Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಲ್ಕು ಶಾಸಕರ ವ್ಯಾಪ್ತಿಯಿದ್ದರೂ ಈ ರಸ್ತೆಯಲ್ಲಿ ಅಡ್ಡಾಡುವುದು ಎಂದರೆ ಜೀವಹೋಗುತ್ತೆ

ಸುದ್ದಿಮೂಲ ವಾರ್ತೆ ಕೊಪ್ಪಳ, ಜ.24:
ಗ್ರಾಾಮೀಣ ರಸ್ತೆೆಗಳು ಹಾಳಾಗಿವೆ ಎಂಬುವುದು ಸಾಮಾನ್ಯ ಹೇಳಿಕೆ. ಆದರೆ ರಾಜ್ಯ ಹೆದ್ದಾಾರಿಯೇ ಹಾಳಾಗಿದೆ. ಇಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ನಾಲ್ಕೈದು ಜಿಲ್ಲೆೆಗೆ ಸಂಪರ್ಕ ಕಲ್ಪಿಿಸುತ್ತದೆ. ಈ ಹೆದ್ದಾಾರಿಯ ವ್ಯಾಾಪ್ತಿಿಯಲ್ಲಿ ನಾಲ್ಕು ಜನ ಶಾಸಕರು ಇದ್ದಾಾರೆ. ಆದರೆ ರಾಜ್ಯ ಹೆದ್ದಾಾರಿಯ ದುಃಸ್ಥಿಿತಿಗೆ ವಾಹನ ಚಾಲಕರು ಹಿಡಿಶಾಪ ಹಾಕುತ್ತಿಿದ್ದಾಾರೆ
ನಾಗರಿಕ ಸೌಲಭ್ಯಗಳಲ್ಲಿ ರಸ್ತೆೆಯೂ ಒಂದು, ಸರಕಾರಕ್ಕೆೆ ರಸ್ತೆೆ ಸುವ್ಯವಸ್ಥಿಿತವಾಗಿರುವಂತೆ ನೋಡಿಕೊಳ್ಳುವುದು ಆದ್ಯ ಕರ್ತವ್ಯ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ರಾಜ್ಯ ಹೆದ್ದಾಾರಿಯಲ್ಲಿ ಸಂಚರಿಸಲು ಪ್ರಯಾಣಿಕರು ಹರಸಾಹಸ ಪಡಬೇಕಾದ ಅನಿವಾರ್ಯತೆ ಇದೆ. ಇದು ಕೊಪ್ಪಳ ದಿಂದ ವಿಜಯಪುರ. ಬಾಗಲಕೋಟೆ. ಕನಕಗಿರಿ ಸೇರಿ ವಿವಿದೆಡೆ ಹೋಗುವ ಪ್ರಯಾಣಿಕರಿಗೆ ಅನುಭವವಾಗುತ್ತಿಿದೆ.
ಕೊಪ್ಪಳದಿಂದ ಕ್ಯಾಾದಿಗುಪ್ಪಾಾದವರೆಗೂ ಇರುವ ರಾಜ್ಯ ಹೆದ್ದಾಾರಿ 36ರಲ್ಲಿ ಕಳೆದ ಮೂರು ವರ್ಷಗಳಿಂದ ರಸ್ತೆೆಗಿಂತ ಹೆಚ್ಚು ಗುಂಡಿಗಳಿವೆ. ವಾಹನ ಚಾಲಕರು ಗುಂಡಿಗಳನ್ನು ತಪ್ಪಿಿಸಿ ಪ್ರಯಾಣಿಸಲು ಹರಸಾಹಸ ಪಡಬೇಕು. ಕೊಪ್ಪಳ. ಇರಕಲ್ ಗಡ. ಬೇವೂರು. ಕುಷ್ಟಗಿ ಮಾರ್ಗವಾಗಿ ಹೋಗುವ ಈ ರಾಜ್ಯ ಹೆದ್ದಾಾರಿ ವ್ಯಾಾಪ್ತಿಿಗೆ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಾಳ. ಗಂಗಾವತಿ ಶಾಸಕ ಜನಾರ್ದನರಡ್ಡಿಿ. ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿಿ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಬರುತ್ತಾಾರೆ. ಆದರೆ , ಇವರಾರಿಗೂ ಈ ರಸ್ತೆೆ ಹದೆಗೆಟ್ಟಿಿದ್ದು ಕಾಣುತ್ತಿಿಲ್ಲ. ರಸ್ತೆೆ ನಿರ್ವಹಣೆ ಮಾಡುವ ಲೋಕೋಪಯೋಗಿ ಇಲಾಖೆಯು ಗಾಢ ನಿದ್ರೆೆಯಲ್ಲಿದೆ ಎಂದು ವಾಹನ ಚಾಲಕರು ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾಾರೆ.
ಗುಂಡಿ ತಪ್ಪಿಿಸಲು ಹೋಗಿ ಅನೇಕ ಬಾರಿ ಅಪಘಾತಗಳಾಗಿವೆ. ಕೊಪ್ಪಳದಿಂದ ಕುಷ್ಟಗಿಯವರೆಗೂ 50 ಕಿಮೀ ದೂರ ಪ್ರಯಾಣಿಸಲು ವಾಹನ ಚಾಲಕರು ಒಂದುವರೆ ಎರಡು ತಾಸು ತೆಗೆದುಕೊಳ್ಳುತ್ತಾಾರೆ. ಸರಕಾರಕ್ಕೆೆ ಗುಂಡಿಗಳನ್ನು ಮುಚ್ಚಿಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆೆ ವ್ಯವಸ್ಥೆೆ ಮಾಡದಷ್ಟು ಬಡತನ ಬಂದಿದೆ ಎಂದು ಕಾಂಗ್ರೆೆಸ್ ಸರಕಾರದ ವಿರುದ್ದ ಪ್ರಯಾಣಿಕರು ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾಾರೆ.
ರಾಜ್ಯ ಹೆದ್ದಾಾರಿಯೇ ಈ ಸ್ಥಿಿತಿಯಲ್ಲಿದೆ ಇನ್ನೂ ಗ್ರಾಾಮೀಣ ರಸ್ತೆೆಗಳು ಹೇಗೆ ಇರಬೇಕೆಂದು ಜನಪ್ರತಿನಿಧಿಗಳು ಹಾಗೂ ಸರಕಾರಕ್ಕೆೆ ಹಿಡಶಾಪ ಹಾಕುತ್ತಾಾ ಸಂಚರಿಸುತ್ತಿಿದ್ದಾಾರೆ. ಸಾವಿರಾರು ವಾಹನಗಳ ಓಡಾಡುವ ರಸ್ತೆೆ ರಿಪೇರಿ ಮಾಡಬೇಕೆಂದು ಆಗ್ರಹಿಸುತ್ತಿಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ