Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕ್ರೀೆಡೋತ್ಸವದ ಮೊದಲ ಪಂದ್ಯಕ್ಕೆೆ ಸಚಿವರಿಂದ ಚಾಲನೆ ಜಿಲ್ಲೆಯ ಜನತೆಯ ಅಪೇಕ್ಷೆಯಂತೆ ರಾಯಚೂರು ಉತ್ಸವ ಡಾ.ಶರಣಪ್ರಕಾಶ ಪಾಟೀಲ

ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ರಾಯಚೂರು ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಂತೆ ನಾವು ಈ ಬಾರಿ ರಾಯಚೂರು ಉತ್ಸವ ಹಮ್ಮಿಿಕೊಂಡಿದ್ದೇವೆ. ಜಿಲ್ಲೆಯ ಪ್ರತಿಯೊಂದು ಸಂಘ-ಸಂಸ್ಥೆೆಗಳು, ಎಲ್ಲ ಶಾಲಾ ಕಾಲೇಜುಗಳು, ಇನ್ನಿಿತರ ಎಲ್ಲರೂ ಈ ಉತ್ಸವದಲ್ಲಿ ಸಕ್ರಿಿಯ ಭಾಗಿಯಾಗಿ ಉತ್ಸವ ಯಶಸ್ವಿಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಕೋರಿದರು.
ರಾಯಚೂರು ಉತ್ಸವದ ಪ್ರಚಾರಾರ್ಥ ಜನವರಿ 4ರಂದು ನಗರದ ಜಿಲ್ಲಾ ಕ್ರೀೆಡಾಂಗಣದಲ್ಲಿ ಹಮ್ಮಿಿಕೊಂಡಿದ್ದ ಕ್ರೀೆಡೋತ್ಸವಕ್ಕೆೆ ಚಾಲನೆ ನೀಡಿ ಅವರು ಮಾತನಾಡಿದರು.
ಸಚಿವ ಎನ್ ಎಸ್ ಬೋಸರಾಜು ಅವರು ಮಾತನಾಡಿ, ಬಹಳ ವರ್ಷಗಳ ನಂತರ ನಾವು ರಾಯಚೂರು ಜನತೆಗೆ ರಾಯಚೂರು ಉತ್ಸವದ ಕೊಡುಗೆ ನೀಡುತ್ತಿಿದ್ದೇವೆ. ಪತ್ರಿಿಕೆಗಳು ಸಹ ವಿಶೇಷ ವರದಿ ಪ್ರಕಟಿಸಿ ಉತ್ಸವ ಆಗಬೇಕು ಎಂದು ಒತ್ತಾಾಯ ಮಾಡಿವೆ. ವಿದ್ಯುನ್ಮಾಾನ ಮಾಧ್ಯಮದವರು ಉತ್ಸವ ಮಾಡಿ ಎಂದು ಸಲಹೆ ಮಾಡುತ್ತಿಿದ್ದರು. ಈ ಹಿನ್ನೆೆಲೆಯಲ್ಲಿ ಜನತೆಯ ಬೇಡಿಕೆಯಾನುಸಾರ ಉತ್ಸವ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಎಸ್ ಶಿವರಾಜ ಪಾಟೀಲ ಮಾತನಾಡಿ, ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಮಾತ್ರ ಉತ್ಸವ ಯಶಸ್ವಿಿಗೊಳ್ಳಲು ಸಾಧ್ಯ. ಹಾಗಾಗಿ ಉತ್ಸವದ ಬಗ್ಗೆೆ ವಿಶೇಷ ಪ್ರಚಾರ ನಡೆಯಬೇಕು ಎಂದರು.
ಉತ್ಸವ ನಿಮಿತ್ತ ಹಮ್ಮಿಿಕೊಂಡ ಈ ಕ್ರೀೆಡಾ ಉತ್ಸವದಲ್ಲಿ ಸ್ಥಳೀಯ ಕ್ರೀೆಡೆಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕರು ಸಲಹೆ ಮಾಡಿದರು.
ಸಮಾರಂಭದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಎ. ವಸಂತಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರಣಾಂಕ್ಷು ಗಿರಿ, ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಮುಖಂಡರಾದ ಪವನ್ ಕಿಶೋರ ಪಾಟೀಲ, ಡಾ.ರಝಾಕ್ ಉಸ್ತಾಾದ್, ಪಾಲಿಕೆಯ ಉಪ ಆಯುಕ್ತ ಸಂತೋಷರಾಣಿ, ತಹಸೀಲ್ದಾಾರ ಸುರೇಶ ವರ್ಮಾ, ಅಮರೇಶ ಬಿರಾದಾರ, ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ ಹಾಗೂ ಇತರರು ಇದ್ದರು. ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ ಸ್ವಾಾಗತಿಸಿದರು.
ಮೊದಲನೇ ಪಂದ್ಯಕ್ಕೆೆ ಚಾಲನೆ: ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ ಮಹಾನಗರ ಪಾಲಿಕೆಯ ತಂಡ ಹಾಗೂ ಶಿಕ್ಷಣ ಇಲಾಖೆಯ ತಂಡದ ಮಧ್ಯೆೆ ಮೊದಲನೇ ಪಂದ್ಯಾಾರಂಭಕ್ಕೆೆ ಸಚಿವರು ಮತ್ತು ಶಾಸಕರು ಜನವರಿ 04ರಂದು ಚಾಲನೆ ನೀಡಿದರು.
ಕ್ರೀೆಡೋತ್ಸವದಲ್ಲಿ ಸಚಿವರು ಮತ್ತು ಶಾಸಕರು ಕ್ರಿಿಕೆಟ್ ಬ್ಯಾಾಟ್ ಬೀಸಿ ಮತ್ತು ಬಾಲ್ ಹಾಕಿ ಪಂದ್ಯಕ್ಕೆೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
***

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ