Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಲಬುರಗಿಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ ಎನ್‌ಎಬಿಎಲ್ ಮಾನ್ಯತೆ ಗರಿ ಪ್ರದೇಶದ ಕೃಷಿ ವಲಯದ ಗುಣಮಟ್ಟ ಬಲಪಡಿಸುವಲ್ಲಿ ಸಹಕಾರಿ

ಸುದ್ದಿಮೂಲ ವಾರ್ತೆ ಕಲಬುರಗಿ, ೆ.1:
ಗುಣಮಟ್ಟ ಮತ್ತು ನಿಖರ ಪೀಡೆನಾಶಕ ಪರೀಕ್ಷಾ ವಿಧಾನ ಅನುಸರಿಸುತ್ತಿಿರುವುದಕ್ಕಾಾಗಿ ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಮಂಡಳಿಯು (ಎನ್ಎಬಿಎಲ್) ಕಲಬುರಗಿಯ ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆೆ ಐಎಸ್ಓ/ಐಇಸಿ 17025 ಮಾನ್ಯತೆ ನೀಡಿದ್ದು, ಇದರಿಂದ ಕಲಬುರಗಿ ಸಂಸ್ಥೆೆಯ ವರದಿಗೆ ಅಂತರಾಷ್ಟ್ರೀಯ ಮಾನ್ಯತೆ ದೊರೆತಂತಾಗಿದೆ.
ಕಲಬುರಗಿಯ ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯವು ಐಎಸ್ಓ/ಐಇಸಿ 17025 ಮಾನ್ಯತೆ ಪಡೆಯುವುದರೊಂದಿಗೆ ಪ್ರತಿಷ್ಠಿಿತ ಮೈಲಿಗಲ್ಲು ಸಾಧಿಸಿದೆ. ಇದರಿಂದ ಪ್ರದೇಶದಲ್ಲಿ ಕೃಷಿ ಗುಣಮಟ್ಟದ ಭರವಸೆ ಮತ್ತು ವಿಶೇಷಣಾತ್ಮಕ ಶ್ರೇೇಷ್ಠತೆಯನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿಿದೆ.
ಎನ್ಎಬಿಎಲ್ ಮಾನ್ಯತೆಯು ಕಲಬುರಗಿಯ ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯದ ವಿಶ್ವಾಾಸಾರ್ಹ, ನಿಖರ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಕೀಟನಾಶಕ ಪರೀಕ್ಷಾ ಸೇವೆಗಳಿಗೆ ಬದ್ಧತೆಯನ್ನು ಪುನರುಚ್ಛರಿಸುತ್ತದೆ. ಇದು ನಾಲ್ಕು ಜಿಲ್ಲೆಗಳ ರೈತರು, ಕೃಷಿ-ಇನ್ನುಟ್ ಪೂರೈಕೆದಾರರು ಮತ್ತು ಪಾಲುದಾರರಿಗೆ ಗುಣಮಟ್ಟದ ಭರವಸೆಯನ್ನು ಖಚಿತಪಡಿಸುವ ಮತ್ತು ಸುಸ್ಥಿಿರ ಕೃಷಿಯನ್ನು ಉತ್ತೇಜಿಸುವ ಮೂಲಕ ಹೆಚ್ಚಿಿನ ಪ್ರಯೋಜನವನ್ನು ನೀಡುತ್ತದೆ. ಒಟ್ಟಾಾರೆಯಾಗಿ ಕಲ್ಯಾಾಣ ಕರ್ನಾಟಕ ಭಾಗದ ಕೃಷಿ ವಲಯದ ಗುಣಮಟ್ಟ ಬಲಪಡಿಸುವಲ್ಲಿ ರಹದಾರಿಯಾಗಲಿದೆ.
ಕೀಟನಾಶಕ ಕಾಯ್ದೆೆ-1968ರನ್ವಯ ಕಲಬುರಗಿ, ಯಾದಗಿರಿ, ಬೀದರ ಮತ್ತು ವಿಜಯಪುರ ಜಿಲ್ಲೆಗಳ ರೈತರಿಗೆ ಗುಣಮಟ್ಟದ ಪೀಡೆನಾಶಕಗಳನ್ನು ಖಚಿತಪಡಿಸುವ ಉದ್ದೇಶದಿಂದ ಏಪ್ರಿಿಲ್ 1997ರಲ್ಲಿ ಈ ಸಂಸ್ಥೆೆ ಕಲಬುರಗಿಯಲ್ಲಿ ಸ್ಥಾಾಪಿಸಲಾಗಿದ್ದು, ವಾರ್ಷಿಕ 1,280 ಪೀಡೆನಾಶಕ ಮಾದರಿಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಗುರಿ ಹೊಂದಿದೆ.
ಕಳೆದ ಆರು ತಿಂಗಳುಗಳಲ್ಲಿ ಕಲಬುರಗಿ ಜಿಲ್ಲಾಡಳಿತ ಮತ್ತು ಕೃಷಿ ಜಂಟಿ ನಿರ್ದೇಶಕರ ಕ್ರಿಿಯಾತ್ಮಕ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಪ್ರಯೋಗಾಲಯ ತಂಡವು ಉಪಕರಣಗಳ ಮಾಪನಾಂಕ ನಿರ್ಣಯ, ಸಮಗ್ರ ಸಿಬ್ಬಂದಿ ತರಬೇತಿ, ಕಠಿಣ ಗುಣಮಟ್ಟ ನಿರ್ವಹಣಾ ವ್ಯವಸ್ಥೆೆಗಳು ಮತ್ತು ಕಠಿಣ ಆಂತರಿಕ ಲೆಕ್ಕಪರಿಶೋಧನೆಯ ಮೂಲಕ ಅಸಾಧಾರಣ ಸಮರ್ಪಣೆಯನ್ನು ಪ್ರದರ್ಶಿಸಿದ್ದರಿಂದ ಎನ್ಎಬಿಎಲ್ ಸಂಸ್ಥೆೆಯ ತಂಡವು ಇತ್ತೀಚೆಗೆ ಕಲಬುರಗಿ ಪ್ರಯೋಗಾಲಯಕ್ಕೆೆ ಭೇಟಿ ನೀಡಿ ಐಎಸ್ಓ/ಐಇಸಿ 17025 ನಂತಹ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಪ್ರಯೋಗಾಲಯದ ತಾಂತ್ರಿಿಕ ಸಾಮರ್ಥ್ಯದ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯವನ್ನು ಪ್ರಮಾಣೀಕರಿಸಿ ಇತ್ತೀಚೆಗೆ ಕಲಬುರಗಿ ಎಸ್.ಪಿ.ಟಿ.ಎಲ್.ಗೆ ಈ ಮಾನ್ಯತೆ ನೀಡಿದೆ. ಇದರಿಂದಾಗಿ ರಾಜ್ಯದ 6 ಎಸ್.ಪಿ.ಟಿ.ಎಲ್ ಸಂಸ್ಥೆೆಗಳು ಎನ್ಎಬಿಎಲ್ ಮಾನ್ಯತೆ ಪಡೆದಂತಾಗಿದೆ.
ಕಲಬುರಗಿಯ ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆೆ ಐಎಸ್ಓ/ಐಇಸಿ 17025 ಮಾನ್ಯತೆ ಬಂದಿರುವುದಕ್ಕೆೆ ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್ ಅವರು ಹರ್ಷ ವ್ಯಕ್ತಪಡಿಸಿ ಮಾನ್ಯತೆ ಪ್ರಮಾಣಪತ್ರವನ್ನು ಔಪಚಾರಿಕವಾಗಿ ಪ್ರಯೋಗಾಲಯದ ಮುಖ್ಯಸ್ಥರಾಗಿರುವ ಉಪ ಕೃಷಿ ನಿರ್ದೇಶಕ ಜುಲ್ಫಿಿಖರ ಅಹೆಮದ್ ಅವರಿಗೆ ಹಸ್ತಾಾಂತರಿಸಿದರು. ಎಸ್.ಪಿ. ಅಡೂರು ಶ್ರೀನಿವಾಸಲು, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಂಟಿ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ