸ್ಥಳಕ್ಕೆೆ ಆಗಮಿಸಿದ ರಾಜ್ಯದ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು. ಈ ಹಿನ್ನೆೆಲೆಯಲ್ಲಿ ಸುದೀರ್ಘ 38 ದಿನಗಳ ಪಾದಯಾತ್ರೆೆ ಅಂತ್ಯಗೊಂಡಿದೆ.
ಜ.6ರಿಂದ ಕಲಬುರಗಿ ಜಿಲ್ಲೆಯ ಚಿತ್ತಾಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಿಪೀಠದಿಂದ ಆರಂಭಿಸಿದ ಪಾದಯಾತ್ರೆೆ 708 ಕಿ.ಮೀ 38 ದಿನಗಳಲ್ಲಿ ಕ್ರಮಿಸಿ ೆ.12ರಂದು ಇಲ್ಲಿನ ಫ್ರೀಡಂ ಪಾರ್ಕ್‌ಗೆ ಆಗಮಿಸಿ ಈಡಿಗ-ಬಿಲ್ಲವ ಸೇರಿದಂತೆ 26 ಪಂಗಡಗಳ ಶಕ್ತಿಿ ಪ್ರದರ್ಶನದಲ್ಲಿ ಸ್ವಾಾಮೀಜಿ ಅವರ ಜೊತೆ ಸಚಿವ ತಂಗಡಗಿಯವರು ಮುಖ್ಯಮಂತ್ರಿಿಗಳು ನೀಡಿದ ನಿರ್ದೇಶನದಂತೆ ಎರಡು ಬಾರಿ ಸಂಧಾನ ನಡೆಸಿ, ಸ್ವಾಾಮೀಜಿಗಳು ಮುಂದಿಟ್ಟ18 ಬೇಡಿಕೆಗಳಲ್ಲಿ ಆರು ಬೇಡಿಕೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ಸೂತ್ರ ಕಂಡುಕೊಳ್ಳಲಾಯಿತು.
ೆ.28ರ ಒಳಗೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಜೊತೆಗೆ ಡಾ.ಪ್ರಣವಾನಂದ ಶ್ರೀ ನೇತೃತ್ವದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಎಚ್.ಆರ್.ಶ್ರೀನಾಥ್ ಸೇರಿದಂತೆ ಐದು ಜನರ ನಿಯೋಗ ಕೊಂಡೊಯ್ಯಲು ಜವಾಬ್ದಾಾರಿ ನಿರ್ವಹಿಸುವುದಾಗಿ ಸಚಿವ ತಂಗಡಗಿ ಹೇಳಿದರು. ನಂತರ ಸ್ವಾಾಮೀಜಿಯವರಿಗೆ ಸಚಿವ ತಂಗಡಗಿಯವರು ಬುಧವಾರ ಮಧ್ಯರಾತ್ರಿಿಯಿಂದ ಉಪವಾಸ ಧರಣಿ ಮಾಡಿದ ಸ್ವಾಾಮೀಜಿಯವರಿಗೆ ಎಳನೀರು ಕುಡಿಸಿ ಹೋರಾಟ ಸುಖಾಂತ್ಯಗೊಳಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಾಮಿ, ಸುನಿಲ್ ಕುಮಾರ್ ಮುಷ್ಕರ ಸ್ಥಳಕ್ಕೆೆ ಭೇಟಿ ನೀಡಿ ಬೆಂಬಲ ನೀಡಿದರು. ಅತಿ ಹಿಂದುಳಿದ ಸಮುದಾಯದ ಬಸವನಾಗಿ ದೇವ ಶರಣರು ಛಲವಾದಿ ಮಠ, ಶ್ರೀ ಶರಣಬಸವ ವೇದಪ್ರಕಾಶ ಸ್ವಾಾಮೀಜಿ, ಮಾದರ ಸಮುದಾಯದ ಶಿವಮೂರ್ತಿ ಶರಣರು, ವಿಶ್ವಕರ್ಮ ಮಠದ ದೊಡ್ಡೆೆಂದ್ರ ಸ್ವಾಾಮೀಜಿ, ಮುಖಂಡರಾದ ಎಚ್.ಆರ್.ಶ್ರೀನಾಥ್, ಮಾಲಿಕಯ್ಯ ಗುತ್ತೇದಾರ್, ಸತೀಶ್ ಗುತ್ತೇದಾರ್, ಬಾಲರಾಜ್ ಗುತ್ತೇದಾರ್, ವೆಂಕಟೇಶ್ ಕಡೇಚೂರ್, ವೆಂಕಟೇಶ್ ಗುಂಡಾನೂರು, ಮಹಾದೇವ ಗುತ್ತೇದಾರ್, ಡಾಕ್ಟರ್ ರಾಜಶೇಖರ ಸೇಡಂಕರ್, ಪ್ರವೀಣ್ ಗುತ್ತೇದಾರ್, ರಾಜೇಶ್ ಗುತ್ತೇದಾರ್, ಪ್ರವೀಣ ಜತ್ತನ್, ಡಾ.ಸದಾನಂದ ಪೆಲರ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ