Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿ ಬಿ ಜಿ ರಾಮ್ ಜಿ ಯೋಜನೆಯ ಜನ ಜಾಗೃತಿ ಹಾಗೂ ಬಿಜೆಪಿ ಸಂಘಟನಾ ಸಭೆ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಖಚಿತ : ಜಿಎಂ ಸಿದ್ದೇಶ್ವರ್

ಸುದ್ದಿಮೂಲ ವಾರ್ತೆ ಹರಪನಹಳ್ಳಿಿ, ೆ.20:
ಭಾರತ ದೇಶದ ಪ್ರಧಾನಿಗಳನ್ನು ಅನ್ಯ ದೇಶಗಳಲ್ಲಿ ಆಹ್ವಾಾನಿಸಲು ಕೀಳರಿಮೆಯಿಂದ ಕಾಣುವ ಕಾಲವಿತ್ತು, ಮೋದೀಜಿ ಪ್ರಧಾನಿಯಾದ ನಂತರ ಇಡೀ ವಿಶ್ವವೇ ಅವರ ಆಗಮನಕ್ಕೆೆ ಕಾಯುವಂತೆ ಎಂದು ಕೇಂದ್ರ ಮಾಜಿ ಸಚಿವ ಜಿ ಎಂ ಸಿದ್ದೇಶ್ವರ ಹೇಳಿದರು.
ನಗರದ ತರಳಬಾಳು ಕಲ್ಯಾಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ನಡೆದ ಕೇಂದ್ರ ಸರ್ಕಾರದ ವಿ ಬಿ ಜಿ ರಾಮ್ ಜಿ ಯೋಜನೆಗಳ ಅನುಷ್ಠಾಾನಕ್ಕಾಾಗಿ’ ಮತ್ತು ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ಕಾರ್ಯಕರ್ತರ ಸಂಘಟನಾ ಸಮಾವೇಶ ಉದ್ಘಾಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡದೆ ಎಲ್ಲಾ ಇಲಾಖೆಗಳಲ್ಲಿ ಲೂಟಿ ಮಾಡುವುದರಲ್ಲಿ ಮುಳುಗಿಹೋಗಿದೆ, ವಿಬಿಜಿ ರಾಮ್ ಜಿ ಯೋಜನೆಯಿಂದ ಬಡ ಕೂಲಿ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮಾವಣೆಯಾಗಲಿದೆ, ಮತ್ತು ಇಲ್ಲಿ ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ.
ಹರಪನಹಳ್ಳಿಿ ತಾಲೂಕಿನಲ್ಲಿರುವ ಜನರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಗುಳೆ ಹೋಗುವ ಪದ್ದತಿ ತಡೆಯಬೇಕಿದೆ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿಿಯನ್ನು ತೆಗೆಯಬೇಕಿದೆ ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸಂಘಟನೆ ಮಾಡಿ ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದರು.
ಹರಿಹರ ಶಾಸಕ ಬಿ ಪಿ ಹರೀಶ್ ಮಾತನಾಡಿ, ಜಗತ್ತಿಿನಲ್ಲಿ ಅಭಿವೃದ್ದಿ ಹೊಂದುತ್ತಿಿರುವ ದೇಶಗಳ ಸಾಲಿಗೆ ಭಾರತವನ್ನು ಸೇರಿಸಿದ ಕೀರ್ತಿ ಮೋದೀಜಿಯವರಿಗೆ ಸಲ್ಲುತ್ತದೆ, ರಾಹುಲ್ ಗಾಂಧಿಯನ್ನು ಮೋದಿಜಿಯವರಿಗೆ ಹೋಲಿಕೆ ಮಾಡುವುದು ಹಾಸ್ಯಾಾಸ್ಪದ. 2028ರ ವಿಧಾನ ಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆೆ ತರಲು ಶ್ರಮಿಸಿ ಎಂದರು.
ಹಡಗಲಿ ಮಾಜಿ ಶಾಸಕ ನಂದಿಹಳ್ಳಿಿ ಹಾಲಪ್ಪ ಮಾತನಾಡಿ. ಬಳ್ಳಾಾರಿಯ ಕರುಣಾಕರ ರೆಡ್ಡಿಿಯವರಿಗೆ 2008 ರಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿ, ಗೆಲ್ಲಿಸಿ ಇಂದು ಬಿಜೆಪಿ ಕಾರ್ಯಕರ್ತರು ಪಶ್ಚಾಾತ್ತಾಾಪ ಪಡುವಂತಾಗಿದೆ, ಅಂದಿನ ತಪ್ಪನ್ನು ಮುಂದಿನ ಚುನಾವಣೆಯಲ್ಲಿ ಮಾಡಬೇಡಿ, ಪಂಚಪಾಂಡವರಂತೆ ಸ್ಥಳೀಯವಾಗಿ ಐವರು ಆಕಾಂಕ್ಷಿಗಳಿದ್ದು ಇವರಲ್ಲಿ ಯಾರಿಗೆ ಟಿಕೆಟ್ ಒಟ್ಟಾಾಗಿ ಗೆಲ್ಲಿಸಲು ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಪ್ರಮಾಣ ಮಾಡಿಸಿದರು.
ಬಳ್ಳಾಾರಿ ಮಾಜಿ ಸಂಸದ ವೈ ದೇವೇಂದ್ರಪ್ಪ ಮಾತನಾಡಿ ಮೋದಿಯವರ ಜೊತೆ ನಾನು ಐದು ವರ್ಷ ಸಂಸದರಾಗಿ ಕೆಲಸ ಮಾಡಿದ್ದೇನೆ ದಿನದ 24 ಗಂಟೆಯೂ ಕೆಲಸ ಮಾಡುವ ಪ್ರಧಾನಿ ಮೋದಿ ಯವರು, ದೇಶ ಅಭಿವೃದ್ಧಿಿ ಹೊಂದಲು ಮೋದಿ ನೇತೃತ್ವದ ಸರ್ಕಾರ ಮುಖ್ಯ ಕಾರಣ ಎಂದರು.
ದಾವಣಗೆರೆ ಲೋಕಸಭಾ ಪರಾಜಿತ ಅಭ್ಯರ್ಥಿ ಗಾಯತ್ರಿಿ ಸಿದ್ದೇಶ್ವರ, ಬಿಜೆಪಿ ಪ್ರಬಲ ಆಕಾಂಕ್ಷಿ ಅಭ್ಯರ್ಥಿಗಳಾದ ಬಿಡಿಸಿಸಿ ಬ್ಯಾಾಂಕ್ ನಿರ್ದೇಶಕ ವೈ ಡಿ ಅಣ್ಣಪ್ಪ, ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ ಜಿ ನಂಜನಗೌಡ, ಡಾ.ರಮೇಶ್ ನಾಯ್ಕ, ಮುತ್ತಿಿಗೆ ವಾಗೀಶ್, ಶಾನುಭೋಗರ ಕೆಂಚನಗೌಡ ಸಭೆ ಉದ್ದೇಶಿಸಿ ಮಾತನಾಡಿದರು.
ಈ ಸಮಾರಂಭದಲ್ಲಿ ರಾಜ್ಯ ಎಸ್ಟಿಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ದಾಸ ಕರಿಯಪ್ಪ, ಮುಖಂಡರಾದ ಎಂಪಿ ನಾಯ್ಕ, ಸತ್ತೂರ್‌ಹಾಲೇಶ್,ಕುಸುಮಾ ಜಗದೀಶ, ಕಣಿವಿಹಳ್ಳಿಿ ಮಂಜುನಾಥ, ಓಂಕಾರ ಗೌಡ, ನಿಟ್ಟೂರ ಹಾಲಪ್ಪ, ಪ್ರಾಾಣೇಶ್ ವಕೀಲರು. ಲಿಂಗಾನಂದ, ಚೆನ್ನೇಶ್ ಗೌಡ, ಬೂದಿ ನವೀನ್, ಮೈದುರು ಮಲ್ಲಿಕಾರ್ಜುನ, ಗಿರಜ್ಜಿಿ ನಾಗರಾಜ್, ಹುಣಸಿಹಳ್ಳಿಿ ಪ್ರಕಾಶ್, ಬಂದೋಳ್ ಮಂಜುನಾಥ್, ಶಿವಾನಂದ್, ಗುಂಡಿ ಮಂಜುನಾಥ್, ಕಡತಿ ರಮೇಶ್, ಜವಳಿ ಮಹೇಶ, ಗಿರೀಶ್, ಬಂಡ್ರಿಿ ರಾಜು, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ