Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಾನಂದಪುರಿ ಮಹಾಸ್ವಾಮಿಗಳಿಗೆ ನುಡಿನಮನ ಕಾರ್ಯಕ್ರಮ ಶ್ರೀಗಳ ವಿಚಾರಗಳು ದಾರಿದೀಪವಾಗಲಿ : ಕೆ.ವಿರೂಪಾಕ್ಷಪ್ಪ

ಸುದ್ದಿಮೂಲ ವಾರ್ತೆ ಸಿಂಧನೂರು, ಜ.22:
ಕನಕದಾಸರ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಜ್ಞಾಾನದ ಬೆಳಕು ಹರಿಸಿ ಕತ್ತಲೆಯನ್ನು ಕಳೆಯಲು ಸಾಕಷ್ಟು ಶ್ರಮಿಸಿದ. ಶ್ರೀ ಸಿದ್ದರಾಮಾನಂದಪುರಿ ಸ್ವಾಾಮಿಗಳು ಗುರಿಮುಟ್ಟುವ ಸಮಯದಲ್ಲಿ ನಮ್ಮನ್ನು ಅಗಲಿದ್ದಾಾರೆ. ಅವರ ವಿಚಾರಧಾರೆಗಳು ನಮಗೆ ದಾರಿದೀಪವಾಗಬೇಕಿದೆ ಎಂದು ಮಾಜಿ ಸಂಸದ, ಹಾಲುಮತ ಸಮಾಜದ ಹಿರಿಯ ಮುಖಂಡ ಕೆ.ವಿರೂಪಾಕ್ಷಪ್ಪ ಹೇಳಿದರು.
ಅವರು ನಗರದ ಕನಕದಾಸ ಕಲ್ಯಾಾಣ ಮಂಟಪದಲ್ಲಿ ಹಾಲುಮತ ಸಮಾಜದಿಂದ ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದಪುರಿ ಮಹಾಸ್ವಾಾಮೀಜಿ ನಿಧನದ ಹಿನ್ನಲೆಯಲ್ಲಿ ಹಮ್ಮಿಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಗಳು ಸಮಾಜಕ್ಕೆೆ ಜ್ಞಾಾನದ ಬೆಳಕು ನೀಡಿದವರು. ಶ್ರೀಗಳ ಅಗಲಿಕೆ ಆಕಸ್ಮಿಿಕ. 20 ವರ್ಷಗಳಲ್ಲಿ ಜನರಲ್ಲಿ ಬಿತ್ತಿಿದ ವಿಚಾರ, ರಾಜ್ಯದೆಲ್ಲೆೆಡೆ ಹಾಲುಮತ ಸಂಸ್ಕೃತಿ ಎತ್ತಿಿಹಿಡಿದ ಶ್ರೀಗಳು, ಮೌಢ್ಯತೆ ಕಳಚಲು ಸಾಕಷ್ಟ ಶ್ರಮಿಸಿದರು. ಮುಂದಿನ ದಿನಗಳಲ್ಲಿ ಮಠ ಮುನ್ನಡೆಸಲು ಎಲ್ಲರ ಶ್ರಮ ಅಗತ್ಯವಾಗಿದೆ ಎಂದರು.
ಬಿಜೆಪಿ ಮುಖಂಡ ಕೆ.ಕರಿಯಪ್ಪ ಮಾತನಾಡಿ, ಹುಟ್ಟು ಆಕಸ್ಮಿಿಕ ಸಾವು ಖಚಿತ. ಶ್ರೀಗಳು ಸ್ವರ್ಗಕ್ಕೆೆ ಹೋಗಿದ್ದಾಾರೆ. ಕನಕದಾಸರ ವಿಚಾರಗಳನ್ನು ಜನಮನಗಳಿಗೆ ಮುಟ್ಟಿಿಸಿದ ಶ್ರೀಗಳ ಕಾರ್ಯ ಶ್ಲಾಾಘನೀಯ. ಬೇರೆಯವರಿಗೆ ನಾವು ದಾರಿದೀಪವಾಗಬೇಕು ಎಂಬುವುದು ಶ್ರೀಗಳು ನಮಗೆ ಕಲಿಸಿಕೊಟ್ಟಿಿದ್ದಾಾರೆ. ಶ್ರೀಗಳು ಎಲ್ಲಾಾ ಕಷ್ಟ, ಸಮಸ್ಯೆೆಗಳನ್ನು ಮೆಟ್ಟಿಿನಿಂತು ಜೀವನ ನಡೆಸಿದವರು. ಅವರು ನಮ್ಮನ್ನು ದೈಹಿಕವಾಗಿ ಅಗಲಿದ್ದಾಾರೆ. ಮಾನಸಿಕವಾಗಿ ನಮ್ಮ ಜೊತೆಗೆ ಇದ್ದಾಾರೆ. ಸಮಾಜ ಏಳಿಗೆಗೆ ಅವರು ಜೀವನ ಮುಡಿಪಾಗಿಟ್ಟಿಿದ್ದರು. ಶ್ರೀಗಳು ಕುರುಬ ಸಮಾಜಕ್ಕೆೆ ಮಾತ್ರ ಸೀಮಿತವಾಗಲಿಲ್ಲ, ಎಲ್ಲಾಾ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಎಲ್ಲರೂ ಒಂದಾಗಿ ಬಾಳೋಣ ಎಂದು ಸಾಮರಸ್ಯದ ಬದುಕು ತೋರಿಸಿ ಕೊಟ್ಟವರು ಎಂದು ನೆನಪಿಸಿಕೊಂಡರು.
ಹಿರಿಯ ಪತ್ರಕರ್ತ ಡಿ.ಹೆಚ್.ಕಂಬಳಿ ಮಾತನಾಡಿ, ಕುರುಬರಿಗೆ ಹಿನ್ನೆೆಲೆ ಇದೆ. ಶೋಷಿತರಿಗೆ ದಾರಿ ತೋರಿಸಿದವರು. ಸಿದ್ದರಾಮಾನಂದಪುರಿ ಶ್ರೀಗಳ ಎಲ್ಲಿ ಹುಟ್ಟು.. ಎಲ್ಲಿ ಸಾವು. ಹುಟ್ಟು ಸಾವುಗಳು ಮಧ್ಯೆೆ ಅವರ ಜೀವನ ಸಾಧಿಸಿದರು. ಹಣೆ ತುಂಬಾ ಬಂಡಾರ ಹಚ್ಚುವ ಸಂಸ್ಕೃತಿ ಕಲಿಸಿದ್ದು ಶ್ರೀಗಳು. ಸಮಾಜದಲ್ಲಿ ಹೊಸದನ್ನು ಹುಡುಕುವವರು ಸಾಧನೆ ಮಾಡಿದ್ದಾಾರೆ. ಕುರುಬ ಸಮಾಜ ಶೈಕ್ಷಣಿಕ ಜಾಗೃತಿ ಮೂಡಿಸಬೇಕು. ಶ್ರೀಗಳ ಆಲೋಚನೆಗಳನ್ನು ಮೈಗೂಡಿಸಿಕೊಳ್ಳೋೋಣ ಎಂದರು.
ಈ ಕಾರ್ಯಕ್ರಮದಲ್ಲಿ ತುರ್ವಿಹಾಳದ ಅಮೋಘ ಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್, ಚಿದಾನಂದಯ್ಯ ಗುರುವಿನ್, ಬೀರಪ್ಪ ಪೂಜಾರಿ ರೌವುಡಕುಂದ, ಸಿದ್ದರಾಮಯ್ಯ ಗುರುವಿನ್, ಸಿದ್ದಪ್ಪ ಪೂಜಾರಿ, ಹುಚ್ಚಪ್ಪ ಪೂಜಾರಿ, ಕನಕ ಗುರುಪೀಠದ ಅಧ್ಯಕ್ಷ ಅಮರೇಶಪ್ಪ ಮೈಲಾರ, ಕುರುಬ ಸಮಾಜದ ಅಧ್ಯಕ್ಷ ಭೀಮಣ್ಣ ವಕೀಲ, ಪ್ರಧಾನ ಕಾರ್ಯದರ್ಶಿ ಸುರೇಶ್ ಹಚ್ಚೊೊಳ್ಳಿಿ, ಭೀಮಣ್ಣ ಸಂಗಟಿ, ಬಸವರಾಜ ಮಸ್ಕಿಿ, ಮಲ್ಲನಗೌಡ ಸುಂಕನೂರು, ಬಸವರಾಜ್ ಮ್ಯಾಾಗಡಿ, ಶೇಖರಗೌಡ ದೇವರಮನಿ, ನಾಗವೇಣಿ ಪಾಟೀಲ್, ನಿರೂಪಾದೆಪ್ಪ ವಕೀಲ, ಕೀರಪ್ಪ ಬಾಗೋಡಿ, ವಿ.ಬಸವರಾಜ್, ಬಸವರಾಜ್ ಗೋಡಿಹಾಳ, ವಸಂತ್ ಕುಮಾರ್ ಭಂಗಿ, ಹನುಮೇಶ್ ಬಾಗೋಡಿ, ನಾಗರಾಜ್ ಬಾದರ್ಲಿ, ಮಲ್ಲಪ್ಪ ಮೈಲಾರ, ಟಿ.ಶಿವು ಸೇರಿದಂತೆ ಅನೇಕರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ