Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್‌ಎಸ್‌ಎಸ್ ಶತಮಾನೋತ್ಸವದ ಸಂವಾದದಲ್ಲಿ ಭಾಗಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಯುಸಿಸಿ ಜಾರಿ: ಮೋಹನ್ ಭಾಗವತ್

ಮುಂಬೈ, ೆ.08:
ಎಲ್ಲರನ್ನೂ ವಿಶ್ವಾಾಸಕ್ಕೆೆ ಪಡೆದುಕೊಂಡು ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ರೂಪಿಸಬೇಕು. ಇದು ಯಾವುದೇ ವಿಭಜನೆಗಳಿಗೆ ಕಾರಣವಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಭಾನುವಾರ ನಡೆದ ಆರ್‌ಎಸ್‌ಎಸ್‌ನ ಶತಮಾನೋತ್ಸವ ಕಾರ್ಯಕ್ರಮವೊಂದರಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊೊಂಡು ಮಾತನಾಡಿದರು.
ಯುಸಿಸಿ ಕುರಿತಾಗಿ ಉತ್ತರಾಖಂಡದಲ್ಲಿ ಮೂರು ಲಕ್ಷ ಸಲಹೆಗಳನ್ನು ಪಡೆಯಲಾಗಿತ್ತು. ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚಿಸಿದ ನಂತರವೇ ಕಾಯ್ದೆೆಯನ್ನು ಅಲ್ಲಿ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇನ್ನೊೊಂದು ಪ್ರಶ್ನೆೆಗೆ ಉತ್ತರಿಸಿದ ಅವರು ನಮ್ಮಲ್ಲಿ ಬಹುಮತ ಅಥವಾ ಅಲ್ಪಸಂಖ್ಯಾಾತ (ಸಮುದಾಯ) ಅಂತ ಇಲ್ಲ. ನಾವೆಲ್ಲರೂ ಒಂದೇ ಸಮಾಜದವರು ಎಂದು ಪ್ರತಿಪಾದಿಸಿದರು.
ಅಷ್ಟೇ ಅಲ್ಲದೇ, ಮುಸ್ಲಿಿಂ ಮತ್ತು ಕ್ರಿಿಶ್ಚಿಿಯನ್ ಸಮುದಾಯಗಳೊಂದಿಗೆ ಪರಸ್ಪರ ನಂಬಿಕೆ, ಸ್ನೇಹ ಮತ್ತು ಸಂವಾದದ ಅಗತ್ಯತೆಯನ್ನು ಭಾಗವತ್ ಹೇಳಿದರು.
ಇಸ್ಲಾಾಂ ಧರ್ಮವನ್ನು ಶಾಂತಿಯ ಧರ್ಮ ಎಂದು ಕರೆಯಲಾಗುತ್ತದೆ. ಆದರೆ ಶಾಂತಿ ಕಾಣುವುದಿಲ್ಲ. ಧರ್ಮದಲ್ಲಿ ಆಧ್ಯಾಾತ್ಮಿಿಕತೆ ಇಲ್ಲದಿದ್ದರೆ, ಅದು ಪ್ರಾಾಬಲ್ಯ ಮತ್ತು ಆಕ್ರಮಣಕಾರಿಯಾಗುತ್ತದೆ. ಇಂದು ಇಸ್ಲಾಾಂ ಮತ್ತು ಕ್ರಿಿಶ್ಚಿಿಯನ್ ಧರ್ಮದಲ್ಲಿ ಕಾಣುತ್ತಿಿರುವುದು ಯೇಸು ಕ್ರಿಿಸ್ತರು ಮತ್ತು ಪ್ರವಾದಿ ಮುಹಮ್ಮದರ ಬೋಧನೆಗಳ ಪ್ರಕಾರವಲ್ಲ. ನಮಗೆ ನಿಜವಾದ ಇಸ್ಲಾಾಂ ಮತ್ತು ಕ್ರಿಿಶ್ಚಿಿಯನ್ ಧರ್ಮದ ಆಚರಣೆಗಳು ಬೇಕಿವೆ ಎಂದರು.
ಆರ್‌ಎಸ್‌ಎಸ್‌ಗೆ ಅಚ್ಛೇ ದಿನ್ ಬಂದಿದೆಯೇ:
ಬಿಜೆಪಿ ಅಧಿಕಾರಕ್ಕೆೆ ಬಂದ ನಂತರ ಆರ್‌ಎಸ್‌ಎಸ್‌ಗೆ ಒಳ್ಳೆೆಯ ದಿನಗಳು ಬಂದಿದೆಯೇ ಎಂಬ ಪ್ರಶ್ನೆೆಗೆ, ನಮಗೆ ಒಳ್ಳೆೆಯ ದಿನಗಳು ಬಿಜೆಪಿಯಿಂದಾಗಿ ಬಂದಿಲ್ಲ. ನಾವು ರಾಮಮಂದಿರ ನಿರ್ಮಾಣಕ್ಕೆೆ ಬದ್ಧರಾಗಿದ್ದೆವು. ನಮ್ಮನ್ನು ಬೆಂಬಲಿಸಿದವರಿಗೆ ಲಾಭವಾಯಿತು. ಸ್ವಯಂಸೇವಕರ ಕಠಿಣ ಪರಿಶ್ರಮ ಮತ್ತು ಸೈದ್ಧಾಾಂತಿಕ ನೀತಿಗಳ ಬದ್ಧತೆಯಿಂದ ಆರ್‌ಎಸ್‌ಎಸ್‌ಗೆ ಅಚ್ಛೇ ದಿನ್ ಬಂದಿದೆ ಎಂದು ಒತ್ತಿಿ ಹೇಳಿದರು.
ಹಿಂದುತ್ವ ಸಿದ್ಧಾಾಂತವಾದಿ ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಬಹುದಿನಗಳ ಬೇಡಿಕೆಯ ಕುರಿತು ಪ್ರತಿಕ್ರಿಿಯಿಸುತ್ತಾಾ, ಅವರಿಗೆ ಪ್ರಶಸ್ತಿಿ ನೀಡಿದರೆ ಪ್ರಶಸ್ತಿಿಯ ಘನತೆ ಹೆಚ್ಚಾಾಗುತ್ತದೆ ಎಂದು ತಿಳಿಸಿದರು.
ಇತ್ತೀಚಿನ ಭಾರತ-ಅಮೆರಿಕ ವ್ಯಾಾಪಾರ ಒಪ್ಪಂದದ ಕುರಿತು ಪ್ರತಿಕ್ರಿಿಯಿಸಿ, ನಾವಿಂದು ಜಗತ್ತಿಿನಿಂದ ಪ್ರತ್ಯೇಕವಾಗಿ ಉಳಿಯಲು ಸಾಧ್ಯವಿಲ್ಲ ಎಂಬುದು ಸತ್ಯ. ಸಾಮಾನ್ಯವಾಗಿ ಒಪ್ಪಂದಗಳಲ್ಲಿ ಕೊಡು-ಕೊಳ್ಳುವಿಕೆ ಇರುತ್ತದೆ. ಅದು ಗೆಲುವು-ಗೆಲುವಿನಂತಿರಬೇಕು. ನಮಗೆ ನಷ್ಟ ಆಗುವುದಿಲ್ಲ ಎಂಬುದನ್ನು ಖಾತ್ರಿಿಪಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ, ಅಗತ್ಯವಿದ್ದಾಗ ಆರ್‌ಎಸ್‌ಎಸ್ ಸಲಹೆ ನೀಡುತ್ತದೆ. ಸರ್ಕಾರಕ್ಕೆೆ ರಾಜಕೀಯ ಒತ್ತಡ ಆರ್‌ಎಸ್‌ಎಸ್‌ನಿಂದಲ್ಲ, ಮತದಾರರಿಂದ ಬರುತ್ತದೆ ಎಂದು ತಿಳಿಸಿದರು.
ನಟಿ ರವೀನಾ ಟಂಡನ್, ವಿಕ್ಕಿಿ ಕೌಶಲ್, ಅನನ್ಯ ಪಾಂಡೆ, ಚಲನಚಿತ್ರ ನಿರ್ಮಾಪಕರಾದ ಕರಣ್ ಜೋಹರ್, ಮಧುರ್ ಭಂಡಾಕರರ್, ರಮೇಶ್ ತೌರಾನಿ ಮತ್ತು ಸಂಗೀತಗಾರ ಪಂಡಿತ್ ಹೃದಯನಾಥ್ ಮಂಗೇಶ್ಕರ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ