Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಷ್ಟ್ರೀಯ ಹೆಣ್ಣು ಮಗು ಜಾಗೃತಿ ದಿನ ಮಕ್ಕಳ, ಮಹಿಳೆಯರ ಆರೋಗ್ಯಕ್ಕೆ ಮೊದಲ ಆದ್ಯತೆ - ಡಿಎಚ್‌ಓ

 ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ ನಡೆಯಿತು.
ಇಂದು ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆೆಯಲ್ಲಿ ಜನನವಾದ ಹೆಣ್ಣು ಮಕ್ಕಳಿಗೆ ಹೊಸ ಉಡುಪು ಹಾಗೂ ಸಿಹಿ ಪದಾರ್ಥ ತಾಯಂದಿರಿಗೆ ವಿತರಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರ ಬಾಬು, ಹೆರಿಗೆಯು ಕುಟುಂಬದ ಆರ್ಥಿಕ ತೊಂದರೆಗೆ ಕಾರಣವಾಗುತ್ತಿಿದೆ ಎಂಬ ನಂಬಿಕೆ ದೂರ ಮಾಡಲು ಮತ್ತು ಮಗುವಿನ ಜನನದ ನಂತರ ಹೆಣ್ಣು ಗಂಡು ಎಂಬ ಭೇದ ತೊಲಗಿಸಲು ಮಹಿಳೆಯ ಆರೋಗ್ಯದ ದೃಷ್ಟಿಿಯಿಂದ ರಾಜ್ಯ ಸರ್ಕಾರ ಸುಸಜ್ಜಿಿ ತ ಕಟ್ಟಡ, ಅತ್ಯಾಾಧುನಿಕ ಪರಿಕರಗಳು, ತಜ್ಞವೈದ್ಯರ ನೇಮಕದೊಂದಿಗೆ ತಾಯಿ ಮಕ್ಕಳ ಆಸ್ಪತ್ರೆೆಗಳನ್ನು ಜಿಲ್ಲೆಯ ರಾಯಚೂರು, ಮಾನ್ವಿಿ, ಸಿಂಧನೂರುಗಳಲ್ಲಿ ಜನಪ್ರತಿನಿಧಿಗಳ ಬೆಂಬಲ, ಜಿಲ್ಲಾಡಳಿತ ಮಾರ್ಗದರ್ಶನದಡಿ ಈಗಾಗಲೇ ಆರಂಭಿಸಲಾಗಿದೆ ಎಂದರು.
ಹೆರಿಗೆಗೆ ಆಗಮಿಸುವ ಗರ್ಭಿಣಿಯು ಜನನಿ ಶಿಶು ಸುರಕ್ಷಾ ಯೋಜನೆ, ಸುಮನ್, ಲಕ್ಷ್ಯ ಕಾರ್ಯಕ್ರಮಗಳಡಿ ಸುರಕ್ಷಿತ ಹೆರಿಗೆಯೊಂದಿಗೆ ಸಂತಸದಿಂದ ಅದ ನಗುಮಗು ವಾಹನದಲ್ಲಿ ಮನೆಗೆ ಮರಳುವ ಸುಂದರ ಕ್ಷಣಗಳನ್ನು ಹಂಚಿಕೊಳ್ಳಲಾಗುತ್ತಿಿದೆ. ಕುಟುಂಬದಲ್ಲಿ ಹೆಣ್ಣು ಎಂಬ ಭೇದ ಮಾಡದೆ ಮಗಳಿಗೆ ಆರೋಗ್ಯ ಇಲಾಖೆಯಡಿ ಬಾಲ್ಯದಲ್ಲಿಯೇ ಸಂಪೂರ್ಣ ಲಸಿಕೆ, ಹದಿಹರೆಯದಲ್ಲಿ ರಕ್ತಹೀನತೆಯ ವಿಷಚಕ್ರ ಅಳಿಸಲು ಅನೀಮಿಯಾ ಮುಕ್ತ ಪೌಷ್ಟಿಿಕ ಕರ್ನಾಟಕ ಯೋಜನೆಯಡಿ ಕಬ್ಬಿಿಣಾಂಶ ಮಾತ್ರೆೆಗಳ ಒದಗಿಸುವಿಕೆ, ವೈಯಕ್ತಿಿಕ ಆರೋಗ್ಯಕ್ಕಾಾಗಿ ಶುಚಿ ನ್ಯಾಾಪ್ಕಿಿನ್‌ಗಳ ಪೂರೈಕೆ, ಸ್ನೇಹ ಕ್ಲಿಿನಿಕ್ ಮೂಲಕ ಹದಿಹರೆಯದ ಸಮಸ್ಯೆೆಗಳಿಗೆ ಸ್ಪಂದನೆ, ಮದುವೆಯನ್ನು 18 ವರ್ಷ ತುಂಬಿದ ನಂತರ, 20 ವರ್ಷಗಳ ನಂತರ ಗರ್ಭವತಿಯಾಗುವಿಕೆಯ ಮಹತ್ವ ಕುರಿತು ಜಾಗೃತಿ ನೀಡಲಾಗುತ್ತಿಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಸ್ಕ್ಯಾಾನಿಂಗ್ ಸೆಂಟರ್‌ಗಳ ನಿಗಾವಣೆಯೊಂದಿಗೆ, ಹೆಣ್ಣು ಭ್ರೂಣ ಹತ್ಯೆೆ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯು ನಿರಂತರ ಜಾಗೃತಿ ಮೂಲಕ, ಪುರುಷ, ಸೀ ಅನುಪಾತದ ಸಮ ಪ್ರಮಾಣಕ್ಕಾಾಗಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆೆ ಕಾಯ್ದೆೆ 1994ಕ್ಕೆೆ ಬಲ ತುಂಬಿದೆ. ಭ್ರೂಣ ಲಿಂಗ ಪತ್ತೆೆಗೆ ಮುಂದಾದವರ ಬಗ್ಗೆೆ ಮಾಹಿತಿ ಕೊಟ್ಟವರಿಗೆ ನೀಡುವ ಬಹುಮಾನವನ್ನು ರೂ 50 ಲಕ್ಷದಿಂದ ರೂ 1 ಲಕ್ಷಕ್ಕೆೆ ಏರಿಕೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಎನ್‌ೆರ್ಸಮೆಂಟ್ ಅಧಿಕಾರಿ ಡಾ.ಶಿವಕುಮಾರ ನಾರಾ, ತಾಲೂಕ ಆರೋಗ್ಯಾಾಧಿಕಾರಿ ಡಾ ಅಮೃತ ಹುಕ್ಕೇರಿ, ಎಂಸಿಎಚ್ ಆಡಳಿತ ವೈದ್ಯಾಾಧಿಕಾರಿ ಡಾ ಪ್ರಜ್ವಲಕುಮಾರ, ಪ್ರಸೂತಿ ತಜ್ಞೆ ಡಾ.ಶಾಲಿನಿ, ಅರವಳಿಕೆ ತಜ್ಞ ಡಾ ಸರ್ರಾಜ್ ಖಾಜಿ, ಮಕ್ಕಳ ತಜ್ಞ ಡಾ ಮೋಹಿಜಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸ್ಸಯ್ಯ, ಮುಖ್ಯ ಶುಶ್ರೂಷಣಾಧಿಕಾರಿ ಸಲೋಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ, ನಾಗರಾಜ್, ಹಿರಿಯ ಹೆಚ್ಐಓ ಸುರೇಶ, ಈರಮ್ಮ, ಅಮರೇಶ ಗಡ್ಡಿಿ, ಸಂಧ್ಯಾಾ ಸೇರಿದಂತೆ ತಾಯಂದಿರು, ಸಾರ್ವಜನಿಕರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ