Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನ್ವಿ: ಮಾ.2 ರೊಳಗಾಗಿ ಅಕ್ರಮ ಗಣಿಗಾರಿಕೆಯ ದಂಡ ಪಾವತಿಸಿಕೊಳ್ಳಲು ಭರವಸೆ, ಉಪವಾಸ ಧರಣಿ ಅಂತ್ಯ

ಸುದ್ದಿಮೂಲ ವಾರ್ತೆ ಮಾನ್ವಿ, ೆ.21:
ತಾಲೂಕಿನ ನೀರಮಾನ್ವಿಿ ಗ್ರಾಾಮದ ವ್ಯಾಾಪ್ತಿಿಯ ಸರ್ವೆ ನಂ. 55/1 ರಲ್ಲಿ ಮೆ.ಸುಚಿತ್ ಮಿಲೇನಿಯಂನವರು ಅಕ್ರಮ ಕಲ್ಲು ಗಣಿಗಾರಿಕೆ ಮಾಡಿದ ನಿಮಿತ್ಯ ಗಣಿಗಾರಿಕೆ ಇಲಾಖೆಯು ವಿಧಿಸಿದ ದಂಡವನ್ನು ಒಂದು ವಾರದೊಳಗಾಗಿ ಪಾವತಿಸಿಕೊಳ್ಳುತ್ತೇವೆ ಎಂದು ಗಣಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ ಮೇರೆಗೆ ಕಳೆದ ಎರಡು ದಿನಗಳಿಂದ ತಾ.ಪಂ ಕಾರ್ಯಾಲಯದ ಆವರಣದಲ್ಲಿ ಸಮಾಜ ಸೇವಕ ಹಾಗೂ ಅಂಬೇಡ್ಕರ್ ಸೇನೆಯ ಮಾಜಿ ಜಿಲ್ಲಾಧ್ಯಕ್ಷ ಗುರುರಾಜ ನಾಗಲಾಪುರ ನೇತೃತ್ವದಲ್ಲಿ ನಡೆಯುತ್ತಿಿದ್ದ ಉಪವಾಸ ಧರಣಿ ಶನಿವಾರ ಅಂತ್ಯಗೊಂಡಿದೆ.
ಸಾಯಂಕಾಲ ಧರಣಿ ಸ್ಥಳಕ್ಕೆೆ ಆಗಮಿಸಿದ ಕಂದಾಯ ನಿರೀಕ್ಷಕ ಚರಣ್ ಸಿಂಗ್ ಮತ್ತು ಗಣಿ ಇಲಾಖೆಯ ಮಾನ್ವಿಿ ಉಸ್ತುವಾರಿ ಅಮೃತ ಇವರು ನೀರಮಾನವಿ ಗ್ರಾಾಮದ ವ್ಯಾಾಪ್ತಿಿಯ ಪಟ್ಟಾಾ ಜಮೀನು ಸರ್ವೆ ನಂ 55/1 ರಲ್ಲಿ ಮೆ.ಸುಚಿತ್ ಮಿಲೇನಿಯಂ ಪ್ರೈ.ಲಿ. ಇವರಿಗೆ ಕರ್ನಾಟಕ ಉಪಖನಿಜ ರಿಯಾಯಿತಿ 1994 ರ ತಿದ್ದುಪಡಿ 2023 ರ ನಿಯಮ 32 ರಡಿಯಲ್ಲಿ ಗಣಿ ಗುತ್ತಿಿಗೆ ಸಂ. ಆರ್.ಎ.ಐ.ಎನ್.ಎಸ್-62 ರಂತೆ ಕಟ್ಟಡ ಕಲ್ಲುಗಣಿ ಗುತ್ತಿಿಗೆ ಮಂಜೂರಾತಿ ನೀಡಲಾಗಿರುತ್ತದೆ. ಸದರಿಯವರಿಗೆ ನಿಯಮ ಉಲ್ಲಂಘನೆ ಸಂಬಂಧ 73,16, 494 ರೂ.ಗಳ ದಂಡ ವಿಧಿಸಿದ್ದು, ಸದರಿ ದಂಡದ ಮೊತ್ತವನ್ನು ಪಾವತಿಸಲು ಕಛೇರಿಯಿಂದ ದಿನಾಂಕ 6-1-2026 ಮತ್ತು 29-1-2026 ರಂದು ನೋಟೀಸ್ ಜಾರಿ ಮಾಡಿ ಮಾರ್ಚ್ 2 ರೊಳಗಾಗಿ ದಂಡ ಪಾವತಿಸಿಕೊಳ್ಳಲಾಗುವುದು ದಂಡ ಪಾವತಿಸಲು ವಿಲವಾದಲ್ಲಿ ಸದರಿಯವರಿಗೆ ನೀಡಿರುವ ಗುತ್ತಿಿಗೆಯನ್ನು ನಿಯಮಾನುಸಾರ ನಿಲಂಭನೆಗೊಳಿಸಿ ದಂಡದ ಮೊತ್ತವನ್ನು ಭೂಕಂದಾಯದ ಮೂಲಕ ವಸೂಲಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಲಿಖಿತ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗುರುರಾಜ ನಾಗಲಾಪುರ ಮಾತನಾಡಿ ಅಧಿಕಾರಿಗಳು ನೀಡಿದ ಸ್ಪಷ್ಟ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ದಂಡ ಪಾವತಿಸಿಕೊಳ್ಳದಿದ್ದರೆ ಗಣಿಗಾರಿಕೆ ಸ್ಥಳದಲ್ಲಿ ಉಪವಾಸ ಧರಣಿ ಹಮ್ಮಿಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಧರಣಿಯಲ್ಲಿ ದಲಿತ ಮುಖಂಡರಾದ ಸಂಗನಬಸವ, ಕಿರಣ್ ಉದ್ಬಾಾಳ್, ಹೊಳೆಯಪ್ಪ, ಶಿವಕುಮಾರ್, ಕೆ.ಹುಸೇನಪ್ಪ ನಂದಿಹಾಳ, ಶಿವಪುತ್ರ ಕುಪ್ಪೇಗುಡ್ಡ, ಈರಣ್ಣ ನಾಯಕ ಬುರಾಹನಪುರ ಮುಂತಾದವರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ