Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನ್ವಿಯಲ್ಲಿ ಹಿಂದೂ ಸಮಾಜೋತ್ಸವ, ಅದ್ದೂರಿ ಶೋಭಾಯಾತ್ರೆ ಮೆರವಣಿಗೆ ಹಿಂದೂ ಧರ್ಮದ ಪರಂಪರೆ ಉಳಿಸಿ, ಬೆಳೆಸಿ - ಕಲ್ಮಠ ಶ್ರೀ

ಸುದ್ದಿಮೂಲ ವಾರ್ತೆ ಮಾನ್ವಿ, ೆ.02:
ಹಿಂದೂ ಧರ್ಮದ ಪರಂಪರೆ ಉಳಿಸಿ, ಬೆಳೆಸಬೇಕು ಎಂದು ಕಲ್ಮಠದ ಪೀಠಾಧ್ಯಕ್ಷ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಾಮೀಜಿ ಕರೆ ನೀಡಿದರು.
ರವಿವಾರ ಪಟ್ಟಣದ ಟಿಎಪಿಸಿಎಂಎಸ್ ಮೈದಾನದಲ್ಲಿ ಹಮ್ಮಿಿಕೊಳ್ಳಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿಿದ್ದರು.
ಇಂದಿನ ಯುವ ಸಮುದಾಯ ಭ್ರಷ್ಟಾಾಚಾರ ರಹಿತ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆೆ ಸಂಕಲ್ಪ ಮಾಡಬೇಕು. ಸನಾತನ ಧರ್ಮವನ್ನು ನಾವು ಉಳಿಸುವ ಕೆಲಸ ಮಾಡಬೇಕು. ಈ ಧರ್ಮದ ಉಳಿವು ಜಗತ್ತಿಿನಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಆದ್ದರಿಂದ ಧರ್ಮವನ್ನು ಗಟ್ಟಿಿಯಾಗಿ ನೆಲೆಗೊಳಿಸಬೇಕು. ಈ ನೆಲದ ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ತಲುಪಿಸಬೇಕು. ಆದ್ದರಿಂದ ಹಿಂದೂಗಳೆಲ್ಲರೂ ಸ್ವಯಂ ಜಾಗೃತರಾಗಬೇಕು.
ಹಿಂದೂ ಧರ್ಮ ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ದೇಶದ ಹಿಂದೂಗಳು ಧರ್ಮದ ಆಚಾರ ವಿಚಾರ ತಿಳಿದುಕೊಳ್ಳಬೇಕು. ಈ ದೇಶ, ಸಂಸ್ಕೃತಿ, ಭೂಮಿ ನನ್ನದು ಎಂಬ ಭಾವನೆ ಮೂಡಬೇಕು. ದೇಶದ ಸಂಸ್ಕೃತಿ ಬಗ್ಗೆೆ ಜಾಗೃತರಾಗದಿದ್ದರೆ ಧರ್ಮ ಉಳಿಸಲು ಕಷ್ಟವಾಗಲಿದೆ ಎಂದು ಎಚ್ಚರಿಸಿದರು.
ಚೀಕಲಪರ್ವಿ ಮಠದ ಶ್ರೀ ಸದಾಶಿವ ಸ್ವಾಾಮೀಜಿ ಮಾತನಾಡಿ ಹಿಂದೂ ಧರ್ಮದ ಹಬ್ಬ, ಉತ್ಸವ- ಆಚರಣೆಗಳು ವೈಜ್ಞಾನಿಕ ಅಂಶಗಳನ್ನು ಹೊಂದಿದ್ದು, ಸಮಾಜದಲ್ಲಿ ಸೌಹಾರ್ದ ಹಾಗೂ ಭಾವೈಕ್ಯ ಮೂಡಿಸುತ್ತವೆ ಎಂದರು.
ಆರ್.ಎಸ್.ಎಸ್ ಮುಖಂಡ ರಾಜೇಂದ್ರ ಕುಮಾರ ಹರವಿ ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ನೀಲಕಂಠಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೆೆ ಮೊದಲು ಪಟ್ಟಣದ ಎಪಿಎಂಸಿ ಆವರಣದ ಉದ್ಭವ ಆಂಜನೇಯ ಸ್ವಾಾಮಿ ದೇವಸ್ಥಾಾನದಿಂದ ಟಿಎಪಿಸಿಎಂಎಸ್ ಮೈದಾನದ ವರೆಗೆ ಪ್ರಮುಖ ರಸ್ತೆೆಗಳಲ್ಲಿ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆಯ ಬೃಹತ್ ಶೋಭಾಯಾತ್ರೆೆ ವಿಜೃಂಭಣೆಯಿಂದ ಜರುಗಿತು.
ಈ ಕಾರ್ಯಕ್ರಮದಲ್ಲಿ ಕರೇಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಾಮಿಗಳು, ಅಡವಿಅಮರೇಶ್ವರ ಮಠದ ತೋಂಟದಾರ್ಯ ಮಹಾಸ್ವಾಾಮಿಗಳು, ಬಾಗಲವಾಡದ ಶ್ರೀ ಶಿವಯ್ಯಸ್ವಾಾಮಿಗಳು, ಶ್ರೀ ಶಂಕರಯ್ಯಸ್ವಾಾಮಿ ಸುವರ್ಣಗಿರಿಮಠ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಾಗವಾಟ್, ಗಂಗಾಧರನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾಾರೆಡ್ಡಿಿ ಭೋಗಾವತಿ, ಬಿಜೆಪಿ ಮಾನ್ವಿಿ ಮಂಡಲ ಅಧ್ಯಕ್ಷ ವೀರಭದ್ರಗೌಡ ಭೋಗಾವತಿ, ಮುಖಂಡರಾದ ಕೊಟ್ರೇೇಶಪ್ಪ ಕೋರಿ, ಬಂಡೇಶ ವಲ್ಕಂದಿನ್ನಿಿ, ಶರಣಪ್ಪಗೌಡ ನಕ್ಕುಂದಿ, ಆರ್.ಮುತ್ತುರಾಜ್ ಶೆಟ್ಟಿಿ, ಗುರುಗೌಡ ಕಣ್ಣೂರು, ಹರಿಹರ ಪಾಟೀಲ್, ಮಲ್ಲಿಕಾರ್ಜುನ ಜಕ್ಕಲದಿನ್ನಿಿ, ಅಯ್ಯಪ್ಪನಾಯಕ ಮ್ಯಾಾಕಲ್, ಹನುಮೇಶನಾಯಕ ಸಾದಾಪುರ, ಶರಣ ಬಸವನಾಯಕ ಜಾನೇಕಲ್, ಗುರುರಾಜ ನಾಗಲಾಪುರು, ಶ್ರೀಕಾಂತ ಪಾಟೀಲ್ ಗೂಳಿ, ಶರಣಬಸವ ಮುಂದಿನಮನೆ, ಈರಣ್ಣ ಮಡಿವಾಳ, ನಾಗರಾಜ ಚೀಕಲಪರ್ವಿ ಸೇರಿದಂತೆ ಮಾನ್ವಿಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಾಮಗಳ ಯುವಕರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ