Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

2026ರಲ್ಲಿ 72 ರಾಜ್ಯಸಭೆ ಸ್ಥಾಾನಗಳಿಗೆ ಚುನಾವಣೆ ಖರ್ಗೆ, ಎಚ್‌ಡಿಡಿ ರಾಜ್ಯಸಭಾ ಅವಧಿ ಶೀಘ್ರ ಅಂತ್ಯ

ಸುದ್ದಿಮೂಲ ವಾರ್ತೆ ನವದೆಹಲಿ, ಡಿ.31
ಎಐಸಿಸಿ ಅಧ್ಯಕ್ಷ ಮಲ್ಲಿಕಾಜುರ್ನನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸುಪ್ರೀೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಸೇರಿದಂತೆ ಹಲವು ಪ್ರಮುಖರ ರಾಜ್ಯಸಭೆ ಸದಸ್ಯತ್ವದ ಅವಧಿ ಬರುವ ಜೂನ್ ವೇಳೆಗೆ ಅಂತ್ಯವಾಗಲಿದೆ.
ಹೊಸ ವರ್ಷ 2026ರಲ್ಲಿ ರಾಜ್ಯ ಸಭೆಯ 72ಸ್ಥಾಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣೆಯಲ್ಲಿ ಹೆಚ್ಚು ಸ್ಥಾಾನ ಗೆಲ್ಲುವ ಸಾಧ್ಯತೆ ಇದೆ.
ಪ್ರಸ್ತುತ ರಾಜ್ಯ ಸಭೆಯಲ್ಲಿ ಎನ್ಡಿಿಎ ಸಂಖ್ಯಾಾಬಲ 40 ಇದ್ದು ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಈ ಸ್ಥಾಾನ 50ಕ್ಕೆೆ ಏರಿಕೆಯಾಗಲಿದೆ. ಇಂಡಿಯಾ ಮೈತ್ರಿಿಕೂಟದ ಸದಸ್ಯರ ಸಂಖ್ಯೆೆ 25 ಇದ್ದು 5 ಸ್ಥಾಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿಿದೆ.
ರಾಜ್ಯವಿಧಾನ ಸಭೆಗಳಲ್ಲಿ ವಿವಿಧ ಪಕ್ಷಗಳು ಹೊಂದಿರುವ ಸದಸ್ಯರ ಸಂಖ್ಯೆೆಯನ್ನು ಪರಿಗಣಿಸಿದಾಗ ಬಿಜೆಪಿಯು 37 ರಿಂದ 38 ಸ್ಥಾಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಇದರಲ್ಲಿ ಬಿಜೆಪಿ ಮಿತ್ರಪಕ್ಷಗಳಿಗೆ ಎಷ್ಟು ಸ್ಥಾಾನಗಳನ್ನು ಬಿಟ್ಟುಕೊಡಲಿದೆ ಎಂಬುದು ಇನ್ನು ತಿಳಿದು ಬಂದಿಲ್ಲ.
ಕಾಂಗ್ರೆೆಸ್‌ನ ಶಕ್ತಿಸಿನ್ಹ ಗೋಯಲ್ ಅವರ ಅವಧಿ ಜೂನ್‌ನಲ್ಲಿ ಅಂತ್ಯಗೊಳ್ಳಲಿದೆ. ಆಗ ರಾಜ್ಯಸಭೆಯಲ್ಲಿ ಗುಜರಾತ್‌ನಿಂದ ಕಾಂಗ್ರೆೆಸ್ ಸದಸ್ಯರೇ ಇಲ್ಲದಂತಾಗಲಿದೆ. ಸಿಪಿಎಂ ಸ್ಥಿತಿಯೂ ಇದಕ್ಕಿಿಂತ ಭಿನ್ನವಾಗಿಲ್ಲ. ಪಶ್ಚಿಮ ಬಂಗಾಳದಿಂದ ಆಯ್ಕೆೆಯಾಗಿರುವ ವಿಕಾಶ್ ರಂಜನ್ ಭಟ್ಟಾಚಾರ್ಯ ಅವರ ಅವಧಿ ಏಪ್ರಿಿಲ್‌ನಲ್ಲಿ ಅಂತ್ಯಗೊಳ್ಳಲಿದೆ. ಆಗ ರಾಜ್ಯಸಭೆಯಲ್ಲಿ ಕೇರಳದಿಂದ ಮಾತ್ರ ಸಿಪಿಎಂ ತನ್ನ ಪ್ರತಿನಿಧಿಯನ್ನು ಹೊಂದಲು ಸಾಧ್ಯವಾಗಲಿದೆ. ಎನ್ಸಿಿಪಿಯ (ಶರದ್ ಪವಾರ್) ಇಬ್ಬರು ರಾಜ್ಯಸಭೆ ಸದಸ್ಯರ ಅವಧಿ ಕೂಡ ಮುಗಿಯಲಿದ್ದು ಮಹಾವಿಕಾಸ್ ಅಘಾಡಿ ಒಳಜಗಳದಿಂದ ಪಕ್ಷವು ರಾಜ್ಯಸಭೆಯಲ್ಲಿ ಮತ್ತೆೆ ತನ್ನ ಪ್ರಾಾತಿನಿಧ್ಯ ಹೊಂದುವುದು ಕಷ್ಟವೇ ಆಗಲಿದೆ.
ರಾಜ್ಯಸಭೆಯಲ್ಲಿ ಸದಸ್ಯರ ಬಲಾಬಲ:
ಪ್ರಸ್ತುತ ರಾಜ್ಯ ಸಭೆಯಲ್ಲಿ 7 ನಾಮ ನಿರ್ದೇಶಿತ ಸದಸ್ಯರನ್ನು ಸೇರಿ ಬಿಜೆಪಿ ನೇತೃತ್ವದ ಎನ್‌ಡಿಎ 135 ಸಂಸದರ ಬೆಂಬಲ ಹೊಂದಿದೆ. ಇಂಡಿಯಾ ಒಕ್ಕೂಟವು 80 ಸಂಸದರ ಬೆಂಬಲ ಹೊಂದಿದೆ. 29 ಸಂಸದರು ಯಾವ ಮೈತ್ರಿಕೂಟದ ಭಾಗವೂ ಆಗಿಲ್ಲ.
2026ರ ನವೆಂಬರ್ ವೇಳೆಗೆ ಎಲ್ಲ ಸ್ಥಾನಗಳಿಗೆ ಚುನಾವಣೆ ಪೂರ್ಣಗೊಂಡಾಗ ರಾಜ್ಯ ಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 145 ಸ್ಥಾಾನ ತಲುಪುವ ಸಾಧ್ಯತೆ ಇದೆ. ಇಂಡಿಯಾ ಒಕ್ಕೂಟದ ಸದಸ್ಯರ ಸಂಖ್ಯೆೆ 75ಕ್ಕೆ ತಲುಪಲಿದೆ.
ಅವಧಿ ಅಂತ್ಯವಾಗುವ ಪ್ರಮುಖ ನಾಯಕರು
ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಹರಿವಂಶ, ಶರದ್ ಪವಾರ್, ರಾಮಗೋಪಾಲ್ ಯಾದವ, ಹರದೀಪ್ ಸಿಂಗ್ ಪುರಿ, ರಾಮದಾಸ್ ಅಠವಳೆ, ದಿಗ್ವಿಜಯಸಿಂಗ್, ಅಭಿಷೇಕ್ ಸಿಂಘ್ವಿ, ತಿರುಚ್ಚಿಶಿವ, ಉಪೇಂದ್ರ ಕುಶ್ವಾಾಹ, ಪ್ರಿಿಯಾಂಕಾ ಚತುರ್ವೇದಿ, ನಿವೃತ್ತ ಸಿಜೆಐ ರಂಜನ್ ಗೋಗೊಯಿ (ನಾಮ ನಿರ್ದೇಶಿತ) ಇವರ ಅವಧಿ ಅಂತ್ಯಗೊಳ್ಳಲಿದೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ