Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇಶದಲ್ಲಿ ಸೌಹಾರ್ದತೆಗೆ ಧಕ್ಕೆ: ಸಾಹಿತಿ ಕುಂ.ವೀ ಕಳವಳ

ಸುದ್ದಿಮೂಲ ವಾರ್ತೆ ಹೊಸಪೇಟೆ, ಜ.10
ದೇಶದಲ್ಲಿ ಕಳೆದ 11 ವರ್ಷಗಳಿಂದ ಸೌಹಾರ್ದ ಕೆಡಿಸುವ ಯತ್ನ ನಡೆಯುತ್ತಿಿದೆ. ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿಿ, ಅದನ್ನು ಲಾಭಕ್ಕೆೆ ಬಳಸಿಕೊಳ್ಳುವ ಯತ್ನವೂ ನಿರಂತರ ಸಾಗಿದೆ ಇದರ ಬಗ್ಗೆೆ ಜನ ಎಚ್ಚೆೆತ್ತು ಕೊಳ್ಳಬೇ ಕಾಗಿದೆಎಂದು ಹಿರಿಯ ಸಾಹಿತಿ ಕುಂ.ವೀರಭದ್ರ ಪ್ಪ (ಕುಂ.ವೀ) ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಶನಿವಾರ ಸೌಹಾರ್ದ ಕರ್ನಾಟಕ ಹೊಸಪೇಟೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ ಜನಾರ್ಪಣೆಗೊಳಿಸಿ ಮಾತನಾಡಿದ ಅವರು ವಿವಿಧ ಜನಾಂಗ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಜಗತ್ತಿಿನಲ್ಲಿ ಆರಂಭವಾದುದು 1914ರ ಸಮಯದಲ್ಲಿ.
ಜರ್ಮನಿಯಲ್ಲಿ ಯಹೂದಿಗಳನ್ನು ವಿನಾಕಾರಣ ನಿಂದಿಸುವ, ಶಿಕ್ಷಿಿಸುವ ಕೆಲಸ ನಡೆಯಿತು.ಅದೇ ವಾತಾವರಣ ನಮ್ಮ ದೇಶದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿಿದೆ. ಸ್ವಾಾತಂತ್ರ ಹೋರಾಟದಲ್ಲಿ ಝಾನ್ಸಿಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರ್ ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಮುಸ್ಲಿಿಂ ರಾಜರು, ಮುಸ್ಲಿಿಂ ಹೋರಾಟಗಾರರು ಸ್ವತಂತ್ರ ಹೋರಾಟದಲ್ಲಿ ಪಾಲ್ಗೊೊಂಡಿದ್ದರು , ಇಂಡಿಯಾ ಗೇಟ್ ಮೇಲೆ ಬರೆದಿರುವ ಸ್ವಾಾತಂತ್ರ ಹೋರಾಟಗಾರರ ಹೆಸರುಗಳಲ್ಲಿ ಶೇ. 70 ಮುಸ್ಲಿಿಂಮರು, ಆದರೂ ಸಹ ಮುಸ್ಲಿಿಮರನ್ನು ವಿನಾಕಾರಣ ದ್ವೇ ಷಿಸುವ ವಾತಾವರಣ ನಿರ್ಮಿಸಲಾಗಿದೆ ಎಂದು ಕುಂ.ವೀ ವಿವರಿಸಿದರು.
ವಿಜಯನಗರ ಸಾಮ್ರಾಾಜ್ಯ ಇಲ್ಲಿನವರಿಂದಲೇ ಕೊಳ್ಳೆೆ: ವಿಜಯನಗರ ಇತಿ ಹಾಸವನ್ನೇ ತೆಗೆದುಕೊಂಡರೂ, ಇಲ್ಲಿ ಸಹ ಮುಸ್ಲಿಿಮರಿಂದ ವಿಜಯ ನಗರ ಸಾಮ್ರಾಾಜ್ಯ ಕೊಳ್ಳೆೆ ಹೊಡೆಯಲ್ಪಟ್ಟಿಿತು ಎಂದೇ ಬಿಂಬಿಸಲಾಗಿದೆ. ವಾಸ್ತವವಾಗಿ ವಿಜಯನಗರದ ಕೊನೆಯ ದೊರೆ ರಾಮರಾಯ ಯುದ್ಧದಲ್ಲಿ ಸೋತದ್ದು ಬಹಳ ದೂರದಲ್ಲಿ, ಆದರೆ ತಕ್ಷಣ ಹಂಪಿ ಭಾಗದಲ್ಲಿ ಕೊಳ್ಳೆೆ ಹೊಡೆಯುವ ಕೆಲಸ ನಡೆಯಿತು. ಇದನ್ನು ಯಾರು ಮಾಡಿದ್ದು ಎಂದು ಊಹಿಸುವುದು ಕಷ್ಟವಲ್ಲ, ಇಲ್ಲಿ ಇದ್ದ ಹಿಂದೂಗ ಳೇ ರಾಜರ ಮೇಲಿನ ದ್ವೇಷದಿಂದ ಸಾಮ್ರಾಾಜ್ಯವನ್ನು ಕೊಳ್ಳೆೆ ಹೊಡೆದರು’ ಎಂದು ಕುಂ.ವೀರಭದ್ರಪ್ಪ ಅಭಿಪ್ರಾಾಯಪಟ್ಟರು.
ವಿಜಯನಗದ ಇತಿಹಾಸ ಗಮನಿಸಿದರೆ ಇಲ್ಲಿ ರಚನೆಯಾದ ಸಾಹಿತ್ಯಗಳಲ್ಲಿ ರಾಜರನ್ನು ಹೊಗಳುವ, ಅವರ ಸಾಧನೆ ತಿಳಿಸುವ ಅಂಶ ಕಾಣಿಸುವುದಿಲ್ಲ, ಬದಲಿಗೆ ಇಲ್ಲಿನ ಜಾನಪದ ಸಾಹಿತ್ಯಗಳಲ್ಲಿ ಕುಮಾರರಾಮ, ಪಾಳೆಗಾರರು, ಜನ ಸಾಮಾನ್ಯರನ್ನು ಹೊಗಳುವ ಪರಿಪಾಠ ಕಾಣಿಸುತ್ತದೆ. ರಾಜರಿಂದ ಜನರಿಗೆ, ಜನಸಾಮಾನ್ಯರಿಗೆ ನೆಮ್ಮದಿ ಇರಲಲ್ಲ ಎಂಬುದನ್ನು ಇದು ಸೂಚಿಸುತ್ತದೆ, ಇದರ ಲವಾಗಿಯೇ ರಾಜ್ಯ ಪತನವಾದಾಗ ಕೊಳ್ಳೆೆ ಹೊಡೆದು ಸೇಡು ತೀರಿಸಿಕೊಳ್ಳುವ ಕೆಲಸ ಇಲ್ಲಿ ನಡೆದಂತೆ ಕಾಣಿಸುತ್ತದೆ ಎಂದು ಅವರು ವಿವರಿಸಿದರು.
ಸಾಹಿತ್ಯದ ಮೂಲವೇ ಸೌಹಾರ್ದ: ಸೌಹಾರ್ದತೆ ಎಂಬುದು ಭಾರತ ದೇಶ ದ ಮೂಲಭೂತ ಗುಣ. ಹಲವು ಹಳಗನ್ನಡ, ನಡುಗನ್ನಡ ಸಾಹಿತ್ಯ ಕೃತಿಗಳಲ್ಲಿ ಇದನ್ನೇ ಪ್ರಧಾನವಾಗಿ ಪರಿಗಣಿಸಲಾಗಿದೆ. ವಚನ ಸಾಹಿತ್ಯದ ಆಶಯವೂ ಇದೇ ಆಗಿದೆ. ಇನ್ನೊೊಂದು ಧರ್ಮವನ್ನು, ವಿಚಾರಗಳನ್ನು ಗೌರವಿಸು ಎಂದೇ ಎಲ್ಲಾ ದಾರ್ಶನಿಕರೂ, ಸಾಹಿತಿಗಳೂ ಹೇಳಿದ್ದಾರೆ.
ಆದರೆ ನಾವು ಈ ಮೂಲ ತತ್ವವನ್ನೂ ಕಳೆದ 11 ವರ್ಷಗಳಿಂದ ಮರೆತಂತೆ ವರ್ತಿಸುತ್ತಿಿದ್ದೇವೆ ಎಂದು ಕುಂ. ವೀ ವಿಷಾದ ವ್ಯಕ್ತಪಡಿಸಿದರು.
ದೇಶದ 700 ವರ್ಷದ ಇತಿಹಾಸದಲ್ಲಿ ಸುಮಾರು 300 ವರ್ಷಗಳಷ್ಟು ಅವಧಿಯನ್ನು ಅನಕ್ಷರಸ್ಥ ಮುಸ್ಲಿಿಂ ದೊರೆಗಳೇ ಆಳಿದ್ದಾರೆ.ಆದರೆ ಮತಾಂತರ, ಧರ್ಮ ದ್ವೇಷದಂತಹ ಉದಾಹರಣೆಗಳು ಹೆಚ್ಚೇನೂ ಸಿಗುವುದಿಲ್ಲ. ಹಿಂದೂಗಳಲ್ಲೇ ಹಲವು ಪಂಗಡಗಳು ಬಲಾತ್ಕಾಾರದಿಂದ ಮತಾಂತರ ಮಾಡಿಸಿಕೊಂಡ ನಿದರ್ಶನವೂ ಇದೆ. ಹೀಗಾಗಿ ಒಂದು ನಿರ್ದಿಷ್ಟ ಧರ್ಮವನ್ನೇ ಗುರಿಯಾಗಿಸಿ ಅವರಿಂದಲೇ ಎಲ್ಲವೂ ನಡೆಯುತ್ತಿಿದೆ ಎಂದು ಹೇಳುವುದು ಸರಿಯಲ್ಲ ಎಂದರು.
ಸ್ವಾಾತಂತ್ರ್ಯ ಸಂಗ್ರಾಾಮದಲ್ಲಿ ಬಹಳಷ್ಟು ಮುಸ್ಲಿಿಮರು ಬಲಿದಾನ ಮಾಡಿದ್ದಾರೆ ಎಂದ ಅವರು, ತಾವು ದೇಶ ಪ್ರೇೇಮಿಗಳು ಎಂದು ಹೇಳಿಕೊಳ್ಳುವ ಸಂಘಟನೆ ಯವರು ಸ್ವಾಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇಲ್ಲ ಎಂದರು.
ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ಡಿಎಚ್ಎಸ್ ಮುಖಂಡ ಎಂ.ಜಂಬಯ್ಯ ನಾಯಕ, ಸಂಘದ ಉಪಾಧ್ಯಕ್ಷ ಸಿ.ಕೆ.ನಾಗರಾಜ, ಕಾ ರ್ಯದರ್ಶಿಗಳಾದ ಸುರೇಶ್ ಚವ್ಹಾಾಣ್ ಸಂಘದ ಕಾರ್ಯದರ್ಶಿ ಸಂಜಯ್ ಕುಮಾರ್ ಮರೋಳ್, ಪತ್ರಕರ್ತರಾದ ಅನಂತ ಜೋಶಿ, ಭೀಮರಾಜ್, ಕೆ.ಬಿ. ಖವಾಸ್ ಮಂಜುನಾಥ್ ಹಿರೇಮಠ, ಕೃಷ್ಣ ಲಮಾಣಿ , ಇಂದಿರಾ ಕಲಾಲ್ , ಜಯಪ್ಪ ರಾಥೋಡ್, ಪಾಂಡುರಂಗ ಜಂತ್ಲಿಿ, ಶಿವಶಂಕರ್ ಬಣಗಾರ, ರಾಜೇಶ್, ವಿಜಯ್ ಕುಮಾರ್, ಪೂರ್ಣಿಮಾ ಇತರರಿದ್ದರು ಬಿ.ಮಹೇಶ್ ನಿರೂಪಿಸಿದ ರು. ಉಮಾಮಹೇಶ್ವರ ವಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ