Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರು ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ ವೆಚ್ಚ ಮಾಡಲು ತೀರ್ಮಾನ

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.04:
ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಿಗೆ 1.5 ಲಕ್ಷ ಕೋಟಿ ರೂ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘದ ಬಿಬಿಯುಎಲ್ ಜೈನ ವಿದ್ಯಾಾಲಯ 40 ವರ್ಷ ಪೂರೈಸಿದ ಮತ್ತು ಸಿಬಿ ಭಂಡಾರಿ ಜೈನ್ ಕಾಲೇಜಿನ 25 ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಜನಸಂಖ್ಯೆೆ ಮುಂದಿನ 20 ರಿಂದ 25 ವರ್ಷಗಳಲ್ಲಿನ ದ್ವಿಿಗುಣಗೊಳ್ಳಲಿದೆ. ನಗರದ ಮೂಲ ಸೌಕರ್ಯ ಕೊರತೆ ನಿವಾರಿಸಲು 1.5 ಲಕ್ಷ ಕೋಟಿ ರೂ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು ನಗರದ ಜವಾಬ್ದಾಾರಿ ತೆಗೆದುಕೊಂಡ ನಂತರ ತಾವು ಸೌಕರ್ಯಕ್ಕೆೆ ಹೂಡಿಕೆಗೆ ಆದ್ಯತೆ ಕೊಡುತ್ತಿಿದ್ದೇನೆ. ಸಂಚಾರಿ ಒತ್ತಡ ಇದ್ದರೂ ಸಹ ಯಾರೂ ಬೆಂಗಳೂರು ಬಿಟ್ಟು ಹೋಗಲು ತಯಾರಿಲ್ಲ. ನಗರದ ಮೂಲ ಸೌಕರ್ಯದ ಸ್ವರೂಪ ಬದಲಿಸಬೇಕಿದೆ. ಇಲ್ಲಿರುವ ಎಲ್ಲರಿಗೂ ಸಂಚರಿಸಲು ಸ್ವಂತ ವಾಹನಗಳು ಬೇಕು. ಯಾರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆೆಯಲ್ಲಿ ಓಡಾಡುವುದಿಲ್ಲ. 1.4 ಕೋಟಿ ಜನ ಸಂಖ್ಯೆೆ ಇದ್ದರೆ 1.3 ಕೋಟಿ ವಾಹನಗಳಿವೆ. ಹಾಗಾಗಿ ಸಂಚಾರಿ ಒತ್ತಡದ ಸಮಸ್ಯೆೆ ತೀವ್ರವಾಗಿದೆ ಎಂದು ಹೇಳಿದರು.
ಬೆಂಗಳೂರು ಅತ್ಯಂತ ಪರಮೋಚ್ಚ ನಗರ. ಇಲ್ಲಿ ಉತ್ತಮ ಸಂಸ್ಕೃತಿ ಇದ್ದು, ಗುಣಮಟ್ಟದ ಶಿಕ್ಷಣಕ್ಕೆೆ ವಿಪುಲ ಅವಕಾಶಗಳಿವೆ. ಇಲ್ಲಿ ಅತಿ ಹೆಚ್ಚಿಿನ ಮಾನವ ಸಂಪನ್ಮೂಲವಿದೆ. ಕ್ಯಾಾಲಿಪೋರ್ನಿಯಾದಲ್ಲಿ 35 ಲಕ್ಷ ಇಂಜಿನಿಯರ್‌ಗಳಿದ್ದು, ಬೆಂಗಳೂರು ಒಂದೇ ನಗರದಲ್ಲಿ 25 ಲಕ್ಷ ಇಂಜಿನಿಯರ್‌ಗಳಿದ್ದಾರೆ. ಇದು ಕೇವಲ ಸಿಲಿಕಾನ್ ನಗರವಷ್ಟೇ ಅಲ್ಲ, ಆರೋಗ್ಯ ನಗರಿ, ಪ್ರತಿಯೊಂದು ವಲಯದಲ್ಲೂ ಅಭಿವೃದ್ಧಿಿಯಾಗುತ್ತಿಿದೆ ಎಂದರು.
ಜೈನ ಶಿಕ್ಷಣ ಸಂಸ್ಥೆೆಯೂ ಸಹ ಉತ್ತಮ ವಿದ್ಯಾಾಭ್ಯಾಾಸವನ್ನು ನೀಡುತ್ತಿಿದೆ. ಎಲ್ಲಾ ಹಿರಿಯರು, ವಿದ್ಯಾಾರ್ಥಿಗಳಿಗೆ ಹೇಳುವುದಿಷ್ಟೇ, ನೀವು ಮಾರ್ಗವನ್ನು ಮರೆತರೆ, ನಿಮಗೆ ಲ ಸಿಗುವುದಿಲ್ಲ. ನಿಮ್ಮ ಮೂಲ, ನಿಮ್ಮ ಸಂಸ್ಥೆೆ, ನಿಮ್ಮ ಸಮಾಜ ನಿಮ್ಮ ವಿದ್ಯಾಾ ಸಂಸ್ಥೆೆ ಎಲ್ಲಾ ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವವರಿಗೆ ಪ್ರೋೋತ್ಸಾಾಹ ಕೊಡಿ. ಉತ್ತಮ ಶಿಕ್ಷಣ ನೀಡಿರುವ ಶಿಕ್ಷಕರು, ಆಡಳಿತ ಮಂಡಳಿ ಎಲ್ಲರನ್ನು ಸ್ಮರಿಸಬೇಕಾಗಿದೆ. ಜೈನ ಸಮಾಜ ಮಾಡುವ ಪ್ರತಿಯೊಂದು ಒಳ್ಳೆೆಯ ಕೆಲಸಗಳಿಗೆ ನಮ್ಮ ಸರ್ಕಾರ ಮತ್ತು ನಾನು ಸದಾ ಬೆಂಬಲಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದಕ್ಕೂ ಮುನ್ನ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮಾತನಾಡಿ, ಜೈನ ಸಮಾಜದ ವಿದ್ಯಾಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಬೇಕಾದಲ್ಲಿ ಸಾಮಾಜಿಕ ಮಾಧ್ಯಮದಿಂದ ದೂರ ಇದ್ದು, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕು ಎಂದು ಸಲಹೆ ಮಾಡಿದರು.
ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಮಾತನಾಡಿ, ಒಂದು ಕಾಲದಲ್ಲಿ ಲಕ್ಷ್ಮಿಿ ಪುತ್ರರಿಗೆ ಮನ್ನಣೆ ದೊರೆಯುತ್ತಿಿತ್ತು. ಹಣವಂತರು, ವ್ಯಾಾಪಾರಿಗಳಿಗೆ ಮಣೆ ಹಾಕುತ್ತಿಿದ್ದರು. ಆದರೆ ಇಂದು ಕಾಲ ಬದಲಾಗಿದ್ದು, ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋೋಗದಲ್ಲಿರುವವರಿಗೆ ಆದ್ಯತೆ ದೊರೆಯುತ್ತಿಿದೆ. ಶಿಕ್ಷಣಕ್ಕೆೆ ಪ್ರಧಾನ್ಯತೆ ದೊರೆಯುತ್ತಿಿರುವುದನ್ನು ಮನಗಂಡು ಉತ್ತಮ ಶಿಕ್ಷಣ ನೀಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಕೇಂದ್ರ ಸರ್ಕಾರದ ರಾಷ್ಟ್ರೀಯ ವ್ಯಾಾಪಾರಿಗಳ ಕಲ್ಯಾಾಣ ಮಂಡಳಿಯ ಅಧ್ಯಕ್ಷ ಸುನಿಲ್‌ಜೀಸಿಂಗ್ ಮಾತನಾಡಿ, ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘದ ಗಮನಾರ್ಹ ಸಾಧನೆ ಇತರರಿಗೆ ಮಾದರಿಯಾಗಿದೆ. ಪ್ರಗತಿಪರ ದೃಷ್ಟಿಿಕೋನ, ಮೌಲ್ಯಾಾಧಾರಿತ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣಕ್ಕೆೆ ನಿರಂತರ ಕೊಡುಗೆ ನೀಡಿದೆ ಎಂದು ಶ್ಲಾಾಘಿಸಿದರು.
ಸಂಘದ ಅಧ್ಯಕ್ಷ ಚಂಪಾಲಾಲ್ ಭಂಡಾರಿ ಮಾತನಾಡಿ, ಜೈನ ಶಿಕ್ಷಣ ಸಂಘದ ಅದ್ಭುತ ಬೆಳವಣಿಗೆಗೆ ಟ್ರಸ್ಟಿಿಗಳು, ಶಿಕ್ಷಕರು, ಹಳೆಯ ವಿದ್ಯಾಾರ್ಥಿಗಳು, ಪೋಷಕರು ಮತ್ತು ಹಿತೈಷಿಗಳ ಸಾಮೂಹಿಕ ಬೆಂಬಲ ಕಾರಣವಾಗಿದೆ. ಸಂಸ್ಥೆೆಯು ಶ್ರೇೇಷ್ಠತೆ ಮತ್ತು ಸಮಗ್ರ ಶಿಕ್ಷಣಕ್ಕೆೆ ಅಚಲವಾದ ಬದ್ಧತೆ ಹೊಂದಿದೆ ಎಂದರು.
ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷರಾದ ಹೇಮರಾಜ್, ಆಚರಣಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಜಿ ಪಿರ್ಗಲ್, ಕಾರ್ಯದರ್ಶಿ ಚಂಪಾಲಾಲ್, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘದ ಸದಸ್ಯರು ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ