Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಾಥಮಿಕ ಶಿಕ್ಷಣದ ಕಲಿಕಾ ತೊಡಕುಗಳು ಚಿಂತನಾ ಗೋಷ್ಠಿ ಮಕ್ಕಳ ಕಲಿಕೆಯ ತೊಡಕುಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಪರಿಹಾರ ಸಿಗಬೇಕು : ಎ್.ಸಿ ಚೇಗರೆಡ್ಡಿ

 ಸುದ್ದಿಮೂಲ ವಾರ್ತೆ ಲಿಂಗಸುಗೂರು , ಜ.06:
ಮಕ್ಕಳಿಗೆ ಎದುರಾಗುತ್ತಿಿರುವ ಕಲಿಕಾ ತೊಡಕುಗಳನ್ನು ಪ್ರಾಾಥಮಿಕ ಶಿಕ್ಷಣ ಹಂತದಲ್ಲಿ ಗುರುತಿಸುವುದು ಅಗತ್ಯವಾಗಿದೆ ಎಂದು ಟೀಚರ‌್ಸ ಪತ್ರಿಿಕೆ ಸಹ ಸಂಪಾದಕ ಎ್.ಸಿ. ಚೆಗರೆಡ್ಡಿಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ವೀರಶೈವ ವಿದ್ಯಾಾವರ್ಧಕ ಸಂಘದ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿಿ ಹಬ್ಬದ ಪ್ರಯುಕ್ತ ಏರ್ಪಡಿಸಿದ ಪ್ರಾಾಥಮಿಕ ಶಿಕ್ಷಣದ ಕಲಿಕಾ ತೊಡಕುಗಳು ಹಾಗೂ ಕಲಿಕಾ ಪಠ್ಯ ಮತ್ತು ಭೋಧನಾ ಶೈಲಿಯ ಸ್ಮಧಾರಣಾ ಸಾಧ್ಯತೆ ಕುರಿತ ಚಿಂತನಾ ಗೋಷ್ಠಿಿ ಉದ್ದೇಶಿಸಿ ಮಾತನಾಡಿದ ಅವರು ಪ್ರಾಾಥಮಿಕ ಹಂತದಲ್ಲಿಯೇ ಮಕ್ಕಳ ಕಲಿಕಾ ತೊಡಕುಗಳನ್ನು ಗುರುತಿಸದಿದ್ದರೆ ಮುಂದಿನ ಹಂತದಲ್ಲಿ ಅದು ಮಕ್ಕಳ ಮುಂದಿನ ಭವಿಷ್ಯಕ್ಕೆೆ ದೊಡ್ಡ ಸಮಸ್ಯೆೆಯಾಗುತ್ತದೆ ಪ್ರತಿಯೊಬ್ಬ ಮಗುವಿನ ಕಲಿಕಾ ಸಾಮರ್ಥ್ಯ ವಿಭಿನ್ನವಾಗಿರುವುದರಿಂದ ಶಿಕ್ಷಕರು ಮಕ್ಕಳ ಮನಸ್ಥಿಿತಿ ಅರಿತು ಬೋಧನೆ ಮಾಡಬೇಕು ಇಂತಹ ಗೋಷ್ಠಿಿಗಳು ಪ್ರಾಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಿಸಲು ಸಹಕಾರಿಯಾಗಲಿವೆ ಎಂದು ಆಶಯ ನುಡಿ ನುಡಿದರು.
ಗೋಷ್ಠಿಿ 1ರಲ್ಲಿ ಶಿಕ್ಷಣ ಸಂಪನ್ಮೂಲ ವ್ಯಕ್ತಿಿಗಳಾದ ಡಿ. ರೇಷ್ಮಾಾ ಹಾಗೂ ಗೋಷ್ಠಿಿ 2ರಲ್ಲಿ ಮೂಡಬಿದರೆ ಶಿಕ್ಷಣ ಚಿಂತಕ ಡಾ, ಅರವಿಂದ ಚೊಕ್ಕಾಾಡಿ ಪ್ರೌೌಢ ಶಿಕ್ಷಣ ಒಂದು ಮರುಚಿಂತನೆ ಹಾಗೂ ಗುಣಮಟ್ಟ-ಪುನಶ್ಚೇತನದ ನಾವಿನ್ಯತೆಗಳು ಕುರಿತು ಮಾತನಾಡಿದರು.
ಸೋಮಶೇಖರ ಬಳಗಾನೂರ ಪ್ರೌೌಢ ಶಿಕ್ಷಣವು ವಿದ್ಯಾಾರ್ಥಿಗಳ ಜೀವನದ ದಿಕ್ಕನ್ನು ಬದಲಿಸುವ ಮಹತ್ವದ ಹಂತವಾಗಿದೆ ಎಂದು ತಿಳಿಸಿದರು. ಶಿಕ್ಷಣ ಕೇವಲ ಪಠ್ಯಾಾಧಾರಿತ ಜ್ಞಾಾನಕ್ಕೆೆ ಸೀಮಿತವಾಗದೇ ಜೀವನ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಹಾಗೂ ಸ್ವಾಾವಲಂಬನೆಯ ಚಿಂತನೆ ಬೆಳೆಸುವಂತಾಗಬೇಕು. ಅಂಕಗಳಿಗೆ ಒತ್ತು ನೀಡದೆ ವಿದ್ಯಾಾರ್ಥಿಗಳ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ವ್ಯಕ್ತಿಿತ್ವ ವಿಕಸನಕ್ಕೆೆ ಅವಕಾಶ ಕಲ್ಪಿಿಸಬೇಕು ಪಠ್ಯಕ್ರಮದ ಭಾರ, ನಿರಂತರ ಪರೀಕ್ಷೆಗಳು ಸ್ಪರ್ಧಾತ್ಮಕ ಒತ್ತಡಗಳಿಂದ ವಿದ್ಯಾಾರ್ಥಿಗಳು ಮಾನಸಿಕ ಒತ್ತಡದಿಂದ ಮುಕ್ತವಾಗಿ ನೈತಿಕಶಿಕ್ಷಣ, ಉದ್ಯೋೋಗಮುಖಿ ಕೌಶಲ್ಯಗಳು, ತಂತ್ರಜ್ಞಾಾನ ಜ್ಞಾಾನ, ಪರಿಸರ ಸಂವೇದನೆ, ಸಾಮಾಜಿಕ ಜಾಗೃತಿಗಳಿಗೆ ಪಠ್ಯಕ್ರಮದಲ್ಲಿ ಸ್ಥಾಾನ ದೊರಕಬೇಕು. ಶಿಕ್ಷಕರು ಮಾರ್ಗದರ್ಶಕರಾಗಿ ಗ್ರಾಾಮೀಣ ನಗರ ಪ್ರದೇಶಗಳ ಶಿಕ್ಷಣದ ನಡುವಿನ ಅಂತರ ಕಡಿಮೆ ಮಾಡಿ ವಿದ್ಯಾಾರ್ಥಿಗಳ ಪ್ರತಿಭೆ ಗುರುತಿಬೇಕೆಂದರು. ವಾಲ್ಮೀಕಿ ವಿ.ವಿ ಸಹಪ್ರಾಾದ್ಯಾಾಪಕ ಡಾ. ಕೆ.ವೆಂಕಟೇಶ, ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯ ಡಾ, ಚಿದಾನಂದ ಸಾಲಿ, ಉಪನ್ಯಾಾಸಕ ಮಹಾಂತೇಶ ಮಸ್ಕಿಿ ಡಾ, ಶರಣಗೌಡ, ಸಿದ್ದನಗೌಡ ಯರಡೊಣ ವೇದಿಕೆಯಲ್ಲಿದ್ದರು. ಉಪನ್ಯಾಾಸಕರಾದ ಮೌನೇಶ, ಬಸ್ಸಣ್ಣ, ದೊಡ್ಡನಗೌಡ, ಸುಧಾಕರ ನಿರ್ವಹಿಸಿದರು.
ಸಮಾರೋಪ ಸಮಾರಂಭ: ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ ಸ್ವಾಾತಂತ್ಯ ನಂತರ ದೇಶದಲ್ಲಿ ಶಿಕ್ಷಣ ವ್ಯವಸ್ಥೆೆಯಲ್ಲಿ ಸಮಾನತೆ ತಂದವರು ಡಾ, ಅಂಬೇಡ್ಕರವರು ಇಂದು ನಾವು ಆರ್ಥಿಕ ವ್ಯವಸ್ಥೆೆಯಲ್ಲಿ ಮುಂಚೂಣಿಯಲ್ಲಿದ್ದೇವೆ ಎನ್ನುತ್ತಿಿದ್ದೇವೆ ಆದರೆ ಬೇರೆ ನಮ್ಮ ದೇಶದ ಜನಸಂಖ್ಯೆೆಗೆ ಹೋಲಿಸಿದರೆ ಅದು ಗೌಣವಾಗುತ್ತದೆ. ನಮ್ಮ ಮಕ್ಕಳನ್ನು ಶಿಕ್ಷಣವಂತರ ಜತೆಗೆ ಸಂಸ್ಕೃತಿ ಬಿಂಬಿಸುವ ದೇಶ ರಕ್ಷಣೆಯ ಮಕ್ಕಳಾಗಬೇಕೆಂದರು. ಹುಬ್ಬಳ್ಳಿಿ ಕಾನೂನು ವಿ.ವಿ ವಿಶ್ರಾಾಂತ ಕುಲಪತಿ ಡಾ, ಜೆಎಸ್ ಪಾಟೀಲ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಅಧ್ಯಕ್ಷತೆವಹಿಸಿದ ಸಂಸ್ಥೆೆ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಾಪೂರ ಮಾತನಾಡಿದರು. ಆಡಳಿತಾಧಿಕಾರಿ ಬಸವಂತರಾಯ ಕುರಿ ವೇದಿಕೆಯಲ್ಲಿದ್ದರು.
ಬೆಳ್ಳಿಿ ಹಬ್ಬದಂಗವಾಗಿ ನಡೆದ 3 ಗೋಷ್ಠಿಿಗಳಲ್ಲಿ ಗೋಷ್ಠಿಿಯಲ್ಲಿ ಭಾಗವಹಿಸಿದ ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡು, ಮಕ್ಕಳ ಕಲಿಕಾ ಸಮಸ್ಯೆೆಗಳ ಕುರಿತು ಚರ್ಚಿಸಿದರು. ಸುದೀರ್ಘ 25 ವರ್ಷಗಳ ಸೇವೆಗೈದ ಬಸವರಾಜ ಮೇಟಿ ಪ್ರಾಾಚಾರ್ಯರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಂದ ದೇಶಿಯ ನೃತ್ಯಗಳು ನಾಟಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕುದ್ರೋಳಿ ಗಣೇಶ ಅವರಿಂದ ಜಾದು ಪ್ರದರ್ಶನ ನಡೆಯಿತು. ಬಸವರಾಜ, ಕಣ್ಮೇಶ ಸೂಗರೆಡ್ಡಿಿ ನಿರ್ವಹಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ