Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹಣ ಜಾತಿಯ ಪ್ರಭಾವದಿಂದ ರಾಜಕೀಯ ಮೌಲ್ಯಗಳು ಕುಸಿತ ಮೌಲ್ಯಾಾಧಾರಿತ ರಾಜಕಾರಣಕ್ಕೆೆ ಪುನಃ ಮತದಾರರು ಮರುಜೀವ ತುಂಬಬೇಕಿದೆ : ಮಹಿಮಾ ಜೆ.ಎಚ್ ಪಾಟೀಲ್

ಸುದ್ದಿಮೂಲ ವಾರ್ತೆ (ಸಂತೆಕೆಲ್ಲೂರು) ಲಿಂಗಸಗೂರು, ಡಿ.22:
ಇಂದಿನ ರಾಜಕೀಯ ವ್ಯವಸ್ಥೆೆಯಲ್ಲಿ ಹಣ ಮತ್ತು ರಾಜಕೀಯ ಪ್ರಭಾವದಿಂದಾಗಿ ಮೌಲ್ಯಾಾಧಾರಿತ ರಾಜಕಾರಣ ನಿಧಾನವಾಗಿ ಕಣ್ಮರೆಯಾಗುತ್ತಿಿದೆ ಪ್ರಜೆಗಳು ಉತ್ತಮ ರಾಜಕೀಯ ಪಟುಗಳನ್ನು ಗುರುತಿಸಿದಾಗ ಮೌಲ್ಯಾಾಧಾರಿತ ರಾಜಕೀಯಕ್ಕೆೆ ಜೀವ ಬರಲಿದೆ ಎಂದು ಸಂಯುಕ್ತ ಜನತಾ ದಳದ ರಾಜ್ಯಾಾಧ್ಯಕ್ಷ ಮಹಿಮಾ ಜೆ.ಎಚ್‌ಪಟೇಲ್ ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿದರು.
ಗ್ರಾಾಮದಲ್ಲಿ ಲಿಂ. ಘನಮಠ ಶಿವಯೋಗಿಗಳ 146ನೇ ಜಾತ್ರಾಾ ಮಹೋತ್ಸವ ನಿಮಿತ್ತ ರವಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಮಠದಿಂದ ನೀಡಲಾಗುವ ಘನಶ್ರೀ ಪ್ರಶಸ್ತಿಿ ಸ್ವೀಕರಿಸಿ ಮಾತನಾಡಿದ ಅವರು, ಹಿಂದೆ ರಾಜ್ಯದ ರಾಜಕಾರಣದಲ್ಲಿ ತತ್ವ, ಸಿದ್ಧಾಾಂತ ಹಾಗೂ ಮೌಲ್ಯಗಳಿಗೆ ಹೆಚ್ಚಿಿನ ಬೆಲೆ ಇತ್ತು ಇದೀಗ ಜಾತಿ ಮತ್ತು ಹಣದ ಪ್ರಭಾವದಿಂದ ಮೌಲ್ಯಾಾಧಾರಿತ ರಾಜಕಾರಣ ಕಣ್ಮರೆಯಾಗಿದೆ. ಅಂತಹ ಕನಸಿನೊಂದಿಗೆ ವಿಧಾನಸಭೆಗೆ ಪ್ರವೇಶಿಸಿದ ನನಗೆ ವಿಧಾನಸಭೆಯಲ್ಲಿ ಶಾಸಕರ ಕಚ್ಚಾಾಟ ಕಂಡು ಇಲ್ಲಿಗೆ ಯಾಕೆ ಬಂದೆ ಎಂಬ ಪ್ರಶ್ನೆೆ ಕಾಡಿತು ಎಂದು ಆತ್ಮಾಾವಲೋಕನ ಮಾಡಿಕೊಂಡ ಅವರು ಚುನಾವಣೆಯಲ್ಲಿ ಮತ ಮಾರಾಟವಾಗದೆ ಉತ್ತಮ ವ್ಯಕ್ತಿಿಗಳ ಆಯ್ಕೆೆಯಾದಾಗ ರಾಜಕೀಯದಲ್ಲಿ ಮೌಲ್ಯಗಳು ಉಳಿದು ಜನ ಸೇವೆ ಸಾರ್ಥಕವಾಗುತ್ತದೆ ಎಂದರು.
ಇಂದು ಪರಿಸರ ಹಾನಿ ಮತ್ತು ಅತಿಯಾದ ರಾಸಾಯನಿಕ ಪಾಸ್ಟಿಿಕ್ ಬಳಕೆ ಸೇರಿ ಜಲಮೂಲಗಳು ಕಲುಷಿತದಿಂದ ಸಾಮಾಜಿಕ ಸ್ವಾಾಸ್ಥ ಹಾಳಾಗಿದೆ. ಜನತೆ ನಾನಾ ರೋಗ ರುಜಿನಗಳಿಗೆ ನಿತ್ಯ ಆಸ್ಪತ್ರೆೆಗಳಿಗೆ ಅಲೆಯುವಂತಾಗಿದೆ. ವೈದ್ಯರಿಗೆ ಇದೊಂದು ಆದಾಯದ ವೃತ್ತಿಿಯಾಗಿದೆ. ನಾನು ಕಳೆದ 33 ವರ್ಷಗಳಿಂದ ಯಾವುದೇ ವೈದ್ಯರ ಬಳಿ ಹೋಗಿಲ್ಲ. ಶುದ್ದ ಗಾಳಿ, ಶುದ್ದ ಆಹಾರ ಶುದ್ದ ನೀರು ಮತ್ತು ಶುದ್ದ ಕೃಷಿ ಉತ್ಪನ್ನ ಬೆಳೆದು ಸ್ವಾಾಸ್ಥ ಸಮಾಜ ನಿಮಾರ್ಣಕ್ಕೆೆ ನಾವೆಲ್ಲರೂ ಪಣ ತೊಡಬೇಕಿದೆ. ರಾಷ್ಟ್ರೀಯ ಸ್ವಾಾಭಿಮಾನ ಅಂದೋಲನ ಅಡಿ ಗಂಗಾವತಿ ಬಳಿಯ (ಕಿಷ್ಕಿಿಂದೆ)ಯಿಂದ ಮಂತ್ರಾಾಲಯದವರೆಗೆ ನಿರ್ಮಲ ತುಂಗಭದ್ರಾಾ ಅಭಿಯಾನ ಪಾದಯಾತ್ರೆೆ ಡಿ,27ರಿಂದ ಜ,04ರವರೆಗೆ ನಡೆಯಲಿದ್ದು ಕೃಷಿಕರು, ಪರಿಸರ ಪ್ರೇೇಮಿಗಳು ಸೇರಿ ಸಾರ್ವಜನಿಕರು ಭಾಗವಹಿಸಿ ಸ್ವಾಾಸ್ಥ ಸಮಾಜ ನಿಮಾಣಕ್ಕೆೆ ಕೈಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಮಸ್ಕಿಿ ಗಚ್ಚಿಿನಮಠದ ವರರುದ್ರಮುನಿ ಸ್ವಾಾಮೀಜಿ ವಹಿಸಿದ್ದರು. ಸಂತೆಲ್ಲೂರ ಘನಮಠೇಶ್ವರ ಮಠದ ಗುರುಬಸವ ಸ್ವಾಾಮೀಜಿ, ಪ್ರವಚನಕಾರರಾದ ಯಡ್ರಾಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಾಮೀಜಿ ಪ್ರಶಾಂತ, ದೇವರು, ರೈತ ಮುಖಂಡ ಹನಮನಗೌಡ ಬೆಳಗುರ್ಕಿ, ಓಪೆಕ್ ಆಸ್ಪತ್ರೆೆ ವೈದ್ಯ ಸುರೇಶ ಸಗರದ ವೇದಿಕೆಯಲಿದ್ದರು ಘನಮಠದಯ್ಯ ಮಹಾಂತಿನಮಠ ನಿರ್ವಹಿಸಿದರು. ಕೆ.ಅಮರೇಗೌಡ ಪಾಟೀಲ್, ಸಿದ್ದರಾಮಪ್ಪ ಸಾಹುಕಾರ, ಆದನಗೌಡ ಪಾಟೀಲ್, ಮಲ್ಲೇಶಗೌಡ ಮಟ್ಟೂರ, ಸಾಹಿತಿ ಗಿರಿರಾಜ ಹೊಸಮನಿ, ಮರಿಗೌಡ ಪಾಟೀಲ್, ಡಾ,ಎನ್‌ಎಲ್ ನಡುವಿನಮನಿ ವಿಸಿಬಿ ನಿವೃತ್ತ ಪ್ರಾಾಚಾರ್ಯ ಸಿ.ಶರಣಪ್ಪ, ಗುರುನಾಥರೆಡ್ಡಿಿ ದೇಸಾಯಿ, ಸಿದ್ದನಗೌಡ ಹಳ್ಳಿಿ, ಸೇರಿದಂತೆ ಇತರರು ಭಾಗಿಯಾಯಾಗಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ