Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಿಕಾರ್ಡ್ ಬ್ಯಾಾಂಕ್ ಚುನಾವಣೆ ಸತತ ಮೂರನೇ ಬಾರಿಗೆ ಅಧ್ಯಕ್ಷರಾದ ಎಂ.ದೊಡ್ಡಬಸವರಾಜ

ಸುದ್ದಿಮೂಲ ವಾರ್ತೆ ಸಿಂಧನೂರು, ಜ.29:
ಸ್ಥಳೀಯ ಪಿಎಲ್‌ಡಿ ಬ್ಯಾಾಂಕ್ ಅಧ್ಯಕ್ಷರಾಗಿ ಎಂ.ದೊಡ್ಡಬಸವರಾಜ ಹಾಗೂ ಉಪಾಧ್ಯಕ್ಷರಾಗಿ ಸಿದ್ದನಗೌಡ ಮಾಟೂರು ಅವರು ಸತತ ಮೂರನೇ ಅವಧಿಗೆ ಅವಿರೋಧ ಆಯ್ಕೆೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾಾರೆ.
ಪಿಎಲ್‌ಡಿ ಬ್ಯಾಾಂಕ್ ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾಾರ್ ಅರುಣ ಹೆಚ್.ದೇಸಾಯಿ ಚುನಾವಣಾ ಪ್ರಕ್ರಿಿಯೆ ನಡೆಸಿದರು. ಅಧ್ಯಕ್ಷ ಸ್ಥಾಾನಕ್ಕೆೆ ಎಂ.ದೊಡ್ಡಬಸವರಾಜ ಹಾಗೂ ಉಪಾಧ್ಯಕ್ಷ ಸ್ಥಾಾನಕ್ಕೆೆ ಸಿದ್ದನಗೌಡ ಮಾಟೂರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವರ ಅವಿರೋಧ ಆಯ್ಕೆೆ ಘೋಷಿಸಿದರು.
ದಾಖಲೆ:
ಪಿಎಲ್‌ಡಿ ಬ್ಯಾಾಂಕಿನ 63 ವರ್ಷಗಳ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮೂರನೇ ಅವಧಿಗೆ ಸತತ ಅಧ್ಯಕ್ಷ ಸ್ಥಾಾನಕ್ಕೆೆ ಅವಿರೋಧವಾಗಿಯೇ ಆಯ್ಕೆೆಯಾದ ಮೊದಲಿಗರು ಎನ್ನುವ ಕೀರ್ತಿಗೂ ಎಂ.ದೊಡ್ಡಬಸವರಾಜ ಪಾತ್ರರಾದರು. ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಅವರು, ರೈತರು ಹಾಗೂ ಎಲ್ಲ ನಿರ್ದೇಶಕರು, ಹಿರಿಯರ ಸಹಕಾರದೊಂದಿಗೆ ಬ್ಯಾಾಂಕ್ ಮುನ್ನಡೆಸಿಕೊಂಡು ಹೋಗುವ ಜವಾಬ್ದಾಾರಿ ನನಗೆ ವಹಿಸಿದ್ದು, ಈ ಕೆಲಸ ಸಮರ್ಥವಾಗಿ ನಿಭಾಯಿಸುತ್ತೇನೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿಿನ ಸೌಲಭ್ಯ ಕಲ್ಪಿಿಸಲಾಗುವುದು. ಮುಖ್ಯವಾಗಿ ಅವಕಾಶ ವಂಚಿತರಿಗೆ ಹೆಚ್ಚಿಿನ ಆದ್ಯತೆ ನೀಡಲಾಗುವುದು. 2026 ರಿಂದ 2031 ರವರೆಗೆ ಆಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.
ಅವಿರೋಧ ಆಯ್ಕೆೆ:
ಪಿಎಲ್‌ಡಿ ಬ್ಯಾಾಂಕಿನ ಎಲ್ಲ ನಿರ್ದೇಶಕರೂ ಕೂಡ ಅವಿರೋಧವಾಗಿಯೇ ಆಯ್ಕೆೆಯಾಗಿದ್ದಾಾರೆ. ಸಾಲಗುಂದಾ ಕ್ಷೇತ್ರದಿಂದ ಕೆ.ಕರಿಲಿಂಗಪ್ಪ, ಗುಡದೂರು ಕ್ಷೇತ್ರದಿಂದ ರಮೇಶ ಅಮರಪ್ಪ, ಮಾಡಸಿರವಾರದಿಂದ ರಾಮಣ್ಣ ಗಿಣಿವಾರ, ಜವಳಗೇರಾದ ರೇವಣಸಿದ್ದಪ್ಪ, ಬಳಗಾನೂರು ಕ್ಷೇತ್ರದಿಂದ ಲಿಂಗಪ್ಪ, ಕುನ್ನಟಗಿಯ ವೆಂಕಣ್ಣ ತಿಪ್ಪನಹಟ್ಟಿಿ, ಹುಡಾದಿಂದ ರಮೇಶ ಮುಕ್ಕುಂದಾ, ವಲ್ಕಂದಿನ್ನಿಿ ಕ್ಷೇತ್ರದಿಂದ ಹನುಮಂತಮ್ಮ ಮಣ್ಣಿಿಕೇರಿ ಕ್ಯಾಾಂಪ್, ಗೋರೆಬಾಳದಿಂದ ಶಿವಪ್ಪ ಸಾಸಲಮರಿ, ತುರುವಿಹಾಳದಿಂದ ಲಲಿತಮ್ಮ ಉಮಲೂಟಿ, ಜಾಲಿಹಾಳದಿಂದ ಹೇಮಾವತಿ ಭೀಮರಾಜ ಕ್ಯಾಾಂಪ್, ಕೆ.ಬಸಾಪರ ಕ್ಷೇತ್ರದ ಈರಣ್ಣ ಅವರೂ ಕೂಡ ನಿರ್ದೇಶಕರಾಗಿ ಅವಿರೋಧ ಆಯ್ಕೆೆಗೊಂಡರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಭೀಮಣ್ಣ, ಬಿಜೆಪಿ ಗ್ರಾಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ, ನಗರ ಮಂಡಲ ಅಧ್ಯಕ್ಷ ಸಿದ್ರಾಾಮೇಶ ಮನ್ನಾಾಪುರ, ಸಿಂಧನೂರು ವಿವಿಧೋದ್ದೇಶ ಕೃಷಿ ಪತ್ತಿಿನ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಸಹಾಯಕ ಚುನಾವಣಾಧಿಕಾರಿ ಕಿರಣಕುಮಾರ್, ಪಿಎಲ್‌ಡಿ ಬ್ಯಾಾಂಕ್ ಮ್ಯಾಾನೇಜರ್ ಮಲ್ಲಯ್ಯ ಸೇರಿದಂತೆ ಹಲವರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ