Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಲೂಕಿನಲ್ಲಿ ಪ್ರಚಾರದ ಕೊರತೆ ರಾಯಚೂರು ಹಬ್ಬಕ್ಕೆ ತಾಲೂಕಾಡಳಿತ, ತಾ.ಪಂ.ನಿಂದ ನಿರಾಸಕ್ತಿ

ಅಮರೇಶ ಅಲಬನೂರು ಸಿಂಧನೂರು, ೆ.04:
ಸಿಂಧನೂರಿನಲ್ಲಿ ಅದ್ದೂರಿ ದಸರಾ ಮಹೋತ್ಸವ ಹಾಗೂ ಅದ್ದೂರಿಯಾಗಿ ಅಂಬಾ ಉತ್ಸವವನ್ನು ತಾಲೂಕಾಡಳಿತ ಹಾಗೂ ತಾಲ್ಲೂಕಾ ಪಂಚಾಯತ್ ಅತ್ಯುತ್ಸಾಾಹದಿಂದ ಮಾಡುವ ಮೂಲಕ ತಾಲೂಕಿನ ಜನತೆಯಲ್ಲಿ ಹಬ್ಬದ ಸಂಭ್ರಮ ಮೂಡಿಸಿತ್ತು. ಎರಡೂ ಹಬ್ಬಗಳ ವಿವಿಧ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಅತ್ಯಂತ ಪ್ರಚಾರ ಮಾಡುವ ಮೂಲಕ ಎಲ್ಲರೂ ಪಾಲ್ಗೊೊಳ್ಳುವಂತೆ ಮಾಡುವಲ್ಲಿ ತಹಶೀಲ್ದಾಾರರು, ತಾ.ಪಂ.ಕಾರ್ಯನಿರ್ವಾಹಕರು ಸೇರಿ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಗಲಿರುಳು ಶ್ರಮಿಸಿದ್ದರು.
ರಾಯಚೂರಿಗೆ ಸೀಮಿತ:
ರಾಯಚೂರಿನಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ಜಿಲ್ಲಾಾ ಉತ್ಸವ ನಡೆಸಲು ಈಗಾಗಲೇ ಜಿಲ್ಲಾಾಡಳಿತ ಹಾಗೂ ಜಿಲ್ಲಾಾ ಪಂಚಾಯತ್ ಸರ್ವ ಸನ್ನದ್ಧವಾಗಿದೆ. ಜಿಲ್ಲಾಾ ಉತ್ಸವ ಇದು ಕೇವಲ ರಾಯಚೂರು ನಗರಕ್ಕೆೆ ಸಿಮೀತವಾಗದೆ ಎಲ್ಲಾಾ ತಾಲೂಕಿನಿಂದ ಸಾರ್ವಜನಿಕರು ಹಬ್ಬದಲ್ಲಿ ಭಾಗಿಯಾಗಬೇಕು ಎನ್ನುವ ನಿಟ್ಟಿಿನಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಿಕೊಂಡಿದೆ.
ಪ್ರಚಾರದ ಕೊರತೆ:
ಜಿಲ್ಲಾಾಡಳಿತ ಹಾಗೂ ಜಿಲ್ಲಾಾ ಪಂಚಾಯತ್ ನೀಡಿರುವ ಕಟ್ಟುನಿಟ್ಟಿಿನ ಸೂಚನೆಗಳನ್ನು ಸಿಂಧನೂರು ತಾಲೂಕಿನ ಅಧಿಕಾರಿಗಳು ಒಲ್ಲದ ಮನಸ್ಸಿಿನಿಂದ ಸ್ವೀಕರಿಸಿ, ಪ್ರಚಾರ ಮಾಡದೆ ನಿರುತ್ಸಾಾಹದಿಂದಲೆ ಉತ್ಸವದಲ್ಲಿ ಭಾಗಿಯಾಗುತ್ತಿಿದ್ದಾಾರೆ. ಜಿಲ್ಲಾಾ ಉತ್ಸವದಲ್ಲಿ ನಡೆಯುವ ಕೃಷಿ ಮೇಳ, ಮತ್ಸ್ಯ ಮೇಳ, ಆಹಾರ ಮೇಳ, ಉದ್ಯೋೋಗ ಮೇಳ, ಗ್ಯಾಾರಂಟಿ ಮೇಳ, ಶ್ವಾಾನ ಪ್ರದರ್ಶನ, ಕೈಗಾರಿಕಾ, ಕರಕುಶಲ, ಪ್ರಸ್ತಕ ಪ್ರದರ್ಶನ, ೈರ್ ಶೋ, ಬಾಡಿ ಬಿಲ್ಟಿಿಂಗ್ ಸ್ಪರ್ಧೆ, ಸೈಕ್ಲಿಿಂಗ್ ಮ್ಯಾಾರಥಾನ್, ಭಾರ ಎತ್ತುವ ಸ್ಪರ್ಧೆಗಳು, ಗ್ರಾಾಮೀಣ ಕ್ರೀೆಡೆಗಳು, ಸಾಹಿತ್ಯದ ವಿವಿಧ ಗೋಷ್ಠಿಿಗಳು, ಹೆಲಿಕಾಪ್ಟರ್ ಮೂಲಕ ರಾಯಚೂರು ವೀಕ್ಷಣೆ, ಮಕ್ಕಳ ಮಹೋತ್ಸವ, ಅರ್ಜುನ್ ಜನ್ಯ, ರಾಜೇಶ ಕೃಷ್ಣನ್ ಹಾಗೂ ಸಂಚಿತ್ ಹೆಗಡೆ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿ ತಾಲೂಕಿನಾದ್ಯಂತ ಪ್ರಚಾರ ಮಾಡುವಲ್ಲಿ ಅಧಿಕಾರಿಗಳು ವಿಲವಾಗಿದ್ದಾಾರೆ ಎನ್ನುವ ಆರೋಪಗಳು ವ್ಯಾಾಪಕವಾಗಿ ಕೇಳಿ ಬರುತ್ತಿಿವೆ.
ಕಾಟಾಚಾರಕ್ಕೆೆ ಜ್ಯೋೋತಿ ರಥ ಯಾತ್ರೆೆ:
ರಾಯಚೂರು ಜಿಲ್ಲಾಾ ಉತ್ಸವದ ಅಂಗವಾಗಿ ವ್ಯಾಾಪಕ ಪ್ರಚಾರ ಮಾಡುವ ನಿಟ್ಟಿಿನಲ್ಲಿ ಜಿಲ್ಲಾಾಡಳಿತ ಹಾಗೂ ಜಿಲ್ಲಾಾ ಪಂಚಾಯತ್‌ನಿಂದ ಹಮ್ಮಿಿಕೊಂಡಿರುವ ಜ್ಯೋೋತಿ ರಥಯಾತ್ರೆೆ ಆಟಕ್ಕುಂಟು ಲೆಕ್ಕಕ್ಕಿಿಲ್ಲ ಎನ್ನುವಂತೆ ತಾಲೂಕಿಗೆ ಬಂದು ಹೋಗಿದೆ. ಬೆಳಗ್ಗೆೆ ಸಿಂಧನೂರು ನಗರಕ್ಕೆೆ ಆಗಮಿಸಿದ ರಥ, ನಂತರ ತುರ್ವಿಹಾಳ ಪಟ್ಟಣಕ್ಕೆೆ ತೆರಳಿ, ಅಲ್ಲಿಂದ ಜವಳಗೇರಾ ಗ್ರಾಾಮಕ್ಕೆೆ ಹೋಗಿ, ನಂತರ ಮಾನ್ವಿಿ ತಾಲೂಕಿಗೆ ಹೋಗಿದೆ. ಜ್ಯೋೋತಿ ರಥಯಾತ್ರೆೆ ಮಾಡಿದ ಉದ್ದೇಶವೂ ಈಡೇರಿಲ್ಲ ಎನ್ನುವ ಆರೋಪಗಳಿವೆ. ಕಾಟಾಚಾರಕ್ಕೆೆ ಎನ್ನುವಂತೆ ಕೆಲವು ಅಧಿಕಾರಿಗಳು ಜ್ಯೋೋತಿ ರಥಯಾತ್ರೆೆ ಸ್ವಾಾಗತಿಸಿ, ಬೀಳ್ಕೊೊಟ್ಟಿಿದ್ದೇ ಸಾಧನೆಯಾಗಿದೆ.
ರಾಯಚೂರು ಜಿಲ್ಲಾಾ ಉತ್ಸವಕ್ಕೆೆ ತಾಲೂಕಾಡಳಿತ ಹಾಗೂ ತಾಲ್ಲೂಕಾ ಪಂಚಾಯತ್ ವ್ಯಾಾಪಕ ಪ್ರಚಾರ ನೀಡದ ಹಿನ್ನಲೆಯಲ್ಲಿ ತಾಲೂಕಿನಿಂದ ಸಾರ್ವಜನಿಕರು ಭಾಗವಹಿಸುವ ಸಂಖ್ಯೆೆ ಕ್ಷೀಣವಾಗಲಿದೆ. ಈ ಬಗ್ಗೆೆ ಹಿರಿಯ ಅಧಿಕಾರಿಗಳು ಗಂಭೀರ ಚಿಂತನೆ ಮಾಡುವ ಅಗತ್ಯವಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ