Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಧಾನ ಪರಿಷತ್‌ನಲ್ಲಿ ದಿ. ಭೀಮಣ್ಣ ಖಂಡ್ರೆ ಅವರಿಗೆ ಸಂತಾಪ ಭೀಮಣ್ಣ ಖಂಡ್ರೆ ಧೈರ್ಯವಂತ ರಾಜಕಾರಣಿ

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.22:
ಮಾಜಿ ಸಚಿವ ಭೀಮಣ್ಣ ಖಂಡ್ರೆೆ ಧೈರ್ಯವಂತ ರಾಜಕಾರಣಿ. ಅನಿಸಿದ್ದನ್ನು ಯಾವುದೇ ಭೀತಿ ಹಾಗೂ ಮುಲಾಜಿಲ್ಲದೆ ಹೇಳುತ್ತಿಿದ್ದರು. ಅವರು ವ್ಯವಸ್ಥೆೆಯ ವಿರೋಧಿಯಾಗಿದ್ದರು. ಯುವ ರಾಜಕಾರಣಿಗಳಿಗೆ ಅವರ ಸೈದ್ಧಾಾಂತಿಕ ನಿಲುವು ಮಾದರಿ ಎಂದು ವಿಧಾನ ಪರಿಷತ್ ಸದಸ್ಯರು ಬಣ್ಣಿಿಸಿದರು.
ಗುರುವಾರ ವಿಧಾನ ಪರಿಷತ್‌ನಲ್ಲಿ ಅಗಲಿದ ಮಾಜಿ ಸಚಿವ ಭೀಮಣ್ಣ ಖಂಡ್ರೆೆ ಅವರ ಸಂತಾಪ ಸೂಚನೆ ಕಲಾಪದಲ್ಲಿ ಪಾಲ್ಗೊೊಂಡು ಮಾತನಾಡಿದರು. ಪರಿಷತ್ತಿಿನ ಸಭಾ ನಾಯಕ ಸಚಿವ ಎನ್.ಎಸ್.ಭೋಸರಾಜು ಅವರು ಸಂತಾಪ ಸೂಚಕ ಮಂಡಿಸಿದರು.
ಭೀಮಣ್ಣ ಖಂಡ್ರೆೆ ಅವರು 1925ರ ನವೆಂಬರ್ 1ರಂದು ಬೀದರ್‌ನ ಭಾಲ್ಕಿಿಯಲ್ಲಿ ಜನಿಸಿ 102 ವರ್ಷಗಳ ತುಂಬು ಜೀವನ ನಡೆಸಿದರು. ಜ.16 2026ರಂದು ಮೃತಪಟ್ಟರು. ಕಾನೂನು ಪದವಿ ಪಡೆದ ಇವರು ವಕೀಲ ವೃತ್ತಿಿ ನಡೆಸುತ್ತಿಿದ್ದರು. ಸ್ವಾಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊೊಂಡು ಪ್ರಮುಖ ಪಾತ್ರ ವಹಿಸಿದ್ದರು. 1953ರಲ್ಲಿ ಭಾಲ್ಕಿಿ ಪುರಸಭೆ ಸದಸ್ಯರಾಗಿ ಗೆದ್ದು ಅಧ್ಯಕ್ಷರಾದರು. ಆ ಮೂಲಕ ಅವರು ರಾಜಕೀಯ ಜೀವನ ಪ್ರವೇಶಿಸಿದರು. ಭೀಮಣ್ಣ ಖಂಡ್ರೆೆ ಅವರು 1962, 1967, 1978 ಹಾಗೂ 1983ರಲ್ಲಿ ಭಾಲ್ಕಿಿ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆೆಯಾಗಿದ್ದರು. 1988ರಿಂದ 94 ಹಾಗೂ 1994ರಿಂದ 2000 ಅವಧಿಗೆ ಎರಡು ಭಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ವೀರಪ್ಪ ಮೊಯ್ಲಿಿ ಸಚಿವ ಸಂಪುಟದಲ್ಲಿ 1992ರಿಂದ 1994ರವರೆಗೆ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆೆ ಸ್ಥಾಾಪಿಸಿ ಗಡಿಭಾಗದ ಮಕ್ಕಳಿಗೆ ಶಿಕ್ಷಣ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂತ ಧೀಮಂತ ನಾಯಕನನ್ನು ರಾಜ್ಯ ಕಳೆದುಕೊಂಡಿದೆ ಎಂದು ಅವರು ಹೇಳಿದರು.
ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಭೀಮಣ್ಣ ಖಂಡ್ರೆೆ ತುಂಬಾ ಧೈರ್ಯವಂತರು ವಿಧಾನಸಭೆ ಕಲಾಪದಲ್ಲಿ ಅವರು ಹಾವನೂರು ವರದಿ ಹರಿದು ಹಾಕಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಆದರೆ ಬಡವರ ಪರ ನಿಲ್ಲುತ್ತಿಿದ್ದರು. ವ್ಯವಸ್ಥೆೆಯನ್ನು ಮುಲಾಜಿಲ್ಲದೆ ಟೀಕಿಸುತ್ತಿಿದ್ದರು ಎಂದರು.
ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಭೀಮಣ್ಣ ಖಂಡ್ರೆೆ ಸಿದ್ಧಾಾಂತ ಬದ್ಧ ರಾಜಕಾರಣಿ. ಎಂತ ಕಠಿಣ ಸ್ಥಿಿತಿಯಲ್ಲೂ ಅವರು ಸಿದ್ಧಾಾಂತವನ್ನು ಬಿಟ್ಟುಕೊಡುತ್ತಿಿರಲಿಲ್ಲ. ನಾನು ಯುವ ಕಾಂಗ್ರೆೆಸ್ ಮುಖಂಡನಾಗಿದ್ದ ವೇಳೆ ಅವರು ಸಾರಿಗೆ ಸಚಿವರಾಗಿದ್ದರು. ಆಗ ಬಸ್ ಪಾಸ್ ದರ ಏರಿಕೆಯಾಗಿತ್ತು. ನಾನು ಅವರನ್ನು ಭೇಟಿ ಮಾಡಿ ದರ ಇಳಿಸುವಂತೆ ಮನವಿ ಮಾಡಿದ್ದೆ. ಸ್ಥಳದಲ್ಲೇ ಅವರು ಬಸ್ ಪಾಸ್ ದರ ಇಳಿಸಿ ವಿದ್ಯಾಾರ್ಥಿಗಳ ನೆರವಿಗೆ ಬಂದಿದ್ದರು ಎಂದರು.
ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ ಭೀಮಣ್ಣ ಖಂಡ್ರೆೆ ಅವರು ನಮಗೆಲ್ಲ ಆದರ್ಶವಾಗಿದ್ದರು. ಯುವ ರಾಜಕಾರಣಿಗಳಿಗೆ ಅವರು ಯಾವತ್ತೂ ಆದರ್ಶ. ಅವರ ಧೈರ್ಯ, ನಿಲುವು ಎಲ್ಲರಿಗೂ ಇಷ್ಟವಾಗುತ್ತಿಿತ್ತು. ಉರ್ದು ಮಿಶ್ರಿತ ಕನ್ನಡ ಮಾತನಾಡುವುದನ್ನು ಕೇಳಲು ಸೊಗಸು ಎಂದು ಬಣ್ಣಿಿಸಿದರು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಾಮಿ ಅವರು ಮಾತನಾಡಿ, ಭೀಮಣ್ಣ ಖಂಡ್ರೆೆ ಕೊನೆವರೆಗೂ ಖಾದಿಯನ್ನು ಬಳಸಿ ಸರಳವಾಗಿ ಜೀವಿಸಿದರು. ಖಾದಿ ಬಿಟ್ಟರೆ ಅವರು ಬಳಸುತ್ತಿಿದ್ದದ್ದು ರೇಷ್ಮೆೆ ವಸವನ್ನು ಅವರು ರೇಷ್ಮೆೆಯ ಕೋಟು ಧರಿಸಿ ವಿಧಾನಸಭೆ ಬರುತ್ತಿಿದ್ದದ್ದು ಎಲ್ಲರನ್ನು ಸೆಳೆಯುತ್ತಿಿತ್ತು. ಇವರ ಉಡುಗೆಯನ್ನು ಮಾಜಿ ಸಿಎಂ ದಿ.ಎಸ್.ಎಂ.ಕೃಷ್ಣ ಕೂಡ ಹೊಗಳುತ್ತಿಿದ್ದರು ಎಂದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ