Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಕ್ಕಾ ಜವಾರಿ 'ಚೂಟಿಪೋರಿ' ಆಲ್ಬಮ್ ವಿಡಿಯೋ ಹಾಡು ಬಿಡುಗಡೆ ಜ.20ಕ್ಕೆ

ಮಾನ್ವಿ ಜ-19: ಕನ್ನಡ ಕೋಗಿಲೆ ಖ್ಯಾತಿಯ ಕರಿಬಸವ ತಡಕಲ್ ಇವರ ನಿರ್ದೇಶನ ಮತ್ತು ಅಭಿನಯದ ಪಕ್ಕಾ ಜವಾರಿ ಚೂಟಿ ಪೋರಿ ಎಂಬ ಆಲ್ಬಮ್ ವಿಡಿಯೋ ಹಾಡು ಜನವರಿ 20 ರಂದು ಶುಕ್ರವಾರ ಸಾಯಂಕಾಲ 5 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ನಿರ್ದೇಶಕ ಕರಿಬಸವ ತಡಕಲ್ ಉತ್ತರ ಕರ್ನಾಟಕ ಜಾನಪದ ಶೈಲಿಯ ಸಾಹಿತ್ಯ, ಸಂಗೀತ ಹಾಗೂ ಅಭಿನಯದೊಂದಿಗೆ ಕೂಡಿದ ಕಂಗ್ಲೀಷ್ ಭಾಷೆಯ (ಕನ್ನಡ-ಆಂಗ್ಲ ಮಿಶ್ರಿತ) ಪಕ್ಕಾ ಜವಾರಿ ಚೂಟಿಪೋರಿ ಎಂಬ ಶೀರ್ಷಿಕೆಯ ವಿಡಿಯೋ ಹಾಡು ಬಿಡುಗಡೆಯಾಗಲಿದೆ ಎಂದು ಹೇಳಿದರು.

ರಾಜ್ಯದ ಸಿನಿ ಪ್ರೇಕ್ಷಕರು, ಸಾಹಿತ್ಯ ಆಸಕ್ತರು, ವಿಶೇಷವಾಗಿ ನಮ್ಮ ಉತ್ತರ ಕರ್ನಾಟಕದ ಜನರು ನಮ್ಮ ವಿಡಿಯೋ ನೋಡುವುದರ ಜೊತೆಗೆ ನಮ್ಮ ತಂಡಕ್ಕೆ ಪ್ರೋತ್ಸಾಹ ನೀಡಬೇಕೆಂದು ಕರಿಬಸವ ತಡಕಲ್ ಮನವಿ ಮಾಡಿದರು.

ಅರ್ಥವಿಲ್ಲದ ಸಾಹಿತ್ಯ, ಸಂಗೀತದ ಹಾಡುಗಳನ್ನು ಬರೆದು ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಇಂದಿನ‌ ದಿನಗಳಲ್ಲಿ ನಮ್ಮ ಉತ್ತರ ಕರ್ನಾಟಕ ಜಾನಪದ ಶೈಲಿಯ  ಸಾಹಿತ್ಯವನ್ನೇ ಹೊಂದಿರುವ ನಮ್ಮ ಭಾಗದ ಯುವ ಮನಸ್ಸುಗಳಿಗೆ ಹೋಲುವ ಸಾಹಿತ್ಯ, ಸಂಗೀತ, ಅತ್ಯುತ್ತಮ ನಿರ್ದೇಶನ, ಅಭಿನಯ,

ಸಂಕಲನ ಹಾಗೂ ಉತ್ತರ ಕರ್ನಾಟಕದ ಕಲಾವಿದರಾದ ಪೂಜಾ ವಿಭೂತಿಮಠ, ದೇವರಾಜ ಯಲಿ ಗಬ್ಬೂರು, ಸುನೀಲ್ ಮಠ, ಶಿವಕುಮಾರ ಹೊಂಬಾಳಕು ಮುಂತಾದ ಕಲಾವಿದರೊಂದಿಗೆ ಶಕ್ತಿನಗರ, ಗಬ್ಬೂರು, ದೇವದುರ್ಗ ಮುಂತಾದ ಕಡೆ ಚಿತ್ರೀಕರಣ ಮಾಡಿ ಈ ವಿಡಿಯೋ ಆಲ್ಬಮ್ ತಯಾರಿಸಲಾಗಿದೆ. ಕಾರಣ ಈ ಭಾಗದ ಜನ ಇದನ್ನು ಯೂಟ್ಯೂಬ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ನಮ್ಮ ಕಲೆಗೆ ಆಶೀರ್ವಾದ ಮಾಡಬೇಕೆಂದು ಕರಿಬಸವ ತಡಕಲ್ ಕೋರಿದರು.

ಈ ಸಂದರ್ಭದಲ್ಲಿ ಹಾಸ್ಯ ಕಲಾವಿದ, ನಟ ದೇವರಾಜ ಯಲಿ ಗಬ್ಬೂರು, ನಾಗರಾಜಗೌಡ ಪೋತ್ನಾಳ್‌ ನಾಗರಾಜ ಗಂಗೂಲಿ ಅನೇಕರು ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ