Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಆಕ್ಷೇಪ ಜ.27ರಂದು ಸಮಾವೇಶ, ಕಾನೂನು ಹೋರಾಟದ ಎಚ್ಚರಿಕೆ

ಸುದ್ದಿಮೂಲ ವಾರ್ತೆ ರಾಯಚೂರು, ಜ.22:
ಅವಧಿ ಮುಗಿಯುತ್ತಿಿರುವ ಗ್ರಾಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಆದೇಶ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ತಕ್ಷಣವೇ ಹಿಂಪಡೆಯಬೇಕು ಎಂದು ರಾಯಚೂರು ಜಿಲ್ಲಾ ಗ್ರಾಾಮ ಪಂಚಾಯತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀಧರ ಗೌಡ, ಸಿಂಧನೂರು ತಾಲೂಕಾಧ್ಯಕ್ಷ ರವಿಗೌಡ ಮಲ್ಲದಗುಡ್ಡ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಜಿಲ್ಲೆೆ ಸೇರಿ ರಾಜ್ಯದ ವಿವಿಧ ಗ್ರಾಾಮ ಪಂಚಾಯಿತಿಗಳ ಚುನಾಯಿತ ಆಡಳಿತ ಮಂಡಳಿಗಳ ಅಧಿಕಾರ ಮುಂದಿನ ತಿಂಗಳು ವಿವಿಧ ದಿನಗಳಂದು ಮುಗಿಯಲಿದ್ದು ಈ ಸರ್ಕಾರ ಅವಧಿ ಪೂರ್ಣಗೊಳಿಸುವ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ಆದೇಶ ಹೊರಡಿಸಿದ್ದು ಸರಿಯಲ್ಲ ಎಂದು ದೂರಿದರು.
ಕರ್ನಾಟಕ ಗ್ರಾಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 8(1)ಬಿ.(1) ರನ್ವಯ, ಚುನಾಯಿತ ಪ್ರತಿನಿಧಿಗಳನ್ನೊೊಳಗೊಂಡ ಆಡಳಿತ ಸಮಿತಿಯನ್ನು ನೇಮಿಸಲು ಸ್ಪಷ್ಟವಾದ ಕಾನೂನು ಅವಕಾಶವಿದ್ದರೂ ಸರ್ಕಾರ ನಿರ್ಲಕ್ಷಿಸಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಜನರಿಂದ ಆಯ್ಕೆೆಯಾದ ಪ್ರತಿನಿಧಿಗಳನ್ನು ಬದಿಗೊತ್ತಿಿ ಅಧಿಕಾರಿಗಳ ಮೂಲಕ ಆಡಳಿತ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆೆಯನ್ನು ದುರ್ಬಲಗೊಳಿಸುವ ಕ್ರಮವಾಗಿದ್ದು, ಇದು ಜನತಂತ್ರದ ಮೂಲ ತತ್ವಗಳಿಗೆ ಧಕ್ಕೆೆ ತರುವುದಾಗಿದೆ ಎಂದು ಆಪಾದಿಸಿದರು.
ಈ ಹಿಂದೆ ಅಂದಿನ ವಿರೋಧ ಪಕ್ಷದ ನಾಯಕ ರಾಗಿದ್ದ ಇಂದಿನ ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಇಂದಿನ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಳಿತಾಧಿಕಾರಿ ನೇಮಿಸದೇ, ಆಡಳಿತ ಸಮಿತಿಯ ಅವಧಿ ಆರು ತಿಂಗಳ ವಿಸ್ತರಣೆಗೆ ಒತ್ತಾಾಯಿಸಿದ್ದು ಅವರೇ ಇಂದು ಮುಖ್ಯಮಂತ್ರಿಿಯಾಗಿದ್ದು ಅದನ್ನು ಪಾಲಿಸಲು ಆಗ್ರಹಿಸಿದರು.
ಅವಧಿ ಮುಗಿಯುತ್ತಿಿರುವ ಗ್ರಾಾಮ ಪಂಚಾಯತಿ ಈಗಿನ ಆಡಳಿತ ಸಮಿತಿಯನ್ನೇ ಪುನರ್ ನೇಮಕ ಮಾಡುವ ಮೂಲಕ ಜನಪ್ರತಿನಿಧಿಗಳ ಆಡಳಿತ ಮುಂದುವರಿಸಬೇಕೆಂದು ಜ.27ರಂದು ಬೆಂಗಳೂರಿನಲ್ಲಿ ಗ್ರಾಾಮ ಪಂಚಾಯತ್ ಒಕ್ಕೂಟಗಳ ಸಮಾವೇಶದಲ್ಲಿ ಒತ್ತಾಾಯಿಸಲಾಗುವುದು. ಒಂದೊಮ್ಮೆೆ ಕಡೆಗಣಿಸಿದರೆ ಒಕ್ಕೂಟದಿಂದ ಕೋರ್ಟ್‌ಗೆ ಮೊರೆ ಹೋಗಲಾಗುವುದು ಎಂದರು.
ಈ ಸರ್ಕಾರ ತಾಲೂಕು, ಜಿಲ್ಲಾಾ ಪಂಚಾಯಿತಿಗಳಂತೆ ಚುನಾವಣೆ ನಡೆಸದೆ ಕಾಲಹರಣ ಮಾಡಿ ಗ್ರಾಾಮಗಳ ಆಡಳಿತ ಕಸಿಯುವ ಹುನ್ನಾಾರ ಮಾಡಲಿದೆ. ಚುನಾವಣೆ ನಿಗದಿ ಮಾಡಿ ಘೊಷಣೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ರಂಗನಗೌಡ, ಹುಸೇನಪ್ಪ, ಪುಟ್ಟಪ್ಪ ವಿರುಪಾಪೂರ, ಲಕ್ಷ್ಮಣ್‌ರಾವ್ ಗೋರೆಬಾಳ, ರಮೇಶ ಮುಕ್ಕುಂದ, ಬಸವರಾಜ್‌ಪೂಲದಿನ್ನಿಿಘಿ, ಹುಸೇನಪ್ಪ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ