Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯಪಾಲರಿಂದಲೇ ರಾಷ್ಟ್ರಗೀತೆಗೆ ಅಗೌರವ: ಕಾಂಗ್ರೆಸ್ ಆರೋಪ ರಾಜ್ಯಪಾಲರಿಗೆ ಕಾಂಗ್ರೆಸ್ ನಿಂದ ಅಪಮಾನ - ಬಿಜೆಪಿ ಪ್ರತ್ಯಾರೋಪ

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.22:
ಜಂಟಿ ಅಧಿವೇಶನ ಸಂರ್ಭದಲ್ಲಿ ಕಾಂಗ್ರೆೆಸ್ ಶಾಸಕರು ರಾಜ್ಯಪಾಲರಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದರೆ, ರಾಜ್ಯಪಾಲರೇ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಕಾಂಗ್ರೆೆಸ್ ನಾಯಕರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ನಿರ್ಗಮಿಸುವ ವೇಳೆ ರಾಜ್ಯಪಾಲರಿಗೆ ಅಪಮಾನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಶಾಸಕರು ಆಗ್ರಹಿಸಿದರೆ, ರಾಷ್ಟ್ರಗೀತೆಗೆ ರಾಜ್ಯಪಾಲರು ಅಗೌರವ ತೋರಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆೆಸ್ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿಂದು ಆರೋಪಿಸಿದರು.
ಈ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆೆಸ್ ಶಾಸಕರ ನಡುವೆ ಪದೇಪದೆ ಮಾತಿನ ಚಕಮಕಿ, ವಾಗ್ವಾಾದ, ಆರೋಪ-ಪ್ರತ್ಯಾಾರೋಪ ನಡೆದು ಸದನದಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋೋಟ್ ಅವರು ಭಾಷಣ ಮಾಡಿದ ನಂತರ ರಾಜ್ಯಪಾಲರನ್ನು ಬೀಳ್ಕೊೊಟ್ಟ ಬಳಿಕ ಸದನ ಮತ್ತೆೆ ವಂದೇ ಮಾತರಂ ಗೀತೆಯೊಂದಿಗೆ ಸಮಾವೇಶಗೊಂಡಿತು.
ಆರಂಭದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಿಕೊಳ್ಳುವುದಾಗಿ ಹೇಳಿದರು.
ಈ ಹಂತದಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯಪಾಲರು ನಿರ್ಗಮಿಸುವ ವೇಳೆ ಸದನದಲ್ಲಿ ಅಗೌರವ ತೋರಿದ್ದವರ ಮೇಲೆ ಕ್ರಮ ಕೈಗೊಳ್ಳುವಂತೆ ಪತ್ರ ಕೊಟ್ಟಿಿದ್ದೇವೆ. ನೀವು ಸಂತಾಪ ಸೂಚನೆ ಮಂಡಿಸುವುದಾಗಿ ಹೇಳಿದ್ದೀರಿ. ಆದರೆ ಕಾನೂನು ಸಚಿವರು ಬೇರೊಂದು ವಿಷಯ ಪ್ರಸ್ತಾಾಪಿಸಲು ಮುಂದಾಗುತ್ತಿಿದ್ದಾರೆ. ಇದು ಹೇಗೆ ಎಂದು ಪ್ರಶ್ನಿಿಸಿದರು. ಈ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ನಾವು ಭಾಗವಹಿಸುತ್ತೇವೆ ಎಂದು ಹೇಳಿದರು. ಆಗ ಸಭಾಧ್ಯಕ್ಷರು ಕಾನೂನು ಸಚಿವರನ್ನು ಉದ್ದೇಶಿಸಿ ಅಂತಹ ಮಹತ್ವ ಏನಿದೆ? ಎಂದು ಪ್ರಶ್ನಿಿಸಿದರು.
ಆಗ ಅಶೋಕ್ ಅವರು ಸಂತಾಪ ಸೂಚನೆಗೂ ಮುನ್ನ ಬೇರೆ ವಿಷಯ ಪ್ರಸ್ತಾಾಪಿಸಬಹುದೇ?, ರಾಜ್ಯಪಾಲರು ನಿರ್ಗಮಿಸುವ ವೇಳೆ ವಿಘ್ನ ಮಾಡುತ್ತಾಾರೆ. ಎಂತಹ ರೀತಿ ಸರ್ಕಾರ ನಡೆಸುತ್ತಿಿದ್ದಾರೆ? ಎಂದು ಮೂದಲಿಸಿದರು. ಬಿಜೆಪಿ ಶಾಸಕರ ಆಕ್ಷೇಪದ ನಡುವೆಯೇ ಎಚ್.ಕೆ.ಪಾಟೀಲರು ಪ್ರಕಟಣೆಯೊಂದನ್ನು ಓದಲು ಆರಂಭಿಸಿದರು. ಆಗ ಬಿಜೆಪಿ ಸದಸ್ಯರು ತೀವ್ರವಾಗಿ ಅಡ್ಡಿಿಪಡಿಸಿ, ಸಂತಾಪ ಮಂಡನೆಯಾಗಲಿ. ಆನಂತರ ಈ ವಿಚಾರದ ಬಗ್ಗೆೆ ನಾವು ನೀಡಿರುವ ಪತ್ರದ ಬಗ್ಗೆೆಯೂ ಚರ್ಚೆಯಾಗಬೇಕು ಎಂದು ಒತ್ತಾಾಯಿಸಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯಪಾಲರು ಭಾಷಣ ಓದದೇ ಹೋಗಿದ್ದಾರೆ. ರಾಷ್ಟ್ರಗೀತೆ ಹಾಡುವವರೆಗೂ ಅವರು ಕಾಯದೇ ಹೋಗಿದ್ದಾರೆ ಎಂದಾಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾಾರೋಪ ನಡೆದು ಘೋಷಣೆಗಳನ್ನು ಕೂಗಿದರು. ಇದರಿಂದ ಸದನದಲ್ಲಿ ಗದ್ದಲ, ಗೊಂದಲ, ಕೋಲಾಹಲದ ಪರಿಸ್ಥಿಿತಿ ನಿರ್ಮಾಣವಾಯಿತು.
ಗದ್ದಲದ ನಡುವೆಯೇ ಮಾತು ಮುಂದುವರೆಸಿದ ಕಾನೂನು ಸಚಿವರು, ಸಂವಿಧಾನ ಕಾಪಾಡಬೇಕಾದ ರಾಜ್ಯಪಾಲರು ರಾಷ್ಟ್ರಗೀತೆ ಹಾಡಲು ಅವಕಾಶ ನೀಡದೇ ಅಪಮಾನ ಮಾಡಿದ್ದಾರೆ. ನಮ್ಮ ಈ ವಿಚಾರದ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸಭಾಧ್ಯಕ್ಷರನ್ನು ಕೋರಿದರು.
ಅಶೋಕ್ ಅವರು ವಿಧಾನಸಭೆ ನಿಯಮಾವಳಿಗಳ ಪುಸ್ತಕವನ್ನು ಪ್ರದರ್ಶಿಸಿ ಕಾನೂನು ಸಚಿವರಿಗೆ ಅವಕಾಶ ಕೊಟ್ಟಿಿದ್ದೀರಿ. ನಾವು ಅಧಿಕೃತವಾಗಿ ಪತ್ರ ಕೊಟ್ಟರೂ ನಮಗೆ ಅವಕಾಶ ಕೊಡಲಿಲ್ಲ. ಪಕ್ಷಪಾತ ಮಾಡುತ್ತಿಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಸುನೀಲ್‌ಕುಮಾರ್ ಕೂಡ ಇದಕ್ಕೆೆ ದನಿಗೂಡಿಸಿ ನಿಯಮಾವಳಿಗಳ ಪ್ರಕಾರ ಸದನ ನಡೆಸಬೇಡವೇ ಎಂದು ಪ್ರಶ್ನಿಿಸಿದರು. ಪದೇಪದೇ ಇದೇ ವಿಚಾರ ಪ್ರಸ್ತಾಾಪವಾಗಿ ಆಡಳಿತ ಮತ್ತು ಬಿಜೆಪಿ ಶಾಸಕರ ನಡುವೆ ಕಾವೇರಿದ ದನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಈ ಗದ್ದಲದ ನಡುವೆಯೇ ಸಭಾಧ್ಯಕ್ಷರು ಸಂತಾಪ ನಿರ್ಣಯವನ್ನು ಮಂಡಿಸಿದರು.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಸಂತಾಪ ನಿರ್ಣಯವನ್ನು ಬೆಂಬಲಿಸಿ ಅಗಲಿದ ಗಣ್ಯರಿಗೆ ಶ್ರದ್ಧಾಾಂಜಲಿ ಅರ್ಪಿಸಿದರು.
ಬಳಿಕ ಸುನೀಲ್‌ಕುಮಾರ್ ಮಾತನಾಡಿ, ಆಡಳಿತ ಪಕ್ಷದವರೊಂದಿಗೆ ಮಾತ್ರ ಸದನದ ನಡೆಸುವುದಾದರೆ ನಮಕ್ಷೇಕೆ ಕರೆಯಬೇಕು? ಎಂದು ಪ್ರಶ್ನಿಿಸಿದರು. ಅಶೋಕ್ ಮತ್ತೆೆ ಎದ್ದು ನಿಂತು ರಾಜ್ಯಪಾಲರಿಗೆ ಅಪಮಾನ ಮಾಡಿರುವ ವಿಚಾರದ ಬಗ್ಗೆೆ ಅವಕಾಶ ಕೊಡದೆ ಕಾನೂನು ಸಚಿವರಿಗೆ ಅವಕಾಶ ಕೊಟ್ಟಿಿದ್ದೀರಿ ಎಂದು ಆಕ್ಷೇಪಿಸಿದರು. ರಾಜ್ಯಪಾಲರಿಗೆ ಅಪಮಾನ ಮಾಡಿರುವ ಮೊದಲ ಅಪರಾಧಿ ಶಾಸಕ ಎಚ್.ಸಿ.ಬಾಲಕೃಷ್ಣ ಎಂದು ಆರೋಪಿಸಿದರು.
ಆಗ ಸಚಿವರಾದ ಪ್ರಿಿಯಾಂಕ ಖರ್ಗೆ, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭಾಧ್ಯಕ್ಷರು ಪರಿಸ್ಥಿಿತಿ ತಿಳಿಗೊಳಿಸುವ ಪ್ರಯತ್ನ ಮಾಡಿ, ಸಂತಾಪಕ್ಕೂ ಮುನ್ನ ಏಕೆ ಎಚ್.ಕೆ.ಪಾಟೀಲರಿಗೆ ಅವಕಾಶ ಮಾಡಿಕೊಡಲಾಯಿತು ಎಂಬುದನ್ನು ಸ್ಪಷ್ಟಪಡಿಸಿದರು. ಸುನೀಲ್‌ಕುಮಾರ್ ಮಾತನಾಡಿ, ಸಂತಾಪ ಸೂಚನೆಗೂ ಮುನ್ನ ಕಾನೂನು ಸಚಿವರು ರಾಷ್ಟ್ರಗೀತೆಗೆ ರಾಜ್ಯಪಾಲರು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ಕಾಂಗ್ರೆೆಸ್ ಪಕ್ಷ ಹುಬ್ಬಳ್ಳಿಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ಕೊಟ್ಟಿಿರಲಿಲ್ಲ ಎಂದಾಗ ಕಾಂಗ್ರೆೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಗೊಂದಲ ನಿರ್ಮಾಣವಾಯಿತು.
ಸುನೀಲ್‌ಕುಮಾರ್ ಮಾತು ಮುಂದುವರೆಸಿ ಪಾಕಿಸ್ತಾಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗ ನಿಮಗೆ ಏನೂ ಅನ್ನಿಿಸಲಿಲ್ಲ ಎಂದು ಛೇಡಿಸಿದರು.
ಸಚಿವ ಪ್ರಿಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್ ಕಚೇರಿಯಲ್ಲಿ ಏಕೆ ರಾಷ್ಟ್ರಧ್ವಜ ಹಾರಿಸಲಿಲ್ಲ ಎಂದು ಪ್ರಶ್ನಿಿಸಿದರು. ಎಚ್.ಸಿ.ಬಾಲಕೃಷ್ಣ ಮಧ್ಯಪ್ರವೇಶಿಸಿ ನೀವ್ಯಾಾರು ಹೇಳಲು, ಅದನ್ನು ಸಭಾಧ್ಯಕ್ಷರು ಹೇಳಬೇಕು ಎಂದು ಪ್ರತಿರೋಧ ವ್ಯಕ್ತಪಡಿಸಿದರು.
ಅಶೋಕ್ ಮಾತನಾಡಿ, ಮಹಾರಾಜರಿಂದ ಇಲ್ಲಿಯವರೆಗೂ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ಈ ಹಿಂದೆ ಹಂಸರಾಜ ಭಾರದ್ವಾಾಜ್, ಖುರ್ಷಿದ್ ಅಲಂ ಖಾನ್ ಅವರು ಭಾಷಣ ಮಂಡಿಸಿ ಹೋಗಿರುವ ನಿದರ್ಶನವಿದೆ. ಪ.ಬಂಗಾಳ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶಗಳು ಇದ್ದು ಕಡ್ಡಾಾಯವಾಗಿ ಓದಬೇಕೆಂದೇನೂ ಇಲ್ಲ ಆದರೆ ಅಡೆತಡೆ ಮಾಡಬಾರದು ಎಂದಿದೆ. ರಾಜ್ಯಪಾಲರು ನಿರ್ಗಮಿಸುವ ವೇಳೆ ಅಡ್ಡಿಿಪಡಿಸಿದವರ ಮೇಲೆ ಕ್ರಮವಾಗಬೇಕು. ಕಾನೂನು ಸಚಿವರು ಅಡೆತಡೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಸುದೀರ್ಘವಾಗಿ ನಡೆದ ಈ ವಿಚಾರದ ಚರ್ಚೆ ಬಗ್ಗೆೆ ನಾಳೆ ರೂಲಿಂಗ್ ನೀಡುವುದಾಗಿ ಸಭಾಧ್ಯಕ್ಷರು ಈ ವಿಚಾರದ ಬಗ್ಗೆೆ ತೆರೆ ಎಳೆದು ಸಂತಾಪ ಸೂಚನಾ ಕಲಾಪವನ್ನು ಮುಂದುವರೆಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ