Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಧಾನ ಪರಿಷತ್‌ನಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ 6395 ಆನೆ, 563 ಹುಲಿಗಳು : ಸಚಿವ ಈಶ್ವರ್ ಖಂಡ್ರೆ

 ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.16:
ಾಜ್ಯದಲ್ಲಿರುವ ವನ್ಯ ಜೀವಿಧಾಮಗಳು ಮತ್ತು ರಾಷ್ಟ್ರೀಯ ಉದ್ಯಾಾನವನಗಳಲ್ಲಿ ಗಣತಿಯಂತೆ ಒಟ್ಟು 6395 ಆನೆಗಳು ಮತ್ತು 563 ಹುಲಿಗಳಿವೆ ಎಂದು ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆೆ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಸದಸ್ಯ ಡಾ. ತಿಮ್ಮಯ್ಯ ಅವರ ಚುಕ್ಕೆೆ ಗುರುತಿನ ಪ್ರಶ್ನೆೆಗೆ ಉತ್ತರಿಸಿದ್ದಾರೆ.
ವನ್ಯ ಜೀವಿಗಳು ಅರಣ್ಯ ಪ್ರದೇಶದಿಂದ ಹೊರ ಬರುವುದನ್ನು ತಡೆಗಟ್ಟಲು ಮಾನವ ಪ್ರಾಾಣಹಾನಿಗೆ ಕಾರಣವಾದ ಹುಲಿ ಹಾಗೂ ಆನೆಯನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆಹಿಡಿಯಲಾಗಿರುತ್ತದೆ.
ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳು ಹೆಚ್ಚಾಾಗಿ ಕಂಡು ಬರುತ್ತಿಿರುವ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿಿರುವ ಕಳ್ಳಬೇಟೆ ಶಿಬಿರಗಳ ಸಿಬ್ಬಂದಿಗಳನ್ನು ತಾತ್ಕಾಾಲಿಕವಾಗಿ ಸಂಘರ್ಷ ಸಂಭವಿಸುತ್ತಿಿರುವ ಅರಣ್ಯದಂಚಿನ ಗಡಿರೇಖೆಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿರುತ್ತದೆ. ಶಿಬಿರದಲ್ಲಿ ಕಾರ್ಯ ನಿರ್ವಹಿಸುತ್ತಿಿರುವ ನೌಕರರು ಸಂಘರ್ಷವಿರುವ ವಲಯಗಳಲ್ಲಿ ನಿರಂತರವಾಗಿ ಮುಂದಿನ ಮೂರು ತಿಂಗಳವರೆಗೆ ಗಸ್ತು ನಡೆಸಿ, ಮಾನವ ವನ್ಯಪ್ರಾಾಣಿ ಸಂಘರ್ಷವನ್ನು ತಡೆಗಟ್ಟಲು ಕ್ರಮವಹಿಸಲಾಗಿದೆ.
ಮಾನವ-ವನ್ಯಜೀವಿ ಸಂಘರ್ಷ ಸಮಸ್ಯೆೆ ಇರುವ ಪ್ರತಿಯೊಂದು ವನ್ಯಜೀವಿ’ ವಲಯಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಉಂಟಾಗುವ ಸಂದರ್ಭದಲ್ಲಿ ತಕ್ಷಣದ ಪ್ರತಿಕ್ರಿಿಯೆಗಾಗಿ ಕ್ಷಿಪ್ರ ಸ್ಪಂದನ ವಾಹನ ಹಾಗೂ ಡ್ರೋೋನ್ ಒಳಗೊಂಡಂತೆ ಇತರೆ ಉಪಕರಣಗಳೊಂದಿಗೆ ಒಂದು ಕ್ಷಿಪ್ರಸ್ಪಂದನ ತಂಡವನ್ನು ಪಾಳಿ ಆಧಾರದ ಮೇಲೆ ರಚಿಸಿ, ಸದರಿ ಕ್ಷಿಪ್ರಸ್ಪಂದನ ತಂಡಕ್ಕೆೆ ಪ್ರಸ್ತುತ ಸಿಬ್ಬಂದಿಗಳನ್ನು ಅಸ್ತಿಿತ್ವದಲ್ಲಿರುವ ಆನೆ ಕಾರ್ಯಪಡೆ ಕ್ಷಿಪ್ರ ಸ್ಪಂದನ ತಂಡ, ವಿಶೇಷ ಹುಲಿ ಸಂರಕ್ಷಣಾ ದಳದಿಂದ ನಿಯೋಜಿಸಲಾಗಿದೆ.
ಮಾನವ ವನ್ಯಜೀವಿ ಸಂಘರ್ಷವಿರುವ ವನ್ಯಜೀವಿ ವಲಯಗಳ ಸಂಪೂರ್ಣ ಗಡಿರೇಖೆಗಳಲ್ಲಿ ಎಲ್ಲೆಲ್ಲಿ ನೆಟ್ ವರ್ಕ್ ನ ಸಂಪರ್ಕವಿರುವುದು ಅಲ್ಲಿ ಜಿಎಸ್ಎಂ ತಂತ್ರಾಾಂಶ ಅಳವಡಿಸಿ, ಸದರಿ ಮಾಹಿತಿಯನ್ನಾಾಧರಿಸಿ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣದ ನಿರ್ವಹಣೆಯನ್ನು ಮಾಡಲಾಗುತ್ತಿಿದೆ.
ಜೊತೆಗೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಲಭ್ಯವಿರುವ ಕ್ಯಾಾಮರಾ ಟ್ರಾಾಪ್ ಗಳನ್ನು ಸಾಕಷ್ಟು ಸಂಖ್ಯೆೆಯಲ್ಲಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ವಸತಿ ಪ್ರದೇಶಗಳಲ್ಲಿ ಅಳವಡಿಸಿ ಪ್ರಾಾಣಿಗಳ ಚಲನವಲನಗಳನ್ನು ಪರಿಶೀಲಿಸಲಾಗುತ್ತಿಿದೆ.
ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿಿ ಬೇಲಿ ನಿರ್ಮಾಣ/ನಿರ್ವಹಣೆ, ಆನೆತಡೆ ಕಂದಕ ನಿರ್ಮಾಣ, ನಿರ್ವಹಣೆ ಮಾಡಲಾಗಿದ್ದು ಮತ್ತು ರೈಲ್ವೆೆ ಹಳಿಗಳನ್ನು ಉಪಯೋಗಿಸಿ ಬ್ಯಾಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಮಾನವ ಆನೆ ಸಂಘರ್ಷ ಹೆಚ್ಚಾಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಯಲು ಉಪಯೋಗಿಸಿದ ರೈಲ್ವೇ ಹಳಿಗಳನ್ನು ಬಳಸಿಕೊಂಡು ಬ್ಯಾಾರಿಕೇಡ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿಿದ್ದು, ಒಟ್ಟು 428 ಕಿ.ಮೀ ರೈಲ್ವೆೆ ಬ್ಯಾಾರಿಕೇಡ್ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆನೆ ಕಾರ್ಯಪಡೆ ಮತ್ತು ಚಿರತೆ ಕಾರ್ಯಪಡೆಗಳನ್ನು ರಚಿಸಿದ್ದು, ವನ್ಯ ಪ್ರಾಾಣಿಗಳಿಗಾಗಿ ಅರಣ್ಯ ಪ್ರದೇಶದ ಒಳಗೆ ಜಲ ಸಂಪನ್ಮೂಲಗಳು ಮತ್ತು ಆವಾಸ ಸ್ಥಾಾನ ಗಳನ್ನು ಅಭಿವೃದ್ಧಿಿ ಪಡಿಸಲಾಗುತ್ತಿಿದ್ದು, ತಂತ್ರಜ್ಞಾನ ಗಳ ಬಳಕೆಯ ಮೂಲಕ ತ್ವರಿತ ಕಾರ್ಯಚರಣೆ ಕೈಗೊಳ್ಳಲಾಗುತ್ತಿಿದ್ದು, ಸಂಘರ್ಷ ತಡೆಗಟ್ಟಲು 5 ವರ್ಷ ಗಳ ಸ್ಟ್ರಾಾಟೆಜಿಕ್ ಪ್ಲಾಾನ್ ತಯಾರಿಸುವ ಪ್ರಸ್ತಾಾವನೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ