Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಲವು ಮಂದಿ ಸಚಿವರು ಹಾಜರಾಗದ ಹಿನ್ನೆಲೆಯಲ್ಲಿ ವಿಪಕ್ಷಗಳ ಆಕ್ರೋಶ ಪ್ರತಿಭಟನೆ ಹಿನ್ನೆಲೆಯಲ್ಲಿ ತಡವಾಗಿ ಆರಂಭವಾದ ವಿಧಾನಮಂಡಲ ಕಲಾಪ

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.27:
ಆಡಳಿತ ಪಕ್ಷ ಕಾಂಗ್ರೆೆಸ್ ಹಾಗೂ ವಿರೋಧ ಪಕ್ಷಗಳು ಮಂಗಳವಾರ ಗಾಂಧಿ ಪ್ರತಿಮೆ ಹಾಗೂ ಸ್ವಾಾತಂತ್ರ್ಯ ಉದ್ಯಾಾನದ ಬಳಿ ಪ್ರತಿಭಟನೆ ಹಮ್ಮಿಿಕೊಂಡ ಹಿನ್ನೆೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳು ಸರಿಯಾದ ಸಮಯಕ್ಕೆೆ ಆರಂಭವಾಗಲಿಲ್ಲ.
ಬಿಜೆಪಿ ಸದಸ್ಯರು ಅಬಕಾರಿ ಸಚಿವ ಆರ್.ಬಿ. ತಿಮ್ಮಾಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರೆ ಕಾಂಗ್ರೆೆಸ್ ಸದಸ್ಯರು ಸ್ವಾಾತಂತ್ರ್ಯ ಉದ್ಯಾಾನದಲ್ಲಿ ಮನರೇಗಾ ಯೋಜನೆಯಿಂದ ಗಾಂಧಿ ಹೆಸರು ಕೈಬಿಟ್ಟಿಿರುವುದಕ್ಕೆೆ ಪ್ರತಿಭಟನೆ ನಡೆಸಿದರು. ಹೀಗಾಗಿ ಕಲಾಪ ಮಧ್ಯಾಾಹ್ನ 12 ಗಂಟೆ ಬಳಿಕ ಆರಂಭವಾಯಿತು.
ತಡವಾಗಿ ಅರಂಭವಾದ ವಿಧಾನಸಭೆ ಕಲಾಪದಲ್ಲಿ ಮೊದಲ ಸಾಲಿನಲ್ಲಿ ಕುಳಿತಿರುತ್ತಿಿದ್ದ ಸಚಿವರು ಕಾಣಿಸಲಿಲ್ಲ. ಇದರಿಂದ ಕೆರಳಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪ್ರಶ್ನೆೆಗಳಿಗೆ ಉತ್ತರಿಸಬೇಕಾದ ಸಚಿವರೇ ಕಾಣಿಸುತ್ತಿಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪ್ರಶ್ನೋೋತ್ತರ ಕಲಾಪ ಆರಂಭಿಸಿ ಪ್ರಶ್ನೆೆ ಕೇಳಬೇಕಾದ ಶಾಸಕರು ಹೆಸರನ್ನು ಹೇಳಲಾರಂಭಿಸಿದರು. ಆಗ ಸಂಬಂಧಿತ ಸಚಿವರು ಇಲ್ಲದಿರುವುದನ್ನು ಗಮನಿಸಿದ ವಿರೋಧಪಕ್ಷದ ನಾಯಕ, ಸಚಿವರೇ ಇಲ್ಲ ಎಂದರೆ ಹೇಗೆ. ಜವಾಬ್ದಾಾರಿ ಬೇಡವೇ. ಇಂದು ಸದನದಲ್ಲಿ ಹಾಜರಿರಬೇಕಾದ ಹೆಸರುಗಳನ್ನು ವಾಚಿಸಿ, ಬರದೇ ಇರುವವರಿಗೆ ಛೀಮಾರಿ ಹಾಕಿ ಎಂದರು.
ಆಗ ಸಭಾಧ್ಯಕ್ಷರು ಇಂದು ಏಕೆ ಸದನ ಆರಂಭವಾಗಿದೆ. ಹಾಜರಾತಿ ಏಕೆ ಕಡಿಮೆ ಇದೆ ಎಂಬುದು ನಿಮಗೆ ಗೊತ್ತಿಿದೆ. ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎನ್ನುತ್ತಿಿದ್ದಂತೆ, ಅಶೋಕ್ ಅವರು ನೀವು ಕಾಂಗ್ರೆೆಸ್ ಪಕ್ಷದವರಲ್ಲ. ಇಂದು ಸದನದಲ್ಲಿ ಹಾಜರಿರಬೇಕಾದವರ ಪಟ್ಟಿಿಯನ್ನು ವಾಚಿಸಿ ಎಂದು ಒತ್ತಾಾಯಿಸಿದರು.
ಆಗ ಸಭಾಧ್ಯಕ್ಷರು ಪ್ರಶ್ನೋೋತ್ತರ ಅವಧಿಯಲ್ಲಿ ಮುಖ್ಯಮಂತ್ರಿಿ, ಉಪಮುಖ್ಯಮಂತ್ರಿಿ ಪರವಾಗಿ ಸಚಿವರು ಉತ್ತರ ಕೊಡುತ್ತಾಾರೆ. ಸದನದ ಕಾರ್ಯಕಲಾಪಗಳ ಸಮಿತಿ ಸಭೆಯಲ್ಲಿ ಸಚಿವರು ಬೆಳಿಗ್ಗೆೆ ಮತ್ತು ಮಧ್ಯಾಾಹ್ನ ಕಡ್ಡಾಾಯವಾಗಿ ಹಾಜರಿರುವ ಬಗ್ಗೆೆ ಹೇಳಲಾಗಿದೆ. ಅದರಂತೆ ಬರುತ್ತಾಾರೆ ಎಂದರು.
ಆಗ ಇಂದು ಹಾಜರಿರಬೇಕಾದ ಸಚಿವರ ಪಟ್ಟಿಿಯನ್ನು ಸಭಾಧ್ಯಕ್ಷರು ವಾಚಿಸಿ ಸಚಿವರಾದ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಡಾ.ಎಚ್.ಸಿ.ಮಹದೇವಪ್ಪ ಅವರ ಹೆಸರನ್ನು ಉಲ್ಲೇಖಿಸಿದರು. ಅವರು ಸದನದಲ್ಲಿ ಇಲ್ಲದಿರುವುದನ್ನು ಗಮನಿಸಿದ ಬಿಜೆಪಿ ಶಾಸಕರು ಇಲ್ಲ, ಇಲ್ಲ ಎಂಬ ಘೋಷಣೆಯನ್ನು ಕೂಗಿದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸದನದಲ್ಲಿ ಹಾಜರಿದ್ದರು. ಜಮೀರ್ ಅಹಮದ್ ಖಾನ್, ಈಶ್ವರ್ ಖಂಡ್ರೆೆ, ಸುಧಾಕರ್ ಸೇರಿದಂತೆ ಇನ್ನೂ ಕೆಲವು ಸಚಿವರು ಸದನದಲ್ಲಿ ಹಾಜರಿರಲಿಲ್ಲ. ಆಗ ಬಿಜೆಪಿ ಶಾಸಕ ಸುನಿಲ್‌ಕುಮಾರ್ ಇದು ಇಲ್ಲಗಳ ಸರ್ಕಾರ. ಮಂತ್ರಿಿಗಳೂ ಇಲ್ಲ, ಅನುದಾನವೂ ಇಲ್ಲ ಎಂದು ಛೇಡಿಸಿದರು.
ಆಗ ಪ್ರಶ್ನೋೋತ್ತರ ಕಲಾಪ ಕೈಗೆತ್ತಿಿಕೊಂಡ ಸಭಾಧ್ಯಕ್ಷರು ಎಚ್‌ಕೆ.ಸುರೇಶ್‌ನನ್ನು ಪ್ರಶ್ನೆೆ ಕೇಳುವಂತೆ ಆಹ್ವಾಾನಿಸಿದರು.ಆಗ ಶಾಸಕರು ಆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಲಿಲ್ಲ. ಇದನ್ನು ಗಮನಿಸಿದ ಸಭಾಧ್ಯಕ್ಷರು ನಿಮ್ಮ ಸದಸ್ಯರೂ ಇಲ್ಲ ಎಂದರು. ಪ್ರತಿಯಾಗಿ ಅಶೋಕ್ ಮಾತನಾಡಿ, ನಮವರು ಸದನದಲ್ಲಿ ಹೆಚ್ಚಾಾಗಿ ಇದ್ದಾರೆ, ಆಡಳಿತ ಪಕ್ಷದವರ ಕಡೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ