Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮನುಷ್ಯತ್ವದೆಡೆ ಸಮುದಾಯ-50 ಸಂಭ್ರಮ ತುರ್ತು ಪರಿಸ್ಥಿತಿ ನೆನಪಿಸುವ ಸಂಗತಿಗಳು ಹೆಚ್ಚುತ್ತಿವೆ - ಬಂಜಗೆರೆ ಜಯಪ್ರಕಾಶ ಕಳವಳ

 ಸುದ್ದಿಮೂಲ ವಾರ್ತೆ ರಾಯಚೂರು, ೆ.21:
ತುರ್ತು ಪರಿಸ್ಥಿಿತಿಯ ಸಂದರ್ಭದಲ್ಲಿ ಕೇವಲ ಒಂದು ತಂಡ ಮಾತ್ರ ಹಕ್ಕುಗಳ ವಿರುದ್ಧ ಕೆಲಸ ಮಾಡಿತ್ತು ಈಗ ಆಡಳಿತ ವ್ಯವಸ್ಥೆೆ, ನ್ಯಾಾಯಾಂಗ, ಮಾಧ್ಯಮಗಳು ಪರೋಕ್ಷವಾಗಿ ಸಮ್ಮತಿ ನೀಡಿವೆ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಕಳವಳ ವ್ಯಕ್ತಪಡಿಸಿದರು.
ನಗರದ ಪಂ. ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಸಮುದಾಯ ರಾಯಚೂರು ಸಾಂಸ್ಕೃತಿಕ ಸಂಘಟನೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಮನುಷ್ಯತ್ವದೆಡೆ ಸಮುದಾಯ-50 ಜಾಥಾ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ ನೀಡಿರುವ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಟ್ಟಿಿದೆ. ಆ ಬಗ್ಗೆೆ ಮಾತನಾಡುವವರು ಕರ್ತವ್ಯ ಮರೆತು ಬಿಟ್ಟಿಿದ್ದೇವೆ. ಕರ್ತವ್ಯ ಪಾಲನೆ ಮಾಡಿದರೆ ಮಾತ್ರ ಹಕ್ಕುಗಳು ದೊರೆಯುತ್ತವೆ ಎಂಬುದು ತಿಳಿಯಬೇಕಾಗಿದೆ ಎಂದರು.
ತುರ್ತು ಪರಿಸ್ಥಿಿತಿ ಸಂದರ್ಭದಲ್ಲಿ ಪತ್ರಿಿಕೆಗಳು ಸಂಪಾದಕೀಯದ ಮೂಲಕ, ಪ್ರಗತಿಪರರು, ಬುದ್ಧಿಿಜೀವಿಗಳು ವಿವಿಧ ಮಾರ್ಗದಿಂದ ರಾಜಕೀಯ ಸರ್ವಾಧಿಕಾರದ ವಿರುದ್ಧ ಹೋರಾಟ ಮಾಡಿ ಪ್ರಜಾಪ್ರಭುತ್ವ ಗಟ್ಟಿಿಗೊಳಿಸುವ ಕೆಲಸ ಮಾಡಿದ್ದರು. ಸಮುದಾದಯ ಸಂಘಟನೆಯೂ ಬೀದಿನಾಟಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಹೋರಾಟದಲ್ಲಿ ಭಾಗವಹಿಸಿತ್ತು. ಆದರೆ ಈಗ ಎಡಪಂಥಿಯರು ಎಂದೇಳಿ ಕೊಳ್ಳುವವರು, ಚಿಂತಕರು, ಆ ತತ್ವದ ಅಡಿಯ ಪಕ್ಷಗಳು ಸಮಾಜವಾದಿ ಆಶಯಕ್ಕೆೆ ಐಕ್ಯ ಹೋರಾಟ ಮಾಡುತ್ತಿಿಲ್ಲ. ನಮ್ಮ ಸಂಸ್ಕೃತಿ, ರಾಜಕೀಯ ಪಕ್ಷ, ಸಂಘಟನೆಗಳು ಸಹಿತ ಸರ್ವಾಧಿಕಾರಕ್ಕೆೆ ಬೆಂಬಲಿಸಿ ಮತಗಳಾಗಿ ಗೆಲ್ಲಿಸುತ್ತಿಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
್ಯಾಸಿಸಂ ಮತ್ತು ಸಾಂಸ್ಕೃತಿಕ ರಾಜಕಾರಣ ಕುರಿತು ಮಾತನಾಡಿದ ಸಾಂಸ್ಕೃತಿಕ ಚಿಂತಕ ರೆಹಮತ್ ತರೀಕೆರೆ, ್ಯಾಸಿಸಂ ಇಂದು ಎಲ್ಲ ದೇಶಗಳಲ್ಲಿ ಜಾರಿಯಲ್ಲಿದೆ ಅದಕ್ಕೆೆ ಹಲವು ಮುಖಗಳಿವೆ. ಅದನ್ನು ಬಂಡವಾಳ ಶಾಹಿಗಳು, ಆಡಳಿತ ಪಕ್ಷದ ನಾಯಕರು ಪೋಷಿಸುತ್ತಿಿದ್ದಾರೆ ಎಂದರು.
ನಮ್ಮ ಧರ್ಮ ಶ್ರೇಷ್ಠ ಇತರರದ್ದು ಕನಿಷ್ಠ ಎನ್ನುವ ಭಾವ ಹೆಚ್ಚಿಿ ಭಾಷೆ, ಸಂಸ್ಕೃತಿ, ಬಣ್ಣದ ಹೆಸರಲ್ಲಿ ಜನರ ವಿಭಜಿಸುವ ತಂತ್ರದ ಮೂಲಕ ಪರೋಕ್ಷಘಿ, ಪ್ರತ್ಯಕ್ಷವಾಗಿ ದೌರ್ಜನ್ಯ ಮಾಡಲಾಗುತ್ತಿಿದೆ. ಸ್ವಾಾತಂತ್ರ್ಯತೆಯ ಆಹಾರದ ಹಕ್ಕು ಇಂದು ಕಸಿದುಕೊಂಡು ಸಸ್ಯಾಾಹಾರವೇ ಶ್ರೇಷ್ಠ, ನಾವು ಸೇವಿಸುವ ಆಹಾರವೇ ಇತರರು ಸೇವಿಸಬೇಕು ಎಂಬ ಹಕ್ಕೋೋತ್ತಾಾಯದಂತ ಧೋರಣೆ ಅಪಾಯಕಾರಿ ಎಂದು ಹೇಳಿದರು.
ಇನ್ನಾಾದರೂ ರಾಜಕೀಯ ಸಮಾನತೆ, ಸಾಂಸ್ಕೃತಿಕ ಹೋರಾಟ ಅನಿವಾರ್ಯವಾಗಿದೆ. ಡಾ ಅಂಬೇಡ್ಕರರ ಆಶಯದಂತೆ ದೇಶ ನಿರ್ಮಾಣವಾಗಬೇಕು. ಜನರ ಮನಸ್ಸು ಒಡೆಯುವ ಬದಲಿಗೆ ಕಟ್ಟುವ ಕೆಲಸ ಆಗಬೇಕು. ನಮ್ಮೊೊಳಗೆ ಸಂವೇಧನಶೀಲತೆ ಜಾಗೃತಗೊಳ್ಳಬೇಕು . ನಾವು ಬಿಕ್ಕಟ್ಟಿಿನ ಕಾಲದಲ್ಲಿದ್ದೇವೆ. ವೈಚಾರಿಕ ಪರಂಪರೆ ಬಸವಾದಿ ಶರಣರಿಂದ ಆರಂಭವಾಗಿತ್ತು.ಅದನ್ನು ಮುಂದುವರಿಸಿದ್ದ ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ, ಪನ್ಸಾಾರೆ ಅವರನ್ನೂ ಈ ್ಯಾಸಿಸಂ ಆಹುತಿ ಪಡೆಯಿತು ಅವರ ವಿಚಾರಗಳನ್ನು ಜೀವಂತವಾಗಿಸಬೇಕಾದ ಸವಾಲು, ಹೊಣೆಗಾರಿಕೆ ನಮ್ಮ ನಿಮ್ಮೆೆಲ್ಲರ ಮೇಲಿದೆ ಎಂದು ಪ್ರತಿಪಾದಿಸಿದರು.
ಹಿರಿಯ ಚಿಂತಕ ಆರ್ ಕೆ ಹುಡಗಿ ಸಮುದಾಯ ರಾಯಚೂರು ನಡೆದು ಬಂದ ದಾರಿ ಕುರಿತು ಮಾತನಾಡಿ, ಸಮುದಾಯ ಸಂಘಟನೆ ನಾಟಕಗಳಿಂದ ಆರಂಭವಾಗಿ ಆಂದೋಲನ, ಕ್ರಾಾಂತಿಕಾರಿ ಹೋರಾಟ ಮಾಡಿ ನಾಡಿನಾದ್ಯಂತ ಮನೆಮಾತಾಗಿದೆ ಎಂದು ಹೇಳಿದರು.
ಹೋರಾಟಗಾರ ರಾಘವೇಂದ್ರ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಸಮರಿಯಮ್ಮ ಚೂಡಿ, ವೆಂಕಟನರಸಿಂಹಲು ರಂಗಗೀತೆಗಳನ್ನು ಹಾಡಿದರು.
ಇದೇ ವೇಳೆ ಸಮುದಾಯದಿಂದ ಸಿ.ಬಸಲಿಂಗಯ್ಯ, ಚಂದ್ರಶೇಖರ ಬಾಳೆ, ಕರಿಯಪ್ಪ ಮಾಸ್ತರ, ವಿ.ಎನ್ ಅಕ್ಕಿಿ, ಬಿ.ರಾಜಶೇಖರ, ವೀರಹನುಮಾನ,ಬಸವರಾಜ ಕಳಸ ಸೇರಿ ಅನೇಕ ಸಾಧಕರಿಗೆ ಸನ್ಮಾಾನ ಮಾಡಲಾಯಿತು.
ಅಧ್ಯಕ್ಷ ಪ್ರವೀಣಕುಮಾರ ಗುಂಜಳ್ಳಿಿಘಿ, ಶರಣು ಮಾಲಿಪಾಟೀಲ, ಶ್ಯಾಾಮಲಾ ಪೂಜಾರ, ಎಸ್. ದೇವೇಂದ್ರಗೌಡ, ಬಿ.ಬಸವರಾಜ, ತಾಯಣ್ಣ ಯರಗೇರಾ ಸೇರಿ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ