Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಶಾಂತ ಸಂತ ಶಾಂತರಸ ಕೃತಿ ಬಿಡುಗಡೆ ಸಾಹಿತ್ಯದ ವಿಭಿನ್ನ ಪ್ರಯೋಗಕ್ಕೆ ಒತ್ತು ಕೊಟ್ಟ ಸಂತ- ಪ್ರೊ.ಕೆಳಗಿನಮನಿ

ಸುದ್ದಿಮೂಲ ವಾರ್ತೆ ರಾಯಚೂರು, ೆ.08:
ಸಮಾಜದಲ್ಲಿರುವ ಅಂದಿನ ಅಂಕು ಡೊಂಕುಗಳನ್ನು ಎತ್ತಿಿ ತೋರಿಸುತ್ತಲೆ ಎಲ್ಲ ಕಾಲದ ಸಾಹಿತ್ಯ ಪ್ರಕಾರವನ್ನು ಅವಲೋಕಿಸಿ ಕಟ್ಟಲ್ಪಟ್ಟ ಚರಿತ್ರೆೆ ನಿಜವಾದ ಚರಿತ್ರೆೆಯಲ್ಲ ಈ ಹಿನ್ನಲೆಯಲ್ಲಿ ವಿಭಿನ್ನ ಪ್ರಯೋಗದ ಮೂಲಕ ಸಾಹಿತ್ಯ ನೀಡಿದ ಶ್ರೇಷ್ಠ ಸಂತ ಶಾಂತರಸರು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದ ಕುಲಪತಿ ಪ್ರೊೊಘಿ. ಶಿವಾನಂದ ಕೆಳಗಿನಮನಿ ಹೇಳಿದರು.
ನಗರದ ಎಸ್‌ಆರ್‌ಕೆ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಲೋಹಿಯಾ ಪ್ರತಿಷ್ಠಾಾನ ಹಾಗೂ ರಂಗಸಂಗಮ ಕಲಾ ವೇದಿಕೆ ಕಲಬುರಗಿ ಸಂಯುಕ್ತಾಾಶ್ರಯದಲ್ಲಿ ಡಾ. ಸುಜಾತ ಜಂಗಮಶೆಟ್ಟಿಿ ಸಂಪಾದಿತ ಅಶಾಂತ ಸಂತ ಶಾಂತರಸ ಬದುಕು ಬರಹ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಸೃಜನಶೀಲ, ಸೃಜನೇತರ, ಹೋರಾಟ, ಸಂಪಾದನೆ, ಸಂಶೋಧನೆ ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು ಶಾಂತರಸರು. ತುಂಬಾ ಕಷ್ಟದ ಪರಿಸ್ಥಿಿತಿಯಲ್ಲಿ ಅವರ ಕಥೆಗಳುರಚಿಸಿದರು. ಈ ಭಾಗದ ಜನ ಎಷ್ಟು ಕಷ್ಟಕ್ಕೆೆ ಒಳಗಾಗಿದ್ದರು ಎಂಬುದನ್ನು ಗಮನಿಸಬಹುದು ಎಂದರು.
ಪುನರುತ್ಥಾಾನದ ಕವಿಯಾಗಿ ಕಾಣಿಸಿಕೊಂಡ ಶಾಂತರಸರು ಉರ್ದು ವಿನ ಬಾರಾಮಾಸ ಕೃತಿ ಕನ್ನಡಕ್ಕೆೆ ತಂದರು. ಜೀವನ ಸಂಸ್ಕೃತಿ, ಬೆಳಗಿನ ವಿಚಾರ, ಕಾವ್ಯ ಕನ್ನಡಕ್ಕೆೆ ಕೊಟ್ಟ ಕೀರ್ತಿ ಶಾಂತರಸರಿಗೆ ಸಲ್ಲುತ್ತದೆ. ಹಾಗಾಗಿ ಇವತ್ತಿಿಗೂ ಶಾಂತರಸರ ಚಿಂತನೆಗಳನ್ನು ಮತ್ತೆೆ ಮತ್ತೆೆ ನಾವು ಪುನರ್ ಪರಿಶೀಲನೆ ಮಾಡಬೇಕಾಗಿದೆ. ರಾಯಚೂರಿನ ಕವಿಗಳನ್ನು ಗುರುತಿಸುವ ಮಲ್ಲಿಗೆ ಮಾರನ್ನು ಹೊರ ತರುವುದರ ಮೂಲಕ ಸ್ಥಳೀಯರಿಗೆ ಹೆಚ್ಚಿಿನ ಆದ್ಯತೆ ನೀಡಿದವರು ಎಂದರು.
ಪರಿಷತ್ತಿಿನ ನಿಕಟಪೂರ್ವ ಅಧ್ಯಕ್ಷ ಬಸವ ಪ್ರಭು ಪಾಟೀಲ್ ಬೆಟ್ಟದೂರು ಮಾತನಾಡಿ ಶಾಂತರಸರ ಜೊತೆಗಿನ ಸವಿನೆನಪುಗಳನ್ನು ಹಂಚಿಕೊಂಡ ಅವರು ಈ ಕೃತಿ ಈ ಭಾಗದ ಸಾಹಿತ್ಯ, ಸಂಗೀತ ಗುರುತಿಸುವ ಅದ್ಭುತವಾದ ಕೃತಿಯಾಗಿದೆ. ಎಲ್ಲರೂ ಕೃತಿಯನ್ನ ಓದಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ, ಸರಳ ವ್ಯಕ್ತಿಿತ್ವದ ಶಾಂತರಸರು ಅನೇಕ ಕೃತಿಗಳ ರಚಿಸಿ ಸಾಮಾಜಿಕ ಸಮಸ್ಯೆೆಗಳನ್ನು ತಮ್ಮ ಕಥೆಗಳಲ್ಲಿ ಅಭಿವ್ಯಕ್ತಿಿಸುವ ಮೂಲಕ ಪ್ರತಿಭಟಿಸಿದವರು ಎಂದು ತಿಳಿಸಿದರು.
ಸಾಹಿತಿ ವೀರಹನುಮಾನ, ಹೋರಾಟಗಾರ ಡಾ. ಬಸವರಾಜ ಕಳಸ, ಕೃತಿಯ ಪ್ರಧಾನ ಸಂಪಾದಕರಾದ ಎಚ್.ಎಸ್. ಬಸವ ಪ್ರಭು, ಕೃತಿಯ ಸಂಪಾದಕಿ ಸುಜಾತ ಜಂಗಮಶೆಟ್ಟಿಿ, ಕರ್ನಾಟಕ ವಿಕಾಸ ರಂಗ ಜಿಲ್ಲಾಧ್ಯಕ್ಷ ಭೀಮನಗೌಡ ಇಟಗಿ, ಬೆಂಗಳೂರಿನ ವೀಣಾ ದೇವರಾಜ, ಗದಗಿನ ಭಾರತಿ ಮೋಹನಕೋಟಿ,ಎಸ್‌ಆರ್‌ಕೆ ಶಿಕ್ಷಣ ಮಹಾವಿದ್ಯಾಾಲಯದ ಪ್ರಾಾಂಶುಪಾಲ ಬಿ.ಎಂ.ವಿರೂಪಾಕ್ಷಿ, ತಾಯಪ್ಪ ಹೊಸೂರು ಇದ್ದರು.
ತಾಲೂಕು ಗೌರವ ಕಾರ್ಯದರ್ಶಿ ಪ್ರತಿಭಾ ಗೋನಾಳ ನಿರೂಪಿಸಿದರೆ, ರಾವುತರಾವ್ ಬರೂರ ಅವರು ವಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ