Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಅಣೆಕಟ್ಟೆಗಳ ಸುರಕ್ಷತೆ ಈಗ ರಾಷ್ಟ್ರೀಯ ಭದ್ರತೆಯ ಅನಿವಾರ್ಯ

 ಸುದ್ದಿಮೂಲ ವಾರ್ತೆ ಬೆಂಗಳೂರು, ೆ.13:
ರಾಜ್ಯದಲ್ಲಿ ಶೇ.70ರಷ್ಟು ಅಣೆಕಟ್ಟುಗಳು 25 ವರ್ಷಗಳಿಗೂ ಮೇಲ್ಪಟ್ಟು ಹಳೆಯದಾಗಿದ್ದು, ಇವುಗಳ ವ್ಯವಸ್ಥಿಿತ ಸುರಕ್ಷತಾ ಮೌಲ್ಯಮಾಪನ ನಡೆಸಿ ಆಧುನೀಕರಣ ಮಾಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆೆಯ ಜೆ.ಜೆ.ಟಾಟಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದ ಉದ್ಘಾಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಣೆಕಟ್ಟುಗಳ ಅಪಾಯದ ಮುನ್ಸೂಚನೆ ಅರಿತು ಅದಕ್ಕೆೆ ಪೂರಕವಾದ ಕಾರ್ಯಾಚರಣೆಯನ್ನು ಕೈಗೊಳ್ಳುವ ತುರ್ತು ಇದೆ ಎಂದು ಹೇಳಿದರು.
ಪ್ರಸ್ತುತ ಹವಾಮಾನ ಬದಲಾವಣೆಯಿಂದ ಉಂಟಾಗುವ ನೀರಿನ ವೈಪರೀತ್ಯಗಳನ್ನು ನಾವು ಎದುರಿಸುತ್ತಿಿದ್ದೇವೆ. ಭೂಕಂಪನದ ಅಪಾಯಗಳು, ಜಲಾಶಯಗಳಲ್ಲಿ ಹೂಳು ಶೇಖರಣೆ, ಹಳೆಯ ಕಟ್ಟಡಗಳ ಮೇಲಿನ ಒತ್ತಡ - ಇವೆಲ್ಲಾ ಸಂಕೀರ್ಣ ಮತ್ತು ಪರಸ್ಪರ ಸಂಬಂಧಿತ ಅಪಾಯಗಳನ್ನು ಸೃಷ್ಟಿಿಸಿವೆ. ಅಣೆಕಟ್ಟು ಸುರಕ್ಷತೆ ಈಗ ಕೇವಲ ತಾಂತ್ರಿಿಕ ವಿಚಾರ ಅಲ್ಲ. ಅದು ರಾಷ್ಟ್ರೀಯ ಭದ್ರತೆಯ ಅನಿವಾರ್ಯ ಅಂಶವಾಗಿದೆ ಎಂದರು.
ಅಣೆಕಟ್ಟುಗಳು ಈಗ ಡಿಜಿಟಲ್ ವ್ಯವಸ್ಥೆೆಯಿಂದ ಕಾರ್ಯನಿರ್ವಹಿಸುತ್ತಿಿವೆ. ಹಾಗಾಗಿ ಸೈರ್ಬ ಸುರಕ್ಷತೆ ಮತ್ತು ತಾಂತ್ರಿಿಕ ವಿಧ್ವಂಸಕತೆಯಿಂದ ರಕ್ಷಣೆ ಒದಗಿಸುವುದು ರಾಷ್ಟ್ರೀಯ ಮೂಲಸೌಕರ್ಯ ಭದ್ರತೆಯ ಪ್ರಮುಖ ಅಂಶಗಳಾಗಿ ಪರಿಗಣಿಸಬೇಕಾಗಿದೆ. ನೀರಿನ ಪ್ರಮುಖ ಮೂಲಸೌಕರ್ಯಗಳು ಭಯೋತ್ಪಾಾದನೆ ಮತ್ತು ಕುತಂತ್ರಗಳಿಗೆ ತುತ್ತಾಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ನಿರಂತರ ಎಚ್ಚರಿಕೆ ಮತ್ತು ಗುಪ್ತಚರ ವ್ಯವಸ್ಥೆೆಗಳ ಅಗತ್ಯವಿದೆ ಎಂದು ಅಭಿಪ್ರಾಾಯಪಟ್ಟರು.
ಅಣೆಕಟ್ಟು ಸುರಕ್ಷತೆ ಎನ್ನುವುದು ಒಂದೇ ಇಲಾಖೆಯ ಜವಾಬ್ದಾಾರಿಯಲ್ಲ. ಇದು ಎಲ್ಲರೂ ಹಂಚಿಕೊಳ್ಳಬೇಕಾದ ರಾಷ್ಟ್ರೀಯ ಕರ್ತವ್ಯ. ಇದಕ್ಕೆೆ ಎಲ್ಲಾ ಸಂಸ್ಥೆೆಗಳ ಸಂಘಟಿತ ಕ್ರಮಗಳ ಅಗತ್ಯವಿದೆ. ಹವಾಮಾನ ಬದಲಾವಣೆ, ಎಂದೂ ಕಂಡರಿಯದ ಪ್ರವಾಹಗಳು, ದೀರ್ಘಕಾಲದ ಬರಗಾಲ, ಅನಿರೀಕ್ಷಿತ ನೀರಿನ ಹರಿವು - ಇವೆಲ್ಲಾ ಹಿಂದಿನ ಕಾಲದ ವಿನ್ಯಾಾಸದ ಅಂದಾಜುಗಳನ್ನೇ ತಿದ್ದಿ ಬರೆಯುವಂತೆ ಮಾಡಿವೆ.
ಹೂಳು ಶೇಖರಣೆ, ಪರಿಸರದ ಅವನತಿ, ಜಲಾಶಯಗಳಿಂದ ಉಂಟಾಗುವ ಪರಿಸರ ಬದಲಾವಣೆಗಳು - ಇವು ದೀರ್ಘಾವಧಿಯ ನೀರು ಸಂಗ್ರಹ ಸಾಮರ್ಥ್ಯಕ್ಕೆೆ ಮತ್ತು ನದಿಗಳ ಆರೋಗ್ಯಕ್ಕೆೆ ಅಪಾಯ ಉಂಟುಮಾಡುತ್ತಿಿವೆ. ನೀರಿನ ನಿರ್ಣಾಯಕ ಮೂಲಸೌಕರ್ಯಗಳು, ಭಯೋತ್ಪಾಾದನೆ ಮತ್ತು ಕಾರ್ಯತಂತ್ರದ ವಿಧ್ವಂಸಕತೆಗೆ ತುತ್ತಾಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ನಿರಂತರ ಎಚ್ಚರಿಕೆ ಮತ್ತು ಸಂಘಟಿತ ಗುಪ್ತಚರ ಕಾರ್ಯವಿಧಾನಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾಾರಿ ಎರಡನ್ನೂ ಹೊಂದಿದ್ದೇವೆ. ಭಾರತದಲ್ಲಿ ಇಂದು 6,628 ನಿರ್ದಿಷ್ಟ ಅಣೆಕಟ್ಟುಗಳಿವೆ. ಈ ಮೂಲಕ ನಾವು ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಅಣೆಕಟ್ಟುಗಳನ್ನು ಹೊಂದಿರುವ ರಾಷ್ಟ್ರವಾಗಿದ್ದೇವೆ. ಕರ್ನಾಟಕದಲ್ಲಿ 231 ನಿರ್ದಿಷ್ಟ ಅಣೆಕಟ್ಟುಗಳಿದ್ದು, ದೇಶದಲ್ಲಿ ಆರನೇ ಸ್ಥಾಾನದಲ್ಲಿದೆ. ಮೈಸೂರು ಮಹಾರಾಜರು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಬರಡು ಪ್ರದೇಶಗಳನ್ನು ಲವತ್ತಾಾದ ಬಯಲುಗಳಾಗಿ ಪರಿವರ್ತಿಸಿದ ನೀರಾವರಿ ಕಾಮಗಾರಿಗಳಿಗೆ ನೆರವು ಒದಗಿಸಲು ಅಸಾಧಾರಣ ದೂರದೃಷ್ಟಿಿಯನ್ನು ತೋರಿದರು ಎಂದು ನೆಪಿಸಿಕೊಂಡರು.
ಅಣೆಕಟ್ಟುಗಳು ದೇಶದ ಶಕ್ತಿಿ :
ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್ ಮಾತನಾಡಿ, ಅಣೆಕಟ್ಟುಗಳು ನಮ್ಮ ದೇಶದ ಶಕ್ತಿಿ ಹಾಗೂ ಪ್ರಗತಿಯ ಪ್ರತೀಕ. ಅಣೆಕಟ್ಟುಗಳು ನಮ್ಮ ಭವಿಷ್ಯವನ್ನು ಕಾಪಾಡಿ, ರೈತರನ್ನು ಸಶಕ್ತರನ್ನಾಾಗಿ ಮಾಡುತ್ತದೆ. ನಮ್ಮಲ್ಲಿರುವ ಅನೇಕ ಅಣೆಕಟ್ಟುಗಳು 60-70 ವರ್ಷಗಳ ಹಳೆಯದಾಗಿವೆ. ಹೀಗಾಗಿ ಅಣೆಕಟ್ಟುಗಳ ಮೂಲಸೌಕರ್ಯ ದುರಸ್ತಿಿ ಕಾಮಗಾರಿಗಳು ಅಗತ್ಯವಾಗಿವೆ. ಇದರ ಜತೆಗೆ ಅನಿರೀಕ್ಷಿತ ಹವಾಮಾನ ವೈಪರಿತ್ಯ ನಮಗೆ ಹೆಚ್ಚಿಿನ ಸವಾಲೊಡ್ಡಿಿದೆ. ಅತಿಯಾದ ಮಳೆ, ಪ್ರವಾಹ ದೇಶದೆಲ್ಲೆಡೆ ಸಮಸ್ಯೆೆಯಾಗಿ ತಲೆದೋರಿವೆ. ನಮ್ಮ ಊಹೆಗಳ ಆಧಾರದ ಮೇಲೆ ಭವಿಷ್ಯದ ಅಣೆಕಟ್ಟುಗಳ ನಿರ್ವಹಣೆ ಅಸಾಧ್ಯ. ಹೀಗಾಗಿ ಎಲ್ಲಾ ಸವಾಲಿಗೆ ಪೂರ್ವ ತಯಾರಿ ಮಾಡಿಕೊಳ್ಳುವ ಆಯ್ಕೆೆಯಾಗಿ ಉಳಿದಿಲ್ಲ, ಅನಿವಾರ್ಯತೆಯಾಗಿದೆ ಎಂದು ತಿಳಿಸಿದರು.
ಇಂದು ಅಣೆಕಟ್ಟುಗಳ ಸುರಕ್ಷತೆ ರಾಷ್ಟ್ರ ಮಟ್ಟದ ಆದ್ಯತೆಯಾಗಿದೆ. ವಿಶ್ವ ಬ್ಯಾಾಂಕಿನ ನೆರವಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ ಮೂಲಕ ಅನೇಕ ನೆರವು ನೀಡಲಾಗುತ್ತಿಿದೆ. ಕರ್ನಾಟಕ ರಾಜ್ಯದಲ್ಲಿ ಇದರ ಎರಡನೇ ಹಂತವನ್ನು ಜಾರಿಗೊಳಿಸಲಾಗುತ್ತಿಿದ್ದು, 58 ಅಣೆಕಟ್ಟುಗಳ ದುರಸ್ತಿಿ ಕಾಮಗಾರಿಗಳಿಗೆ 1500 ಕೋಟಿ ರೂ. ವೆಚ್ಚ ಮಾಡಲಾಗುತ್ತಿಿದೆ ಎಂದು ತಿಳಿಸಿದರು.
ಇಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆೆ ಬಂದು ಸಾವಿರ ದಿನಗಳನ್ನು ಪೂರೈಸಿದೆ. ನಾವು ಈ ಸಮ್ಮೇಳನ ಆತಿಥ್ಯ ವಹಿಸಿಕೊಂಡಿರುವ ಹಿನ್ನೆೆಲೆಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಹಳ ಸಂತೋಷ ಎಂದು ಹೇಳಿದರು.
ಕೇಂದ್ರ ಜಲಶಕ್ತಿಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಮಾತನಾಡಿ, ಯಾವುದೇ ಹೊಸ ಆಣೆಕಟ್ಟು ನಿರ್ಮಾಣವಾದಲ್ಲಿ ಅದರ ಆಯುಷ್ಯ 40 ವರ್ಷ ಎಂದು ನಿಗದಿಪಡಿಸಲಾಗುತ್ತದೆ. ಡ್ಯಾಾಮ್ ಆಯುಷ್ಯ
ಸುರಕ್ಷತಾ ಮತ್ತು ಮಾಡ್ರನೈಸೇಷನ್ ಮಾಡ್ತಿಿರಬೇಕು
ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಶ್ವಬ್ಯಾಾಂಕ್ ಉಪಾಧ್ಯಕ್ಷ ಜೊಹನ್ನೆೆಸ್ ಕಾರ್ನೆಲ್ಸ್ ಮಾರಿಯಾ ಜಟ್, ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಸುಬೋಧ್ ಯಾದವ್, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಅನುಪಮ್ ಪ್ರಸಾದ್, ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾಾ, ಜಪಾನಿನ ಐಸಿಹೆಚ್‌ಎಆರ್‌ಎಂ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊೊ.ತೊಶಿಯೋ ಕೊಯ್ಕೆೆ, ಬೃಹತ್ ಅಣೆಕಟ್ಟು ಅಂತಾರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಿ.ಕೆ.ಶರ್ಮಾ, ಭಾರತೀಯ ವಿಜ್ಞಾನ್ ಸಂಸ್ಥೆೆಯ ಡೀನ್ ಪ್ರೊೊ.ಸತ್ಯಂ ಸುವಾಸ್ ಅವರು ಉಪಸ್ಥಿಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ