Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ರಾಜ್ಯದ ಕೆರೆಗಳ ಮಾಲೀಕತ್ವ ವರ್ಗೀಕರಣಕ್ಕೆ ಸೂಚನೆ

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.8:
ರಾಜ್ಯದಲ್ಲಿರುವ ಒಟ್ಟು ಜಲಮೂಲಗಳ ನಿಖರವಾದ ಸಂಖ್ಯೆೆಯನ್ನು ಅಂತಿಮಗೊಳಿಸಿ, ಇಲಾಖಾವಾರು ವರ್ಗೀಕರಣಕ್ಕೆೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಬಿ.ಕೆ.ಪವಿತ್ರ, ಭೂಮಾಪನ ಇಲಾಖೆ ಕರ್ನಾಟಕ ರಾಜ್ಯ ದೂರಸಂವೇದಿ ಅಪ್ಲಿಿಕೇಶನ್ ಕೇಂದ್ರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಿ ಪ್ರಾಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದರು.
ರಾಜ್ಯದಲ್ಲಿ ವಿವಿಧ ಇಲಾಖೆಗಳ ಮಾಲೀಕತ್ವದಲ್ಲಿ ಅಂದಾಜು 41849 ಜಲಮೂಲಗಳ ಬಗ್ಗೆೆ ಇಲಾಖೆಗಳ ಮಧ್ಯೆೆ ಬಹಳಷ್ಟು ಗೊಂದಲವಿದೆ. ಹಲವಾರು ಕೆರೆಗಳು, ಜಲಮೂಲಗಳ ಮಾಲೀಕತ್ವದ ಬಗ್ಗೆೆಯೂ ಗೊಂದಲವಿದೆ. ಇದರಿಂದಾಗಿ ಈ ಜಲಮೂಲಗಳ ಅಸ್ತಿಿತ್ವ ಹಾಗೂ ಅವುಗಳ ಸಮಪರ್ಕ ನಿರ್ವಹಣೆಯ ಕಾರ್ಯದಲ್ಲಿ ತೊಡಕಾಗುತ್ತಿಿದೆ.
ಇದನ್ನು ತಪ್ಪಿಿಸುವ ನಿಟ್ಟಿಿನಲ್ಲಿ ಮೊದಲು ರಾಜ್ಯದಲ್ಲಿರುವಂತಹ ಕೆರೆ ಹಾಗೂ ಜಲಮೂಲಗಳ ಸಂಖ್ಯೆೆಗಳ ಬಗ್ಗೆೆ ನಿಖರವಾದ ದತ್ತಾಾಂಶ ಕ್ರೋೋಢೀಕರಣ ಮಾಡಬೇಕಾಗಿದೆ. ಈ ನಿಟ್ಟಿಿನಲ್ಲಿ ಅಂತರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಈ ನಿಟ್ಟಿಿನಲ್ಲಿ ಅಧಿಕಾರಿಗಳ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.
ಕೆರೆ ಹಾಗೂ ಜಲಮೂಲಗಳ ಒಟ್ಟು ಸಂಖ್ಯೆೆ ಅಂತಿಮ ಗಳಿಸುವುದು. ರಾಜ್ಯದಲ್ಲಿರುವ ಒಟ್ಟು ಕೆರೆಗಳ ಸಂಖ್ಯೆೆಯ ಬಗ್ಗೆೆ ಗೊಂದಲ ನಿವಾರಿಸಲು, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಕೆರೆಗಳ ಒಟ್ಟು ಸಂಖ್ಯೆೆಯನ್ನು ಅಂತಿಮಗೊಳಿಸಬೇಕು. ಇದು ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತಡೆಯಲು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಮಾಲೀಕತ್ವದ ಆಧಾರದಲ್ಲಿ ವರ್ಗೀಕರಣ : ಅಂತಿಮಗೊಂಡ ಕೆರೆಗಳನ್ನು ಯಾವ ಇಲಾಖೆಯ ವ್ಯಾಾಪ್ತಿಿಗೆ (ಸಣ್ಣ ನೀರಾವರಿ, ಗ್ರಾಾಮೀಣಾಭಿವೃದ್ಧಿಿ ಅಥವಾ ಇತರೆ) ಬರುತ್ತವೆ ಎಂಬುದರ ಆಧಾರದ ಮೇಲೆ ಸ್ಪಷ್ಟವಾಗಿ ವಿಂಗಡಣೆ ಮಾಡಬೇಕು. ಇದರಿಂದ ನಿರ್ವಹಣೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ.
ರಾಜ್ಯದ ಯಾವ ಕೆರೆಗಳಲ್ಲಿ ಪ್ರಸ್ತುತ ಶೇ.30 ಕ್ಕಿಿಂತ ಕಡಿಮೆ ನೀರಿನ ಸಂಗ್ರಹವಿದೆ ಎಂಬುದರ ಕುರಿತು ತ್ವರಿತವಾಗಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಈ ಮಾಹಿತಿಯ ಆಧಾರದ ಮೇಲೆ ಮುಂದಿನ ಅಭಿವೃದ್ಧಿಿ ಕಾರ್ಯಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು.
ಈ ಕಾರ್ಯದಲ್ಲಿ ಕೆಎಸ್‌ಆರ್‌ಎಸಿ ಮತ್ತು ಕೆಸಿಎಸ್‌ಟಿ ಸಂಸ್ಥೆೆಗಳು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ