Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಐತಿಹಾಸಿಕ ಅಂಬಾ ಮಹೋತ್ಸವ-2026: 400 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಜ.3 ರಂದು ಸಿಂಧನೂರಿಗೆ ಸಿಎಂ, ಡಿಸಿಎಂ ಆಗಮನ - ಬಾದರ್ಲಿ

ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.30:
ಭಕ್ತಿ-ಶಕ್ತಿ ಪರಂಪರೆಯ ದಿವ್ಯ ಸಂಗಮ ಸಿಂಧನೂರ ತಾಲೂಕಿನ ಸೋಮಲಾಪುರದ ಅಂಬಾಮಠದ ಅಂಬಾ ಮಹೋತ್ಸವ 2026ರ ಕಾರ್ಯಕ್ರಮವು ಜನವರಿ 2ರಿಂದ ಜನವರಿ 6ರವರೆಗೆ ನಿಗದಿಯಾಗಿದ್ದು, ಜನವರಿ 3ರಂದು ನಡೆಯಲಿರುವ ಅಂಬಾ ದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಭಾಗವಹಿಸಲಿದ್ದಾಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದ ಕಾಕತೀಯ ಕ್ಲಬ್ ಆವರಣದಲ್ಲಿ ಪತ್ರಿಿಕಾಗೋಷ್ಠಿಿ ನಡೆಸಿ ಅವರು ಮಾತನಾಡಿದರು. 3 ರಂದು ಮಧ್ಯಾಾಹ್ನ 2 ಗಂಟೆಗೆ ಸಿಂಧನೂರು ನಗರಕ್ಕೆ ಆಗಮಿಸುವರು. ಅಂದು ಸಿಂಧನೂರ ನಗರದಲ್ಲಿ ಮಧ್ಯಾಾಹ್ನ 2 ರಿಂದ 2:30ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಮಧ್ಯಾಾಹ್ನ ಭೋಜನದ ವಿರಾಮದ ನಂತರ 3:30 ರಿಂದ ಅಂಬಾಮಠಕ್ಕೆ ತೆರಳಿ ಸಂಜೆ 4 ಗಂಟೆಗೆ ಸಿಂದನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 400 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿಿ ಕಾಮಗಾರಿಗಳಿಗೆ ಶಂಕುಸ್ಥಾಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾಾರೆ. ಸಂಜೆ 5 ಗಂಟೆಗೆ ಅಂಬಾದೇವಿ ಮಹಾ ರಥೋತ್ಸವ ಮತ್ತು ಜಂಬೂಸವಾರಿಗೆ ಮುಖ್ಯಮಂತ್ರಿಿಗಳು ಚಾಲನೆ ನೀಡಲಿದ್ದಾಾರೆ ಎಂದು ಮಾಹಿತಿ ನೀಡಿದರು.
ಶಕ್ತಿಿಪೀಠ ಅಂಬಾಮಠಕ್ಕೆೆ 400 ವರ್ಷಗಳ ಇತಿಹಾಸ ಹೊಂದಿದ್ದು, ತೆಲಂಗಾಣ, ಮಹಾರಾಷ್ಟ್ರ ಆಂಧ್ರ ಸೇರಿದಂತೆ ಐದಾರು ರಾಜ್ಯಗಳ ಮತ್ತು ನಮ್ಮ ರಾಜ್ಯದ ಲಕ್ಷಾಂತರ ಭಕ್ತರು ಅಂಬಾಮಠದ ಜಾತ್ರೆೆಗೆ ಆಗಮಿಸುತ್ತಾಾರೆ. ಈ ವರ್ಷ ಮಹಾ ರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ. ಜಾತ್ರೆೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗಲು ಈ ಬಾರಿ ಮಠದ ಆವರಣ ಅಚ್ಚುಕಟ್ಟಾಾಗಿ ಸಿದ್ಧಪಡಿಸಲಾಗಿದೆ. ರಸ್ತೆೆ, ಕುಡಿಯುವ ನೀರು, ಶುಚಿತ್ವ ಸೇರಿದಂತೆ ಭಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆೆ ಮಾಡಲಾಗಿದೆ. ಈ ಬಾರಿ ಮಠದ ಆವರಣದಲ್ಲಿ 132 ಅಡಿ ಅಗಲದ ರಥ ಬೀದಿ ಸುಸಜ್ಜಿಿತವಾಗಿ ಸಿದ್ಧಪಡಿಸಲಾಗಿದೆ. ಜೊತೆಗೆ ಈ ಬಾರಿ ಮಠದ ಹತ್ತಿಿರದ 9 ಎಕರೆ ಜಾಗದಲ್ಲಿ ಮಿಟಾಯಿ, ಬಳೆ, ಆಟಿಕೆ ಸಾಮಾನು, ಆಟದ ಯಂತ್ರಗಳ ಹಾಗೂ ಇನ್ನಿತರ ಜಾತ್ರಾ ಅಂಗಡಿಗಳಿಗೆ ಒಂದೆಡೆ ಸಾಲಾಗಿ ಶಿಸ್ತುಬದ್ಧವಾಗಿ ವ್ಯವಸ್ಥೆೆ ಮಾಡಲಾಗಿದೆ. ಜಾತ್ರಾಾ ಹಿನ್ನೆೆಲೆಯಲ್ಲಿ ತಲಾ 6 ಹೆಲ್‌ಪ್‌ ಡೆಸ್‌ಕ್‌ ಹಾಗೂ ಹೆಲ್‌ತ್‌ ಡೆಸ್‌ಕ್‌ ಸ್ಥಾಾಪಿಸಲಾಗಿದೆ. ಸ್ಥಳೀಯ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ವಿದ್ಯಾಾರ್ಥಿಗಳು ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾಾರ್ಥಿಗಳನ್ನು ಹಾಗೂ ತಾಲೂಕಿನ ಗ್ರಾಾಮ ಲೆಕ್ಕಾಾಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಒಳಗೊಂಡು ತಂಡ ರಚಿಸಿ ಜಾತ್ರೋೋತ್ಸವದ ನಾನಾ ಸೇವೆಗೆ ನಿಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.
ರಾಯಚೂರು ಜಿಲ್ಲೆಯ ಇತಿಹಾಸದಲ್ಲಿಯೇ ಸಿಂಧನೂರು ತಾಲೂಕು ವ್ಯಾಾಪ್ತಿಯಲ್ಲಿ ಏಕಕಾಲಕ್ಕೆ 24 ಕಂದಾಯ ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಿ ಘೋಷಿಸಿ ಆಯಾ ಕಂದಾಯ ಗ್ರಾಮದಲ್ಲಿನ ಲಾನುಭವಿಗಳಿಗೆ ಕಂದಾಯ ಸಚಿವರು ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ ಮಾಡಲಿದ್ದಾಾರೆ. 174 ಕೋಟಿ ರು ವೆಚ್ಚದಲ್ಲಿ ಅಂದಾಜು 20,000 ಎಕರೆ ಜಮೀನಿಗೆ ನೀರು ಪೂರೈಸುವ ಏತ ನೀರಾವರಿ ಯೋಜನೆಗೆ, 69 ಕೋಟಿ ರೂ ವೆಚ್ಚದಲ್ಲಿ ಬ್ರಿಿಜ್ ಮತ್ತು ಬ್ಯಾಾರೇಜ್ ನಿರ್ಮಾಣ, 39 ಕೋಟಿ ರು ವೆಚ್ಚದಲ್ಲಿ ಸಿಂಧನೂರಿನ ಹಳ್ಳಕ್ಕೆೆ ಬ್ರಿಿಜ್ ಕಮ್ ಬ್ಯಾಾರೇಜ್ ನಿರ್ಮಾಣ, ಗಾಂಧಿನಗರದಿಂದ ಗೊರೆಬಾಳ ಗ್ರಾಾಮದವರೆಗೆ ರಸ್ತೆೆ ಕಾಮಗಾರಿ ಸೇರಿದಂತೆ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ. ಸಿಂಧನೂರು ತಾಲೂಕಿನಲ್ಲಿ ಅಂದಾಜು 18 ಪದವಿ ಕಾಲೇಜುಗಳು, 32 ಪಿಯುಸಿ ಕಾಲೇಜ್‌ಗಳಿದ್ದು ಅಂದಾಜು 25,000 ಕಾಲೇಜು ವಿದ್ಯಾಾರ್ಥಿಗಳಿಗೆ ಆಯಾ ಗ್ರಾಾಮಗಳಿಂದ ಸಿಂಧನೂರು ನಗರಕ್ಕೆೆ ಬಂದು ಹೋಗಲು ಅನುಕೂಲವಾಗುವಂತೆ ವಿದ್ಯಾಾರ್ಥಿಗಳಿಗೆಂದೇ 5 ಕೋಟಿ ರೂ ವೆಚ್ಚದಲ್ಲಿ 15 ಬಸ್ಸುಗಳಿಗೆ ಚಾಲನೆ ನೀಡುವ ಕಾರ್ಯಕ್ರಮವು ಸಹ ಇದೇ ವೇಳೆ ನಡೆಯಲಿದೆ ಎಂದು ಶಾಸಕರು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಚಿವರಾದ ಶರಣಪ್ರಕಾಶ ಪಾಟೀಲ್, ರಾಮಲಿಂಗಾರೆಡ್ಡಿ ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಶಿವರಾಜ ತಂಗಡಗಿ, ಎನ್ ಎಸ್ ಬೋಸರಾಜು ಸೇರಿದಂತೆ ಇನ್ನಿತರ ಸಚಿವರು ಭಾಗಿಯಾಗಲಿದ್ದಾಾರೆ ಎಂದು ಶಾಸಕರು ತಿಳಿಸಿದರು.
ತಹಶೀಲ್ದಾಾರ ಅರುಣ ಹೆಚ್ ದೇಸಾಯಿ ಮಾತನಾಡಿ, ಅಂಬಾ ಮಹೋತ್ಸವ ಹಿನ್ನಲೆಯಲ್ಲಿ ಜನವರಿ 2ರಿಂದ 6ರವರೆಗೆ ಸರಿಗಮಪ ಖ್ಯಾಾತಿಯ ಗಾಯಕರು ಮತ್ತು ಇನ್ನಿಿತರ ಕಲಾವಿದರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರಪ್ರಥಮ ಬಾರಿಗೆ ಜಂಬೂಸವಾರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ, ಹಾಸ್ಯ ಸಂಜೆ, ಆಹೋರಾತ್ರಿ ತತ್ವಪದ ಗಾಯನ, ಕಡುಬಿನ ಕಾಳಗ, ಸಂಗೀತ ಸಂಜೆ, ನಾಟಕ, ದೇವಿ ಪಲ್ಲಕ್ಕಿ ಉತ್ಸವ, ಜಾನಪದ ಜಾತ್ರೆ, ಕುಂಭೋತ್ಸವ, ತತ್ವಪದ ಗಾಯನ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭದಲ್ಲಿ ತಾಪಂ ಇಓ ಚಂದ್ರಶೇಖರ, ಮುಖಂಡರಾದ ಆರ್.ಸಿ.ಪಾಟೀಲ, ಖಾಜಿ ಮಲಿಕ್ ಹಾಗೂ ಇತರರು ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ