Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

2026ರ ಜೂನ್ ಒಳಗಡೆ ತಂಗಭದ್ರಾ ಡ್ಯಾಾಮಗೆ ಹೊಸ ಕ್ರಸ್ಟ್ ಗೇಟ್ ಅಳವಡಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ಏನೇ ತೊಂದರೆಯಾದರೂ, ಎಷ್ಟೇ ಖರ್ಚಾದರು ಸಹ ತುಂಗಭದ್ರಾಾ ಡ್ಯಾಾಮಗೆ ಬರುವ ಜೂನ್ ಒಳಗಡೆ ಹೊಸ ಕ್ರಸ್ಟ್ ಗೇಟ್ ಅಳವಡಿಸಿ, ಮುಂದಿನ ಮುಂಗಾರು ಬೆಳೆಗೆ ನೀರು ಹರಿಸಿ ರೈತರಿಗೆ ನೀಡಿದ ಮಾತು ಉಳಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ತಾಲೂಕಾಡಳಿತ, ತಾಲೂಕು ಪಂಚಾಯತ್ ಹಾಗೂ ಧಾರ್ಮಿಕ ದತ್ತಿಿ ಇಲಾಖೆಯ ಅಂಬಾದೇವಿ ವ್ಯವಸ್ಥಾಾಪನಾ ಸಮಿತಿಯ ಆಶ್ರಯದಲ್ಲಿ ಸಿಂಧನೂರ ತಾಲೂಕಿನ ಅಂಬಾಮಠದ ಆವರಣದಲ್ಲಿ ಜನವರಿ 3ರಂದು ನಡೆದ ಅಂಬಾದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರಾವರಿ ಯೋಜನೆಗಳ ಅನುಷ್ಠಾಾನಕ್ಕೆೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿಿಗಳು, 431 ಕೋಟಿ ರೂ ವೆಚ್ಚದಲ್ಲಿ ಪಾಪಯ್ಯ ಟನೇಲ್ ಕಾರ್ಯ ಮತ್ತು 33 ಗೇಟ್ ಅಳವಡಿಸುವ ಕಾರ್ಯ ಮಾಡುತ್ತಿಿದ್ದೇವೆ ಎಂದು ತಿಳಿಸಿದರು.
ಸಿಂಧನೂರ ಕ್ಷೇತ್ರದ ಅಭಿವೃದ್ಧಿಿಗಾಗಿ ರಾಜ್ಯ ಸರ್ಕಾರ ನೀಡಿದ ಅನುದಾನವನ್ನು ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಸದ್ಬಳಕೆ ಮಾಡುತ್ತಿಿರುವುದು ಸಂತಷದ ಸಂಗತಿಯಾಗಿದೆ. ಸಿಂಧನೂರ ಕ್ಷೇತ್ರದ ಕುಡಿಯುವ ನೀರಿನ ಕೆರೆಗಳ ನಿರ್ಮಾಣ ಅಭಿವೃದ್ಧಿಿಗೆ 13.42 ಕೋಟಿ ರೂ., ಸಾಲಗುಂದ ಏತ ನೀರಾವರಿ ಯೋಜನೆಗೆ 71 ಕೋಟಿ ರೂ., ಒಳಬಳ್ಳಾಾರಿ ಏತ ನೀರಾವರಿ ಯೋಜನೆಗೆ 43.10 ಕೋಟಿ ರೂ., ಮುಳ್ಳೂರ ಗ್ರಾಾಮದ ಹತ್ತಿಿರ ಬ್ರಿಿಜ್ ಕಂ ಬ್ಯಾಾರೇಜ್ ಯೋಜನೆಗೆ 29 ಕೋಟಿ ರೂ ವೆಚ್ಚ ಮಾಡಿ ಈ ಭಾಗದ ಅನ್ನದಾತರಿಗೆ ಅನುಕೂಲ ಕಲ್ಪಿಿಸುತ್ತಿಿದ್ದೇವೆ ಎಂದು ತಿಳಿಸಿದರು.
42 ಲಕ್ಷ ಹೆರ್ಕ್ಟೇ ಪ್ರದೇಶಕ್ಕೆೆ ನೀರು ಹರಿಸುವ ಪ್ರಯತ್ನದಲ್ಲಿ ಈಗಾಗಲೇ 30 ಲಕ್ಷ ಪ್ರದೇಶಕ್ಕೆೆ ನೀರು ಕೊಟ್ಟಿಿದ್ದೇವೆ. ಉಳಿದ 12 ಲಕ್ಷ ಹೆಕ್ಟೇರ ಪ್ರದೇಶಕ್ಕೆೆ ಸಹ ನೀರು ಹರಿಸುವ ಕಾರ್ಯ ನಡೆಯುತ್ತಿಿದೆ ಎಂದರು.
ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎನ್ನುವುದು ಅಪ್ಪಟ ಸುಳ್ಳು. ನಾವು ಹಿಂದೆ ಬಿದ್ದಿಲ್ಲ. ಅಭಿವೃದ್ಧಿಿ ಕಾರ್ಯಗಳು ಹಾಗೂ ಗ್ಯಾಾರಂಟಿ ಯೋಜನೆಗಳ ಅನುಷ್ಟಾಾನ ಕಾರ್ಯ ಎರಡೂ ನಡೆಯುತ್ತಿಿವೆ. ಅನ್ನಭಾಗ್ಯ, ಗೃಹ ಲಕ್ಷ್ಮಿಿ, ಗೃಹ ಜ್ಯೋೋತಿ, ಶಕ್ತಿಿ, ಯುವನಿಧಿ ಪಂಚ ಗ್ಯಾಾರಂಟಿ ಯೋಜನೆಗಳಿಗೆ ಇದುವರೆಗೆ ರಾಜ್ಯ ಸರ್ಕಾರವು 1,12,000 ಕೋಟಿ ರೂ ಖರ್ಚು ಮಾಡಿದ್ದೇವೆ. ಪ್ರಸಕ್ತ 2026ನೇ ಸಾಲಿನಲ್ಲೂ ಸಹ ಮತ್ತೆೆ 52 ಸಾವಿರ ಕೋಟಿ ರೂ ಖರ್ಚು ಮಾಡುತ್ತಿಿದ್ದೇವೆ. ಗ್ಯಾಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬಳಿಕ ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯವು ಇಡಿ ದೇಶದಲ್ಲೇ ನಂರ್ಬ 1 ಸ್ಥಾಾನದಲ್ಲಿದೆ. ನಾವು ನುಡಿದಂತೆ ನಡೆಯುತ್ತೇವೆ. ಹೇಳಿದಂತೆ ಕೆಲಸ ಮಾಡತ್ತೇವೆ. ರಾಯಚೂರು ಜಿಲ್ಲೆಯಲ್ಲಿ ಕೊನೆಯ ಭಾಗದ ರೈತರಿಗೆ ನೀರು ಕೊಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ರಾಜಸ್ಥಾಾನ ರಾಜ್ಯ ಬಿಟ್ಟರೆ ಕರ್ನಾಟಕ ರಾಜ್ಯವು ಹೆಚ್ಚು ಒಣಭೂಮಿ ಇರುವ ಎರಡನೇ ರಾಜ್ಯವಾಗಿದೆ. ಇದು ನಮ್ಮ ಗಮನಕ್ಕಿಿದೆ. ಈ ಕಾರಣದಿಂದಾಗಿ ಸಿಂಧನೂರ, ರಾಯಚೂರು ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳ ಅನುಷ್ಠಾಾನಕ್ಕೆೆ ಒತ್ತು ನೀಡಿ ನೀರಾವರಿ ಪ್ರದೇಶದ ವಿಸ್ತೀರ್ಣಕ್ಕೆೆ, ಹಸೀರಿಕರಣಕ್ಕೆೆ ಒತ್ತು ಕೊಡುವ ಉದ್ದೇಶ ಹೊಂದಿದ್ದೇವೆ ಹೊಂದಿದ್ದೇವೆ ಎಂದರು.
ಕೃಷ್ಣ ಮೇಲ್ಡಂಡೆ ಮೂರನೇ ಹಂತದ ಯೋಜನೆಯ ಅನುಷ್ಠಾಾನಕ್ಕೆೆ ಕೇಂದ್ರ ಸರ್ಕಾರವು ಇದುವರೆಗೆ ಗೆಜೆಟ್ ನೊಟಿಪಿಕೇಶನ್ ಮಾಡುತ್ತಿಿಲ್ಲ. 172 ಟಿಎಂಸಿ ನೀರು ಬಳಸಿಕೊಳ್ಳಲು ಯಾವುದೇ ಅಭ್ಯಂತರ ಇಲ್ಲ ಎಂಬುದಾಗಿ
2013ರಲ್ಲಿಯೇ ನ್ಯಾಾಯ ನಮ್ಮ ಪರವಾಗಿದೆ ಎಂದು ತಿಳಿಸಿದರು.
ಬಾಕಿ ಅನುದಾನ ಬಿಡುಗಡೆ: ಶ್ರೀ ಸೋಮಲಾಪುರದ ಅಂಬಾಮಠದ ದೇವಸ್ಥಾಾನಕ್ಕೆೆ ನಿಗದಿಪಡಿಸಿದ 6.30 ಕೋಟಿ ರೂ ಪೈಕಿ ಇದುವರೆಗೆ 2 ಕೋಟಿ ರೂ ವೆಚ್ಚ ಮಾಡಲಾಗಿದೆ. ಬಾಕಿ ಅನುದಾನವನ್ನು ಸಹ ಬಿಡುಗಡೆ ಮಾಡಿ ಅಂಬಾಮಠದ ಸಮಗ್ರ ಅಭಿವೃದ್ಧಿಿಗೆ ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತರಿ ಯೋಜನೆಯ ಸ್ವರೂಪವನ್ನು ಕೇಂದ್ರ ಸರ್ಕಾರವು ಸಂಪೂರ್ಣ ಬದಲಿಸಿ, ಜನ ಸಾಮಾನ್ಯರಿಗೆ ಅನ್ಯಾಾಯ ಮಾಡುತ್ತಿಿದೆ ಎಂದು ಮುಖ್ಯಮಂತ್ರಿಿಗಳು ಅಸಮಧಾನ ವ್ಯಕ್ತಪಡಿಸಿದರು.
ಶಾಸಕರಿಗೆ ಅಭಿನಂದನೆ: ಸಿಂಧನೂರು ತಾಲೂಕಿನ ಸಮಸ್ತ ವಿದ್ಯಾಾರ್ಥಿಗಳ ಹಿತದೃಷ್ಟಿಿಯಿಂದ ಯೋಚಿಸಿ, ಕೆಕೆರ್ಆ ಡಿಬಿಯಿಂದ 14 ಬಸ್ ಗಳ ಸೌಕರ್ಯ ಕಲ್ಪಿಿಸುವಲ್ಲಿ ಶ್ರಮಿಸಿದ ಸಿಂಧನೂರ ಶಾಸಕರಾದ ಹಂಪನಗೌಡ ಬಾದರ್ಲಿ ಅವರಿಗೆ ವಿದ್ಯಾಾರ್ಥಿಗಳ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದು ಮುಖ್ಯಮಂತ್ರಿಿಗಳು ಸಂತಷ ವ್ಯಕ್ತಪಡಿಸಿದರು.
ಅಂಬಾದೇವಿ ದರ್ಶನದಿಂದ ಸಂತಷ: ಸೋಮಲಾಪುರದ ಸಿದ್ಧಪರ್ವತಕ್ಕೆೆ ಆಗಮಿಸಿ ಶ್ರೀ ಅಂಬಾದೇವಿ ಮಹೋತ್ಸವ ಮತ್ತು ಜಂಬೂ ಸವಾರಿಗೆ ಸಂತೋಷದಿಅದ ಚಾಲನೆ ನೀಡಿದ್ದೇನೆ. ಶ್ರೀ ಅಂಬಾದೇವಿಯ ದರ್ಶನ ಪಡೆದಿರುವುದು ನನ್ನ ಪುಣ್ಯ ಎಂದೇ ಭಾವಿಸಿದ್ದೇನೆ ಎಂದು ತಿಳಿಸಿದ ಮುಖ್ಯಮಂತ್ರಿಿಗಳು, ನೆರೆದಿದ್ದ ಎಲ್ಲ ಜನತೆಗೆ ಎಲ್ಲ ಭಕ್ತರಿಗೆ ತಾಯಿ ಅಂಬಾದೇವಿ ಒಳ್ಳೆೆಯದು ಮಾಡಲಿ ಎಂದು ತಾವು ಪ್ರಾಾರ್ಥಿಸುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಮೂಲಸೌಕರ್ಯ ಅಭಿವೃದ್ಧಿಿ ನಿಗಮದ ಅಧ್ಯಕ್ಷರು ಆಗಿರುವ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿಿ, ಡಾ.ಶರಣಪ್ರಕಾಶ ಪಾಟೀಲ, ಶಿವರಾಜ ತಂಗಡಗಿ, ಸಾರಿಗೆ ಸಂಸ್ಥೆೆಯ ಅಧ್ಯಕ್ಷರಾದ ಅರುಣಕುಮಾರ ಪಾಟೀಲ, ಸಂಸದರಾದ ರಾಜಶೇಖರ ಹಿಟ್ನಾಾಳ, ಶಾಸಕರಾದ ಬಸನಗೌಡ ತುರವಿಹಾಳ, ಬಸನಗೌಡ ದದ್ದಲ್, ಬಿ.ಎಂ ನಾಗರಾಜ, ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ, ಬಸವನಗೌಡ ಬಾದರ್ಲಿ, ಪ್ರಾಾದೇಶಿಕ ಆಯುಕ್ತರಾದ ಜಹೀರಾ ನಸೀಮ್, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಎಸ್ಪಿಿ ಅರುಣಾಂಕ್ಷು ಗಿರಿ, ಕಲ್ಯಾಾಣ ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆ ಸಂಸ್ಥೆೆಯ ವ್ಯವಸ್ಥಾಾಪಕ ನಿರ್ದೇಶಕರಾದ ಬಿ ಸುಶೀಲಾ, ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿಿ, ಸಿಂಧನೂರ ತಹಸೀಲ್ದಾಾರ ಅರುಣ ದೇಸಾಯಿ, ತಾಲೂಕು ಪಂಚಾಯತ್ ಇಓ ಚಂದ್ರಶೇಖರ, ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷರಾದ ವೆಂಕನಗೌಡ ಬಾದರ್ಲಿ, ಶ್ರೀ ಅಂಬಾದೇವಿ ವ್ಯವಸ್ಥಾಾಪನಾ ಸಮಿತಿಯ ಅಧ್ಯಕ್ಷರಾದ ರಂಗನಗೌಡ, ಸೋಮಲಾಪುರ ಗ್ರಾಾಮ ಪಂಚಾಯತಿ ಅಧ್ಯಕ್ಷೆ ರೇಣುಕಮ್ಮ ಹುಸೇನಪ್ಪ ಮನ್ನಾಾಪುರ, ಪಿಎಲ್ ಡಿ ಬ್ಯಾಾಂಕ್ ಅಧ್ಯಕ್ಷ ಎಂ ದೊಡ್ಡಬಸವರಾಜ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರರ್ಡ್ಡೇ, ಸಿಂಧನೂರ ತಾಲೂಕು ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ಅಧ್ಯಕ್ಷ ಅನಿಲಕುಮಾರ ವೈ ಹಾಗೂ ಇನ್ನೀತರ ಗಣ್ಯರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ