Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುವ ಕವಿಗೋಷ್ಠಿಗೆ ವಾಚಿಸುವವರಿಗಿಂತ ವಾಚನ ಮಾಡುವವರೆ ಹೆಚ್ಚು ಬರೆದದ್ದೆಲ್ಲ ಕಾವ್ಯ ಎಂಬ ಭ್ರಮೆಯಿಂದ ಹೊರ ಬನ್ನಿ - ತಾಯರಾಜ್

ಸುದ್ದಿಮೂಲ ವಾರ್ತೆ ರಾಯಚೂರು, ೆ.08:
ಬರದೆದ್ದಲ್ಲ ಕವಿತೆ, ಕಾವ್ಯ ಎಂಬ ಭ್ರಮೆಯಿಂದ ಈ ದೇಶದ ಭವಿಷ್ಯ ಕಟ್ಟುವ ಯುವ ಸಾಹಿತಿಗಳು ಹೊರ ಬಂದು ಸಮಾಜಮುಖಿ ಸಂವೇದನೆಯತ್ತ ಗಮನ ಹರಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಾಳ ಪ್ರತಿಪಾದಿಸಿದರು.
ನಗರದ ಮಹಿಳಾ ಸಮಾಜದ ಆವರಣದಲ್ಲಿ ರಾಯಚೂರು ಜಿಲ್ಲಾಾ ಉತ್ಸವದ ಕೊನೆಯ ದಿನದ ಯುವ ಕವಿಗೋಷ್ಠಿಿ ಉದ್ಘಾಾಟಿಸಿ ಮಾತನಾಡಿದರು.ಬರೆದದ್ದೆಲ್ಲ ಕವಿತೆ ಅಲ್ಲ. ಅದರ ಮೂಲ ಶೈಲಿ ಬಹಳ ಮುಖ್ಯ, ಸಮಾಜದಲ್ಲಿನ ತಲ್ಲಣಗಳ ಸಮಗ್ರ ಅರಿವು ಇರಬೇಕು ಎಂದರು.
ಈ ದೇಶದ ಭವಿಷ್ಯತ್ತು ಯುವಕರ ಮೇಲಿದೆ. ಆದರೆ, ವಿಚಾರ ಕೇಳುವ ತಾಳ್ಮೆೆ, ವೈಚಾರಿಕತೆ ಅರಿಯುವ ಮನಸಿಲ್ಲ, ಸಾಮಾಜಿಕ ಸಂವೇದನೆ ಕಡೆ ಹೆಚ್ಚು ಕೆಲಸ ಆಗಬೇಕಿದೆ. ಜ್ಞಾನ ಇರಬೇಕು ತಿಳುವಳಿಕೆ ಇರುವ ಕವಿ ಅರಿವು ಮೂಡಿಸುವ ಕೃಷಿ ಕಾವ್ಯದಲ್ಲಿ ಇರಬೇಕು. ವರ್ತಮಾನದ ತಲ್ಲಣಗಳ ಪ್ರತಿಬಿಂಬಿಸುವಂತಿರಬೇಕು ಎಂದು ಹೇಳಿದ ಅವರು ತಾವು ಬರೆದ ಹುಡುಕಾಟ ಕವಿತೆ ವಾಚಿಸಿ ಮಾತು ಮುಗಿಸಿದರು
ಕವಿಗೋಷ್ಠಿಿಯ ಆಶಯ ನುಡಿಗಳನ್ನಾಾಡಿದ ಲೇಖಕ ಡಾ.ಚೆನ್ನಬಸಯ್ಯ ಹಿರೇಮಠ, ಕವನ ಪದವಾಗಿರಬಾರದು ಸಮಸ್ಯೆೆ, ಶೋಷಣೆ, ವಿರೋಧಾಬಾಸಗಳನ್ನು ಸ್ಪಷ್ಟವಾಗಿ ದಾಖಲಿಸಬೇಕಾಗಿದೆ. ಸಾಹಿತ್ಯ ಚರಿತ್ರೆೆಯ ಕಾಲಘಟ್ಟ ಅವಲೋಕನ ಮಾಡಿ ಓದು ಬಹುಮುಖ್ಯ, ವಿಮರ್ಶೆ ಮಾಡಿ ಹೊಸತು ಹುಡುಕುವವರು ಮಾತ್ರ ಸತ್ವ ಕವಿ ಆಗಲು ಸಾಧ್ಯ ಎಂದರು.
ಯುವಕವಿಗಳಿಗೆ ಭೂತ ಕಾಲದ ಅರಿವು ಮುಖ್ಯ, ಶಾಂತರಸರು, ಸಿದ್ದಲಿಂಗಯ್ಯರ ಕಾವ್ಯ ಕವಿತೆ ತತ್ವ ಅಗತ್ಯ. ವರ್ತಮಾನದ ಎಚ್ಚರ ಇರಬೇಕಿದೆ. ನಡೆಯುವ ಘಟನೆಗಳಿಗೆ ಸ್ಪಂದಿಸುವಂತಿರಬೇಕು ಕೇವಲ ರಂಜಿಸಲು ಕವಿತೆ ಬರೆಯಬಾರದು ಭವಿಷ್ಯದ ಬಗ್ಗೆೆ ಭರವಸೆ ಮೂಡಿಸುವಂತಿರಲಿ ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಸಮಾಜದಲ್ಲಿನ ಸಂವೇದನೆಗಳ ಜೊತೆಗೆ ಇತಿಹಾಸದ ಮೆಲಕು, ಯುವಕರ ಜವಾಬ್ದಾಾರಿ, ಪ್ರೀತಿ ಪ್ರೇಮದ ಜೊತೆಗೆ ಉತ್ಸವದ ಬಗೆಗಿನ ಕವಿತೆಗಳ ಮೆಲಕು ವಿಶ್ಲೇಷಿಸಿದರು. ಅಲ್ಲದೆ, ಯುವ ಕವಿಗಳಿಗೆ ಓದುವ, ಬರೆಯುವ ಹಸಿವಿದ್ದರೆ ಮಾತ್ರ ಸಮಾಜ ನೆನಪಿನಲ್ಲಿರಿಸಿಕೊಳ್ಳುತ್ತದೆ ಎಂದು ಅಭಿಪ್ರಾಾಯ ಪಟ್ಟರು.
ವೇದಿಕೆ ಮೇಲೆ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ,ಮಾನ್ವಿಿ ತಾಲೂಕು ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿಿ, ತಹಶೀಲ್ದಾಾರ ಪರಶುರಾಮ ಇದ್ದರು. ಅಮರೇಶ ಆಶಿಹಾಳ ನಿರೂಪಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ