Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಶ್ವಾಸ ಸಂಕ್ರಾಾಂತಿ ವೇಳೆಗೆ ನೂತನ ಜಾಹೀರಾತು ನೀತಿ ಜಾರಿ

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.03:
ಸಂಕ್ರಾಾಂತಿ ವೇಳೆಗೆ ರಾಜ್ಯ ಸರ್ಕಾರದಿಂದ ಪತ್ರಿಿಕೆಗಳಿಗಾಗಿ ಹೊಸ ಜಾಹೀರಾತು ನೀತಿ ಜಾರಿಗೆ ಬರಲಿದೆ ಎಮದು ಮುಖ್ಯಮಂತ್ರಿಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಿಂದ ಶುಕ್ರವಾರ ಕೆಯುಡಬ್ಲ್ಯೂಜೆ ಕಚೇರಿಯಲ್ಲಿ ಹಮ್ಮಿಿಕೊಳ್ಳಲಾಗಿದ್ದ ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತ ಮತ್ತು ಮಾಹಿತಿ ಆಯುಕ್ತರಾದ ಪತ್ರಕರ್ತರಿಗೆ ಸನ್ಮಾಾನಿಸಿ ಅಭಿನಂದನಾ ನುಡಿಗಳನ್ನು ಆಡಿದರು.
ಪತ್ರಿಿಕೆಗಳಿಗೆ ನೀಡುವ ಜಾಹೀರಾತು ವ್ಯವಸ್ಥೆೆಯನ್ನು ಪಾರದರ್ಶಕಗೊಳಿಸಲು ಜಾಹೀರಾತು ನೀತಿ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಿಧರ್ಮವನ್ನು ಎತ್ತಿಿಹಿಡಿಯುವುದು ಸವಾಲಿನ ಕೆಲಸ. ಸಾಮಾಜಿಕ ಜವಾಬ್ದಾಾರಿಯನ್ನು ಗುರುತಿಸು ವುದೂ ಜವಾಬ್ದಾಾರಿಯುತ ಕೆಲಸ. ಸಾಮಾಜಿಕ ಕಾಳಜಿಗಳನ್ನು ಕಾಪಾಡಿಕೊಂಡಿರುವವರನ್ನು ಗುರುತಿಸುವುದು ಮತ್ತು ಸನ್ಮಾಾನಿಸುವುದರಿಂದ ಸಮಾಜವು ಪ್ರಾಾಮಾಣಿಕ ಸೇವೆಯನ್ನು ಎಂದಿಗೂ ಮರೆಯುವುದಿಲ್ಲಎಂಬ ಸಂದೇಶ ಕೊಟ್ಟಂತೆ ಆಗುತ್ತದೆ. ಇದು ಸಮಾಜದಲ್ಲಿ ಸತ್ಯವಂತರ, ಸಾಮಾ ಜಿಕ ಕಾಳಜಿ ಇಟ್ಟುಕೊಂಡವರ ಪರವಾಗಿ ನಿಲ್ಲುವ ಧೈರ್ಯವನ್ನು ತುಂಬುತ್ತದೆ ಎಂದು ಹೇಳಿದರು.
ಇಂದು ಇಲ್ಲಿ ಸನ್ಮಾಾನಿತರಾಗುತ್ತಿಿರುವ ಐದೂ ಮಂದಿ ಪತ್ರಕರ್ತರಿಗೆ ಮತ್ತು ಇವರನ್ನು ಸನ್ಮಾಾನಿಸುತ್ತಿಿರುವ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಶ್ಲಾಾಘನೀಯ. ಸಿದ್ದರಾಜು ಅವರು ಹಿರಿಯರಾಗಿ ನಮಗೆಲ್ಲಾ ಮಾದರಿ ಆಗಿದ್ದವರು. ಉಳಿದವರು ನನ್ನ ಸಮಕಾಲೀನರಾಗಿ ಮಾದರಿಗಳಾಗಿರುವವರು. ಹಿರಿಯ ಮತ್ತು ಮಾದರಿ ಪತ್ರಕರ್ತರನ್ನು ಸನ್ಮಾಾನಿಸುವುದು ಕೇವಲ ಒಂದು ಶಿಷ್ಟಾಾಚಾರವಲ್ಲ, ಅದು ಸಮಾಜದ ಸ್ವಾಾಸ್ಥ್ಯವನ್ನು ಕಾಪಾಡುವ ’ಜಾಗೃತ ಕಣ್ಣು’ಗಳಿಗೆ ಸಲ್ಲಿಸುವ ಗೌರವವಾಗಿದೆ.
ಇಲ್ಲಿ ಸನ್ಮಾಾನಿತರಾಗುತ್ತಿಿರುವ ಪತ್ರಕರ್ತ ಸ್ನೇಹಿತರು ದಶಕಗಳ ಕಾಲ ಸಮಾಜದ ಏರಿಳಿತಗಳನ್ನು ಹತ್ತಿಿರದಿಂದ ಕಂಡಿದ್ದಾರೆ. ಗೂಗಲ್, ಜಿ-ಮೇಲ್, ವಾಟ್ಸಾಾಪ್ ನಂತಹ ತಂತ್ರಜ್ಞಾನವಿಲ್ಲದ ಕಾಲದಿಂದ ಹಿಡಿದು ಅಪಾರ ತಂತ್ರಜ್ಞಾನದ ಹಾವಳಿಯ ಕಾಲಘಟ್ಟದ ಎರಡೂ ಸಂದರ್ಭಗಳ ಪತ್ರಿಿಕೋದ್ಯಮಕ್ಕೂ ಸಾಕ್ಷಿಯಾಗಿರುವವರು ಎಂದು ಮೆಚ್ಚುಗೆ ಸೂಚಿಸಿದರು.
ನಮ್ಮ ಹಿಂದಿನವರು ಮತ್ತು ಸಮಕಾಲೀನ ಮಾದರಿಗಳ ಮೂಲಕ ಇಂದಿನ ತಪ್ಪುುಗಳನ್ನು ತಿದ್ದಿಕೊಳ್ಳಲು ಮತ್ತು ಭವಿಷ್ಯದ ದಾರಿಯನ್ನು ಕಂಡುಕೊಳ್ಳಲು ನಮಗೆ ಸಹಾಯ ಆಗುತ್ತದೆ. ನನಗಿರುವ ಸಾಧ್ಯತೆಗಳಲ್ಲೇ ಹೆಚ್ಚೆೆಚ್ಚು ವೃತ್ತಿಿಬಾಂಧವರಿಗೆ ಅವಕಾಶಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡಿದ್ದೇನೆ. ಈ ಜವಾಬ್ದಾಾರಿಯನ್ನು ನನಗೆ ಅವಕಾಶ ಇರುವವರೆಗೂ ನಾನು ಮಾಡುತ್ತಲೇ ಇರುತ್ತೇನೆ. ಇನ್ನೂ ಅನೇಕ ಹಿರಿಯರಿಗೆ ಮತ್ತು ಅನೇಕ ಸಮಕಾಲೀನ ಅರ್ಹರಿಗೆ ಅವಕಾಶಗಳು ದೊರೆತಿಲ್ಲ ಎನ್ನುವ ಅರಿವು ನನಗೂ ಇದೆ. ಮುಂದಿನ ದಿನಗಳಲ್ಲಿ ಉಳಿದ ಅರ್ಹರಿಗೂ ಅವಕಾಶ ಒದಗಿಸಿಕೊಡಲು ಪ್ರಯತ್ನಿಿಸುತ್ತೇನೆ ಎಂದರು.
ವೃತ್ತಿಿಜೀವನದಿಂದ ನಿವೃತ್ತರಾದ ನಂತರ ಅಥವಾ ಇಳಿ ವಯಸ್ಸಿಿನಲ್ಲಿ ಅನೇಕ ಪತ್ರಕರ್ತರು ಆರ್ಥಿಕ ಅಥವಾ ಮಾನಸಿಕ ಏಕಾಂಗಿತನ ಅನುಭವಿಸುತ್ತಾಾರೆ ಎನ್ನುವುದು ನನಗೆ ಗೊತ್ತಿಿದೆ. ಇಂತಹ ಸಮಯದಲ್ಲಿ ಪತ್ರಕರ್ತರ ಸಂಘಗಳು, ಪ್ರೆೆಸ್ ಕ್ಲಬ್ ನಂತಹ ಸಂಸ್ಥೆೆಗಳು ಅವರನ್ನು ಗುರುತಿಸಿ ಸನ್ಮಾಾನಿಸಿದರೆ, ಅವರಿಗೆ ಆತ್ಮವಿಶ್ವಾಾಸ ಮತ್ತು ಗೌರವಯುತ ಬದುಕು ನಡೆಸಲು ನೆರವಾಗುತ್ತದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಿ ಅವರು ಕಾರ್ಯಕ್ರಮದಲ್ಲಿ ರಾಜ್ಯೋೋತ್ಸವ ಪುರಸ್ಕೃತರಾದ ಸಿದ್ದರಾಜು, ಬಿ.ಎಂ.ಹನ್ೀ, ಶಾಂತಕುಮಾರ್ ಹಾಗೂ ಮಾಹಿತಿ ಆಯುಕ್ತರಾದ ಬಿ.ವೆಂಕಟಸಿಂಗ್ ಹಾಗೂ ಮಹೇಶ್ ವಾಳ್ವೇಕರ್ ಅವರನ್ನು ಸನ್ಮಾಾನಿಸಿದರು.
ದೇಶದಲ್ಲಿ ಎಲ್ಲಿಯೂ ಇಲ್ಲದ ಅವಕಾಶ : ಸನ್ಮಾಾನ ಸ್ವೀಕರಿಸಿದ ಮಾತನಾಡಿ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟಸಿಂಗ್, ಮಾಹಿತಿ ಆಯೋಗದ ಆಯುಕ್ತರಾಗಿ ಆರು ಮಂದಿ ಪತ್ರಕರ್ತರನ್ನು ನೇಮಕ ಮಾಡಲಾಗಿದೆ. ಇದು ದೇಶದಲ್ಲಿ ಎಲ್ಲಿಯೂ ಇಲ್ಲದ ಅವಕಾಶ ಪತ್ರಕರ್ತರಿಗೆ ಕರ್ನಾಟಕದಲ್ಲಿ ಸಿಕ್ಕಿಿದೆ. ಅದರಲ್ಲೂ ಕಲ್ಯಾಾಣ ಕರ್ನಾಟಕ ಭಾಗದಿಂದ ಮಾಹಿತಿ ಆಯುಕ್ತರ ನೇಮಕ ಆಗಿರಲಿಲ್ಲ. ಸರ್ಕಾರ ಗುರುತಿಸಿ ಅವಕಾಶ ನೀಡಿದೆ ಎಂದು ಹೇಳಿದರು.
ಪತ್ರಕರ್ತರಿಗೆ ಪತ್ರಕರ್ತರ ಸಂಘ ಆಧಾರ. ನಾನು ಕಳೆದ 37 ವರ್ಷಗಳಿಂದಲೂ ಪತ್ರಕರ್ತರ ಸಂಘ, ಗಿಲ್ಡ್ ಸೇರಿ ಸಂಘಟನೆಗಳಲ್ಲಿ ಸಕ್ರಿಿಯವಾಗಿದ್ದರಿಂದ ಹೆಚ್ಚಿಿನ ಅವಕಾಶಗಳು ದೊರೆಯಲು ಸಾಧ್ಯವಾಯಿತು ಎಂದು ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು.
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಮದನ್ ಗೌಡರು, ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಸೇರಿ ಸಂಘದ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ