Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ಮೌನ ಆಮೆಗತಿಯಲ್ಲಿ ಸರ್ಕಾರಿ ಆಸ್ಪತ್ರೆಯ ನವೀಕರಣ ನವಜಾತ ಶಿಶು ಘಟಕ, ಸಿಸೇರಿಯನ್ ಹೆರಿಗೆ, ಆಪರೇಷನ್ ವಾರ್ಡ್ ಬಂದ್..!

ಶಂಕರ ಈ.ಹೆಬ್ಬಾಳ
ಮುದ್ದೇಬಿಹಾಳ (ಜಿ.ವಿಜಯಪುರ), ೆ.21:
ಇಲ್ಲಿನ ಹಡಲಗೇರಿ ರಸ್ತೆೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆೆಗೆ ಸದ್ಯಕ್ಕೆೆ ಉಸಿರಾಟದ ಸಮಸ್ಯೆೆ ಇದೆ ಎಂದು ತುರ್ತು ಚಿಕಿತ್ಸೆೆಗಾಗಿ ನವಜಾತ ಶಿಶುಗಳನ್ನಾಾಗಲಿ, ಸೀಸೆರಿಯನ್ ಹೆರಿಗೆಗೆಂದು ಗರ್ಭಿಣಿಯರನ್ನಾಾಗಲಿ, ಸಂತಾನಹರಣ ಶಸಚಿಕಿತ್ಸೆೆಗೆಂದು ಬಾಣಂತಿಯರನ್ನಾಾಗಲಿ ಕರೆದುಕೊಂಡು ಬಂದರೆ ನಿಮಗೆ ಚಿಕಿತ್ಸೆೆ ಬದಲು ಜಿಲ್ಲಾಾಸ್ಪತ್ರೆೆಗೆ ಅಥವಾ ಬೇರೊಂದು ಆಸ್ಪತ್ರೆೆಯನ್ನು ನೋಡಿಕೊಳ್ಳಿಿ ಎಂಬ ಉತ್ತರ ಇಲ್ಲಿನ ಆಸ್ಪತ್ರೆೆಯ ವೈದ್ಯರು, ಸಿಬ್ಬಂದಿಯಿಂದ ಬರುತ್ತದೆ.
ಕಾರಣ ಇಷ್ಟೇ ಕಳೆದ ಒಂದೂವರೆ ತಿಂಗಳಿನಿಂದ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆೆಯಲ್ಲಿ ಈ ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ.ಅದಕ್ಕೆೆ ಕೊಟ್ಟಿಿರುವ ನೆಪ ಆಸ್ಪತ್ರೆೆಯ ವಿವಿಧ ಕೊಠಡಿಗಳ ದುರಸ್ತಿಿ ಕಾರ್ಯ. ಸರ್ಕಾರ ಆಸ್ಪತ್ರೆೆಯ ನವೀಕರಣಕ್ಕೆೆ ಆದೇಶ ಕೊಟ್ಟಿಿರುವುದೇನೋ ನಿಜ.ಆದರೆ ಇದನ್ನು ಕೈಗೊಂಡಿರುವ ಗುತ್ತಿಿಗೆದಾರರು ಮಾತ್ರ ಬಡವರು,ಮಧ್ಯಮ ವರ್ಗದವರ ಆರೋಗ್ಯದ ಸೌಲಭ್ಯಕ್ಕೆೆ ಕೊಡಲಿಪೆಟ್ಟು ಕೊಟ್ಟಿಿರುವುದು ಕಂಡು ಬರುತ್ತಿಿದೆ.
ದುರಸ್ತಿಿ ಕಾರ್ಯ ಅತ್ಯಂತ ಆಮೆಗತಿಯಲ್ಲಿ ನಡೆದಿದ್ದು ಬಡವರು ಅನಾರೋಗ್ಯಕ್ಕೆೆ ತುತ್ತಾಾಗಿ ಆಸ್ಪತ್ರೆೆಗೆ ಬಂದಲ್ಲಿ ಸೂಕ್ತ ಚಿಕಿತ್ಸೆೆ ದೊರೆಯುವುದು ದುರ್ಲಭದ ಮಾತು ಎಂಬುದು ಆಸ್ಪತ್ರೆೆಯ ಸದ್ಯದ ವ್ಯವಸ್ಥೆೆ ಕಂಡವರಿಗೆ ತಿಳಿದು ಬರುತ್ತದೆ.
ಬಂದ್ ಆಗಿರುವ ಸೌಲಭ್ಯಗಳು : ಪ್ರತಿ ದಿನ ಸರ್ಕಾರಿ ಆಸ್ಪತ್ರೆೆಯಲ್ಲಿ ಸಹಜ ಹೆರಿಗೆ ಹೊರತುಪಡಿಸಿದರೆ ಸುಲಭವಲ್ಲದ ಹೆರಿಗೆ ಇದ್ದವರಿಗೆ ಸುರಕ್ಷಿತವಾಗಿ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸುವ ವ್ಯವಸ್ಥೆೆ ಬಡವರಿಗೆ ಭಾರೀ ಅನುಕೂಲ ಒದಗಿತ್ತು.ಖಾಸಗಿ ಆಸ್ಪತ್ರೆೆಗಳಲ್ಲಿ 50-60 ಸಾವಿರ ರೂ.ಕೊಟ್ಟು ಸಿಸೇರಿಯನ್ ಮಾಡಿಸಿಕೊಳ್ಳುವ ಸ್ಥಿಿತಿಯಲ್ಲಿ ಬಡವರು ಇರುವುದಿಲ್ಲ.ಸರ್ಕಾರಿ ಆಸ್ಪತ್ರೆೆಯ ಸೌಲಭ್ಯವನ್ನು ನಂಬಿಕೊಂಡವರಿಗೆ ಇದೀಗ ಈ ಸೇವೆ ಸ್ಥಗಿತಗೊಳಿಸಿರುವುದು ನುಂಗಲಾರದ ತುತ್ತಾಾಗಿ ಪರಿಣಮಿಸಿದೆ.ಆಗ ತಾನೇ ಜನಿಸಿದ ನವಜಾತ ಶಿಶುಗಳ ಆರೈಕೆಗಾಗಿ ಇದ್ದ ಘಟಕವನ್ನು ದುರಸ್ತಿಿಗೆಂದು ಅಲ್ಲಿದ್ದ ಲಕ್ಷಾಂತರ ರೂ.ಮೌಲ್ಯದ ಯಂತ್ರೋೋಪಕರಣಗಳನ್ನು ಮೂಲೆಯಲ್ಲಿ ಇರಿಸಲಾಗಿದೆ.ಸರಕಾರಿ ಆಸ್ಪತ್ರೆೆ ನಂಬಿಕೊಂಡು ನವಜಾತ ಶಿಶುಗಳ ತುರ್ತು ಚಿಕಿತ್ಸೆೆಗೆಂದು ಹೋದರೆ ಅಲ್ಲಿ ಮಗು ವಾಪಸ್ ಬರುವುದು ಗ್ಯಾಾರಂಟಿ ಇಲ್ಲ ಎಂಬ ವಾತಾವರಣವನ್ನು ಗುತ್ತಿಿಗೆದಾರರು ಮಾಡಿಟ್ಟಿಿದ್ದಾಾರೆ.
ಸೇವೆಯಲ್ಲಿರುವ ವೈದ್ಯರು, ನರ್ಸಿಂಗ್ ಸಿಬ್ಬಂದಿಗೂ ಸೌಲಭ್ಯ ದುರಸ್ತಿಿಗೆ ಹಿನ್ನಡೆ : ಸರ್ಕಾರಿ ಆಸ್ಪತ್ರೆೆಯಲ್ಲಿ ದಿನದ 24ಗಿ7 ಸೇವೆಯಲ್ಲಿದ್ದು ವೈದ್ಯರ ವಿಶ್ರಾಾಂತಿಗಾಗಿ ಇರುವ ಕೊಠಡಿಗಳಲ್ಲಿ ಸ್ನಾಾನ,ಶೌಚಗೃಹದ ಸೌಲಭ್ಯ ಕಲ್ಪಿಿಸುವ ಕೆಲಸಗಳು ಭಾರೀ ನಿಧಾನಗತಿಯಲ್ಲಿ ನಡೆದಿವೆ.
ಆಸ್ಪತ್ರೆೆಯ ಶೌಚಗೃಹದ ಕೊಳಚೆ ನೀರು ಹೋಗುವುದಕ್ಕೆೆ ಬೇಕಾದ ಸಂಪರ್ಕ ಕೊಡುವ ಕೆಲಸವನ್ನು ತ್ವರಿತವಾಗಿ ಮಾಡದ್ದರಿಂದ ರಾತ್ರಿಿ, ದೈನಂದಿನ ಸರದಿಯಲ್ಲಿ ಸೇವೆಯಲ್ಲಿರುವ ವೈದ್ಯರು, ನರ್ಸಿಂಗ್ ಸಿಬ್ಬಂದಿ ಪರದಾಟ ಅನುಭವಿಸುವಂತಾಗಿದೆ.
ಸಾರ್ವಜನಿಕ ಶೌಚಗೃಹದ ಸ್ಥಿಿತಿ ಇದಕ್ಕಿಿಂತ ಭಿನ್ನವಾಗಿಯೇನೂ ಇಲ್ಲ.ಓಪಿಡಿ ವಾರ್ಡ ಪಕ್ಕದಲ್ಲಿರುವ ಮಹಿಳೆಯರ ಶೌಚಗೃಹದ ಕೊಠಡಿಗಳನ್ನು ದುರಸ್ತಿಿಗೆಂದು ಒಡೆದು ಹಾಕಲಾಗಿದ್ದು ಯಾವಾಗ ಪೂರ್ಣಗೊಳಿಸುತ್ತಾಾರೆ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆೆಯಾಗಿದೆ.
ಕಳಪೆ ಗುಣಮಟ್ಟದ ಸಾಮಗ್ರಿಿ ಬಳಕೆ: ದುರಸ್ತಿಿ ಕಾರ್ಯ ಕೈಗೊಂಡಿರುವ ಗುತ್ತಿಿಗೆದಾರರು, ಆಸ್ಪತ್ರೆೆಯಲ್ಲಿ ವೈದ್ಯರು ವಿಶ್ರಾಾಂತಿಗೆ ಉಳಿದುಕೊಳ್ಳುವ ಸ್ಪೆೆಶಲ್ ರೂಂಗಳಲ್ಲಿ ವಿದ್ಯುತ್ ಸಂಪರ್ಕದ ಸಲುವಾಗಿ ಹಾಕಿರುವ ಪ್ಲಾಾಸ್ಟಿಿಕ್ ಪೈಪುಗಳು ಕಳಪೆ ಗುಣಮಟ್ಟದ್ದಾಾಗಿವೆ ಎಂಬ ದೂರುಗಳು ಕೇಳಿ ಬಂದಿವೆ.ಮುಂಚೆ ಅಳವಡಿಸಿದ್ದ ಚಪ್ಪಟೆ ಪಟ್ಟಿಿಗಳು ಗುಣಮಟ್ಟದ್ದು ಇದ್ದವು.ಆದರೆ ಇವರು ಇದರಲ್ಲೂ ಗೋಲಮಾಲ್ ಮಾಡಿರುವ ಶಂಕೆ ಇದೆ ಎಂಬ ಮಾತುಗಳು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿಿದ್ದಾಾರೆ.
ಮಳೆಗಾಲದ ಸಮಯದಲ್ಲಿ ಸಿಸೇರಿಯನ್ ,ಆಪರೇಷನ್ ಕೊಠಡಿಗಳು ಸೋರಿಕೆ ಆಗಬಾರದು ಎಂಬ ಉದ್ದೇಶದಿಂದ ಕೈಗೊಂಡಿರುವ ಕಾಮಗಾರಿ ಅರ್ಧಕ್ಕೆೆ ನಿಂತಿದೆ. ಎಲ್ಲೆೆಂದರಲ್ಲಿ ಲಕ್ಷಾಂತರ ರೂಪಾಯಿ ಯಂತ್ರೋೋಪಕರಣಗಳು ಇಡಲಾಗಿದೆ. ಆಸ್ಪತ್ರೆೆಯ ಹೊರ ಆವರಣದಲ್ಲಿ ಶಿಥಿಲಗೊಂಡ ಕಟ್ಟಡದ ಭಾಗದಲ್ಲಿ ಕೇವಲ ಸಿಮೇಂಟ್ ನೀರು ಹಾಕಿ ಒರೆಸಿ ರಿಪೇರಿ ಮಾಡಿದ್ದೇವೆ ಎಂದು ಗುತ್ತಿಿಗೆದಾರರು ಬಿಂಬಿಸಿದ್ದಾಾರೆ. ಛಾವಣಿ ಮೇಲೆ ಮಳೆ ನೀರು ಹರಿದು ಹೋಗಲು ಹೊಡೆದಿರುವ ರಂಧ್ರಗಳನ್ನು ಪೈಪ್ ಹಾಕಿ ಸಿಮೆಂಟ್ ಕೂಡಾ ಮಾಡದಿರುವುದು ಗುತ್ತಿಿಗೆದಾರ ಎಷ್ಟೊೊಂದು ಬೇಜವಾಬ್ದಾಾರಿಯಿಂದ ಕೆಲಸ ಮಾಡುತ್ತಿಿದ್ದಾಾನೆ ಎಂಬುದು ಇಲ್ಲಿ ತಿಳಿದು ಬರುತ್ತಿಿದೆ.
ಆಸ್ಪತ್ರೆೆ ವೈದ್ಯರು, ಸಿಬ್ಬಂದಿ ಹೈರಾಣು : ನಿತ್ಯವೂ ಓಪಿಡಿ 500-600 ಜನ ರೋಗಿಗಳು ಸರಕಾರಿ ಆಸ್ಪತ್ರೆೆಗೆ ಬರುತ್ತಿಿದ್ದಾಾರೆ.ಅದರಲ್ಲೂ ಗ್ರಾಾಮೀಣ ಭಾಗದಿಂದ ಬರುವ ಜನರಿಗೆ ಆಸ್ಪತ್ರೆೆಯಲ್ಲಿ ಸೂಕ್ತ ಸೌಲಭ್ಯ ಕೊಡಲಾಗದೇ ವೈದ್ಯರು,ನರ್ಸಿಂಗ್ ಸಿಬ್ಬಂದಿ ಪೇಚಾಡುವಂತಾಗಿದೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ