Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನ್ವಿ : ಕೋನಾಪುರಪೇಟೆ, ಅಂಬೇಡ್ಕರ್ ನಗರ ಅಭಿವೃದ್ಧಿಿಗಾಗಿ ಒತ್ತಾಯಿಸಿ ಜ.12 ರಂದು ಉಪವಾಸ ಧರಣಿ - ಗುರುರಾಜ ನಾಗಲಾಪುರ

 ಸುದ್ದಿಮೂಲ ವಾರ್ತೆ ಮಾನ್ವಿ, ಜ.07:
ಮಾನ್ವಿಿ ಪಟ್ಟಣದ ಕೋನಾಪುರಪೇಟೆ, ಅಂಬೇಡ್ಕರ್ ನಗರ ವ್ಯಾಾಪ್ತಿಿ ಪ್ರದೇಶಗಳ ಅಭಿವೃದ್ಧಿಿಗಾಗಿ ಒತ್ತಾಾಯಿಸಿ ಜನವರಿ 12 ರಂದು ಅಂಬೇಡ್ಕರ್ ನಗರದ ಚೀಕಲಪರ್ವಿ ರಸ್ತೆೆಯಲ್ಲಿ ನಾಗರಿಕರೊಂದಿಗೆ ಉಪವಾಸ ಧರಣಿ ನಡೆಸುವುದಾಗಿ ಸಮಾಜ ಸೇವಕ ಗುರುರಾಜ ನಾಗಲಾಪುರ ತಿಳಿಸಿದ್ದಾರೆ.
ಬುಧವಾರ ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣದ ಹೃದಯ ಭಾಗ ಕೋನಾಪುರಪೇಟೆ ಮತ್ತು ಅಂಬೇಡ್ಕರ್ ನಗರ ವ್ಯಾಾಪ್ತಿಿಯ ಪ್ರದೇಶಗಳು ಅನೇಕ ವರ್ಷಗಳಿಂದ ಮೂಲಭೂತ ಸೌಲಭ್ಯ ಮತ್ತು ಅಭಿವೃದ್ದಿಯಿಂದ ವಂಚಿತವಾಗಿವೆ. ಇಲ್ಲಿನ ಜನರು ಅನೇಕ ಸಮಸ್ಯೆೆಗಳನ್ನು ಎದುರಿಸುತ್ತಿಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆೆಗಳಿಗೆ ಸ್ಪಂದಿಸದೇ ತೀವು ನಿರ್ಲಕ್ಷ ಹೊಂದಿದ್ದಾರೆ.
ಜನಸಂದಣಿ, ಕಿರಿದಾದ ರಸ್ತೆೆ ಮತ್ತು ತೀವೃ ಸಂಚಾರದಿಂದ ಟ್ರಾಾಫಿಕ್ ಸಮಸ್ಯೆೆ, ರಸ್ತೆೆ ಅಗಲೀಕರಣ ಸಮಸ್ಯೆೆ, ಕುಡಿಯುವ ನೀರಿನ ಸಮಸ್ಯೆೆ, ನಿರಂತರ ವಿದ್ಯುತ್ ಸರಬರಾಜು, ಸರಕಾರಿ ಆಸ್ಪತ್ರೆೆಯಲ್ಲಿ ವೈದ್ಯರ ಕೊರತೆ, ರಸ್ತೆೆ ಒತ್ತುವರಿ, ಕಸ ವಿಲೇವಾರಿ ಘಟಕ, ವಿಪರೀತ ಧೂಳು ಮುಂತಾದ ಗಂಭೀರ ಸಮಸ್ಯೆೆಗಳನ್ನು ಇಲ್ಲಿನ ಜನ ಅನೇಕ ವರ್ಷಗಳಿಂದ ಅನುಭವಿಸುತ್ತಿಿದ್ದಾರೆ ಎಂದು ತೀವೃ ಅಸಮಾಧಾನ ವ್ಯಕ್ತಪಡಿಸಿದರು.
ಆದಕಾರಣ ಕೋನಾಪುರಪೇಟೆ-ಚೀಕಲಪರ್ವಿ ರಸ್ತೆೆಯನ್ನು ಅಗಲೀಕರಣ ಮಾಡಿ ವಾಹನ ದಟ್ಟಣೆ ನಿವಾರಣೆಗಾಗಿ ಬೈಪಾಸ್ ರಸ್ತೆೆಯನ್ನು ನಿರ್ಮಾಣ ಮಾಡಬೇಕು, ಪುರಸಭೆ ವತಿಯಿಂದ ಎರಡು ದಿನಕ್ಕೊೊಮ್ಮೆೆ ನಿರಂತರವಾಗಿ ಶುದ್ದ ಕುಡಿಯುವ ನೀರಿನ ಪೂರೈಕೆ ಮಾಡಬೇಕು, ರಸ್ತೆೆಯಲ್ಲಿ ಧೂಳು ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ಟೌನ್ ಹಾಲ್ ಎದುರುಗಡೆ ಇರುವ ಡಾಂಬರು ರಸ್ತೆೆ ಮತ್ತು ಕೆನಾಲ್ ಬದಿಯಲ್ಲಿ ಅನಧಿಕೃತವಾಗಿ ಇಟ್ಟಿಿರುವ ಡಬ್ಬಾಾ ಅಂಗಡಿಗಳನ್ನು ತೆರವುಗೊಳಿಸಿ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ವಾಕಿಂಗ್ ಟ್ರ್ಯಾಾಕ್ ಹಾಗೂ ಉದ್ಯಾಾನವನ ನಿರ್ಮಿಸಬೇಕು, ಎಂಬ ಹಲವಾರು ಬೇಡಿಕೆಗಳನ್ನು ಇಟ್ಟು ಉಪವಾಸ ಧರಣಿ ಹಮ್ಮಿಿಕೊಳ್ಳಲಾಗಿದೆ. ಕಾರಣ ಕೋನಾಪುರಪೇಟೆ ಮತ್ತು ಅಂಬೇಡ್ಕರ್ ನಗರದ ವ್ಯಾಾಪ್ತಿಿ ಪ್ರದೇಶದ ಜನರು ಇದರಲ್ಲಿ ಭಾಗವಹಿಸಿ ಸೌಲಭ್ಯ ಮತ್ತು ಸಮಸ್ಯೆೆಗಳಿಗೆ ಪರಿಹಾರ ಪಡೆಯಬೇಕೆಂದು ಗರುರಾಜ ನಾಗಲಾಪುರ ಮನವಿ ಮಾಡಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಮುಖಂಡರಾದ ನರಸಿಂಹ ಹೆಳವರ,ವೆಂಕಟೇಶ ಯಾದವ್, ಆನಿಲ್ ಗೌಡ, ವೀರೇಶ ಯಾದವ್ ಮುಂತಾದವರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ