Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಚ ಗ್ಯಾರಂಟಿಗಳು, ವಿವಿಧ ಕ್ಷೇತ್ರದ ಸಾಧನೆಗಳ ಬಗ್ಗೆ ಬೆನ್ನು ತಟ್ಟಿಕೊಂಡ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸಾಧನೆಯ ರಿಪೋರ್ಟ್ ಕಾರ್ಡ್

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.22:
ಗ್ಯಾಾರಂಟಿ ಯೋಜನೆಗಳಿಂದ ಶೇ 89 ರಷ್ಟು ಲಾನುಭವಿಗಳು ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ ಕಂಡಿದ್ದೇವೆ ಎಂದಿದ್ದಾರೆ ಎಂದು ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಾಪಿಸಿದೆ.
ಸದನದಲ್ಲಿ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ್ದ ಭಾಷಣ ಓದದೆ ತಮ್ಮದೇ ಭಾಷಣವನ್ನು ಓದಿದರು. ಆದರೆ, ಲಿಖಿತ ಭಾಷಣದಲ್ಲಿ ಸರ್ಕಾರ ತನ್ನ ಸಾಧನೆಯ ರಿಪೋರ್ಟ್ ಕಾರ್ಡ್ ಬಿಚ್ಚಿಿಟ್ಟಿಿದೆ.
ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ ಪಂಚ ಗ್ಯಾಾರಂಟಿ ಸೇರಿದಂತೆ ಸರ್ಕಾರದ ಪ್ರಮುಖ ಸಾಧನೆಗಳ ಬಗ್ಗೆೆ ಪ್ರಸ್ತಾಾಪಿಸಲಾಗಿದೆ. ಒಟ್ಟು 46 ಪುಟಗಳ 122 ಪ್ಯಾಾರಾಗಳ ಭಾಷಣದಲ್ಲಿ ಕೆಂದ್ರ ಸರ್ಕಾರದ ವಿರುದ್ಧ ಕಟು ಟೀಕೆಯ ಜೊತೆಗೆ ರಾಜ್ಯ ಸರ್ಕಾರಗಳ ಯೋಜನೆ, ಸಾಧನೆಗಳ ಬಗ್ಗೆೆ ಪ್ರಸ್ತಾಾಪ ಮಾಡಲಾಗಿದೆ.
ಗೃಹ ಜ್ಯೋೋತಿ, ಗೃಹಲಕ್ಷ್ಮಿಿ, ಅನ್ನಭಾಗ್ಯ, ಶಕ್ತಿಿ ಮತ್ತು ಯುವನಿಧಿ ಎಂಬ ಐದು ಮಹತ್ವಾಾಕಾಂಕ್ಷಿ ಗ್ಯಾಾರಂಟಿ ಯೋಜನೆಗಳನ್ನು ಯಶಸ್ವಿಿಯಾಗಿ ಜಾರಿಗೆ ತರಲಾಗಿದೆ. ಇವುಗಳಿಗೆ ಇದುವರೆಗೆ 1,16,706 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಜನರು ಗ್ಯಾಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಿಕ ಆಹಾರ, ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಾಗಿ ವಿನಿಯೋಗಿಸುತ್ತಿಿದ್ದಾರೆ ಎಂದು ವಿವರಿಸಲಾಗಿದೆ.
‘ಹಸಿವು ಮುಕ್ತ ಕರ್ನಾಟಕ’
ಭಿಹಸಿವು ಮುಕ್ತ ಕರ್ನಾಟಕಭಿದ ಕನಸನ್ನು ನನಸು ಮಾಡುತ್ತಿಿರುವ ’ಅನ್ನಭಾಗ್ಯ’ ಯೋಜನೆಯಿಂದಾಗಿ ಶೇ.83 ರಷ್ಟು ಮಹಿಳೆಯರು ಗ್ಯಾಾರಂಟಿ ಯೋಜನೆಗಳಿಂದ ಆದ ಉಳಿತಾಯದ ಹಣದಲ್ಲಿ ಬೇಳೆಕಾಳು, ತರಕಾರಿ, ಹಣ್ಣು, ಮೊಟ್ಟೆೆ ಮತ್ತು ಮಾಂಸ ಮುಂತಾದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಕುಟುಂಬದ ಪೌಷ್ಠಿಿಕತೆಯನ್ನು ಹೆಚ್ಚಿಿಸಿಕೊಳ್ಳುತ್ತಿಿದ್ದಾರೆ. ‘ಗೃಹಲಕ್ಷ್ಮಿಿ’ ಯೋಜನೆಯಿಂದ ಶೇ.80 ರಷ್ಟು ಮಹಿಳೆಯರು, ತಾವು ಹೆಚ್ಚು ಆರ್ಥಿಕವಾಗಿ ಸ್ವತಂತ್ರರಾಗಿರುವುದಾಗಿ ಹಾಗೂ ಕುಟುಂಬದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿಿರುವುದಾಗಿ ಅಭಿಪ್ರಾಾಯಪಟ್ಟಿಿದ್ದಾರೆ. ಅಲ್ಲದೆ, ಶೇ.37 ರಷ್ಟು ಲಾನುಭವಿಗಳು ಗ್ಯಾಾರಂಟಿ ಯೋಜನೆಗಳ ಹಣವನ್ನು ಕುಟುಂಬದ ಹಳೆಯ ಸಾಲ ಮರುಪಾವತಿಸಲು ಬಳಸುವ ಮೂಲಕ ಸಾಲ ಮುಕ್ತರಾಗುತ್ತಿಿದ್ದಾರೆ ಎಂದು ಪ್ರಸ್ತಾಾಪಿಸಲಾಗಿದೆ.
ರೈತರ ಖಾತೆಗೆ ಜಮೆ:
ಈ ವರ್ಷ ಉಂಟಾದ ಅತಿವೃಷ್ಟಿಿ ಮತ್ತು ಪ್ರವಾಹದಿಂದ 14.21 ಲಕ್ಷ ಹೆರ್ಕ್ಟೇ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿತ್ತು. ರಾಜ್ಯದ ಪಾಲಿನ ಎಸ್‌ಡಿಆರ್‌ಎ್ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ರೂ.1032 ಕೋಟಿ ಸೇರಿಸಿ ರೂ.2,250 ಕೋಟಿ ಪರಿಹಾರವನ್ನು 14,21,615 ಸಂತ್ರಸ್ತ ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಮಾನದಂಡಗಳಿಗಿಂತ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರಿಗೆ 8500 ರೂ.ಗಳನ್ನು ರಾಜ್ಯ ಸರ್ಕಾರವು ನೀಡಿದೆ. ಪ್ರಕೃತಿ ವಿಕೋಪದಿಂದ ಮನೆ, ಜೀವಹಾನಿ ಮತ್ತು ಜಾನುವಾರು ಹಾನಿ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ರೂ.46.5 ಕೋಟಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಸರ್ಕಾರ ವಿವರಿಸಿದೆ.
ರೈತರಿಗೆ ನೀಡುವ ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆೆಯವರೆಗಿನ ಸೇವೆಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ಒದಗಿಸಲು ಮಂಡ್ಯ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಮೈಸೂರು ಮತ್ತು ಬಾಗಲಕೋಟೆ, ಈ ಜಿಲ್ಲೆಗಳಲ್ಲಿ ’ತೋಟಗಾರಿಕೆ ಕಿಸಾನ್ ಮಾಲ್’ಗಳನ್ನು ಸ್ಥಾಾಪಿಸಲಾಗಿದೆ. ಬೆಳೆಗಾರರ ಅನುಕೂಲಕ್ಕಾಾಗಿ 14,000 ಮೆಟ್ರಿಿಕ್ ಟನ್ ಸಾಮರ್ಥ್ಯದ 6 ಶೀತಲ ಘಟಕಗಳನ್ನು ನಿರ್ಮಿಸಲಾಗುತ್ತಿಿದೆ. ತೋಟಗಾರಿಕೆ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ನೂತನ ತೋಟಗಾರಿಕೆ ಮಹಾವಿದ್ಯಾಾಲಯವನ್ನು ಸ್ಥಾಾಪಿಸಲು ರೂ.40 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ರಾಜ್ಯದ 9.07 ಲಕ್ಷ ಹಾಲು ಉತ್ಪಾಾದಕರಿಗೆ ಪ್ರೋೋತ್ಸಾಾಹಧನ ನೀಡುವ ಕ್ಷೀರಧಾರೆ ಯೋಜನೆಯಡಿಯಲ್ಲಿ ಲೀಟರಿಗೆ 5 ರೂಪಾಯಿ ಪ್ರೋೋತ್ಸಾಾಹ ಧನ ನೀಡಲಾಗುತ್ತಿಿದೆ. ಹಿಂದಿನ ಸರ್ಕಾರ ಬಾಕಿ ಉಳಿಸಿದ್ದ ರೂ.600 ಕೋಟಿ ಸೇರಿ ಒಟ್ಟಾಾರೆ 4,130 ಕೋಟಿ ರೂ.ಗಳ ಪ್ರೋೋತ್ಸಾಾಹಧನವನ್ನು ಸರ್ಕಾರ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ. ’ಅನುಗ್ರಹ’ ಯೋಜನೆಯಡಿ ಆಕಸ್ಮಿಿಕವಾಗಿ ಮರಣ ಹೊಂದಿದ ಜಾನುವಾರು ಮತ್ತು ಕುರಿ/ಮೇಕೆಗಳ ಮಾಲೀಕರಿಗೆ ನಮ್ಮ ಸರ್ಕಾರ ರಚನೆಯಾದಾಗಿನಿಂದ 95.41 ಕೋಟಿ ರೂ. ಪರಿಹಾರ ಧನ ವಿತರಿಸಲಾಗಿದೆ. ಪಶು ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲು ಮೊದಲ ಹಂತದಲ್ಲಿ 20 ತಾಲೂಕುಗಳಲ್ಲಿ ಪಾಲಿ ಕ್ಲಿಿನಿಕ್‌ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿಿದೆ ಎಂದು ವಿವರಿಸಿದ್ದಾರೆ.
ತೊಗರಿ ಖರೀದಿ ಕೇಂದ್ರಗಳನ್ನು ಜನವರಿಯ ಬದಲಾಗಿ ಡಿಸೆಂಬರಿನಲ್ಲಿಯೇ ತೆರೆಯಬೇಕೆಂದು ಒತ್ತಡ ಬಂದ ಕಾರಣ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಈಗಾಗಲೇ 33,729 ಕ್ವಿಿಂಟಾಲ್ ತೊಗರಿಯನ್ನು ಖರೀದಿಸಲಾಗಿದೆ ಎಂದು ಉಲ್ಲೇಖಿಸಿದೆ.
80,997 ಕೋಟಿ ವಿದೇಶಿ ಹೂಡಿಕೆ:
ರಾಜ್ಯದ ಸಮಗ್ರ ಅಭಿವೃದ್ಧಿಿಗೆ ಮತ್ತು ‘ಬಿಯಾಂಡ್ ಬೆಂಗಳೂರು ಅಭಿವೃದ್ಧಿಿ ಪರಿಕಲ್ಪನೆಗೆ ’ಕರ್ನಾಟಕ ಕೈಗಾರಿಕಾ ನೀತಿ 2025-30’ ಅನ್ನು ಜಾರಿಗೆ ತಂದಿದೆ. ಈ ನೀತಿಯಿಂದಾಗಿ ಅಂದಾಜು 20 ಲಕ್ಷ ಉದ್ಯೋೋಗಾವಕಾಶಗಳು ಸೃಷ್ಟಿಿಯಾಗಲಿವೆ. 2025-26ನೇ ಸಾಲಿನ ಏಪ್ರಿಿಲ್‌ನಿಂದ ಸೆಪ್ಟೆೆಂಬರ್ ಅಂತ್ಯದವರೆಗೆ ರೂ.80,997 ಕೋಟಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾಾನದಲ್ಲಿದೆ. ರ್ತು ವಲಯದಲ್ಲಿ ರಾಜ್ಯವು ಮೊದಲ ಸ್ಥಾಾನವನ್ನು ಕಾಯ್ದುಕೊಂಡಿದ್ದು, 99,309 ಮಿಲಿಯನ್ ಯು.ಎಸ್. ಡಾರ್ಲ ಮೌಲ್ಯದ ಸರಕುಗಳನ್ನು ರ್ತು ಮಾಡಿದೆ. ಇದರ ಜೊತೆಗೆ ಐಟಿ ವಲಯದಲ್ಲೂ ರಾಜ್ಯವು ಅಗ್ರ ಸ್ಥಾಾನವನ್ನು ಕಾಯ್ದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.
2025-26 ರಲ್ಲಿ ಮುಖ್ಯಮಂತ್ರಿಿಗಳ ಮೂಲಸೌಕರ್ಯ ಅಭಿವೃದ್ಧಿಿ ಯೋಜನೆಯಡಿ 8,000 ಕೋಟಿ ರೂ.ಗಳನ್ನು ಒದಗಿಸಿ ಕಾರ್ಯಕ್ರಮಗಳ ಅನುಷ್ಠಾಾನ ಪ್ರಾಾರಂಭಿಸಲಾಗಿದೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯದ 259 ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಾಯೋಗಿಕವಾಗಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಪೂರ್ವ ಪ್ರಾಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಮಕ್ಕಳ ರಕ್ಷಣೆಯ ವಿಷಯದಲ್ಲಿ ಕಠಿಣ ನಿಲುವು ತಳೆದಿರುವ ಸರ್ಕಾರವು, ಬಾಲ್ಯವಿವಾಹಕ್ಕೆೆ ಪ್ರಯತ್ನ, ಸಿದ್ಧತೆ ಮತ್ತು ನಿಶ್ಚಿಿತಾರ್ಥಗಳನ್ನು ಅಪರಾಧವನ್ನಾಾಗಿಸಲು ’ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ 2025’ ರ ಜಾರಿಗೆ ತಂದಿದೆ ಎಂದು ಉಲ್ಲೇಖಿಸಲಾಗಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಾಣ ಮಂಡಳಿಯ ಮೂಲಕ 14.34 ಲಕ್ಷ ಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಸೌಲಭ್ಯಗಳಡಿ 1115 ಕೋಟಿ ರೂ.ಗಳ ಸಹಾಯಧನವನ್ನು ವಿತರಿಸಿದೆ. ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ರಾಜ್ಯಾಾದ್ಯಂತ ಇರುವ 100 ಸಂಚಾರಿ ಆರೋಗ್ಯ ಕ್ಲಿಿನಿಕ್‌ಗಳಿಂದ 6.75 ಲಕ್ಷ ಕಾರ್ಮಿಕರು ಇದರ ಪ್ರಯೋಜನ ಪಡೆದಿದ್ದಾರೆ. ವಲಸೆ ಕಾರ್ಮಿಕರಿಗೆ ಸುರಕ್ಷಿತ ವಸತಿ ಕಲ್ಪಿಿಸಲು 5 ಜಿಲ್ಲೆಗಳಲ್ಲಿ 6 ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ