Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವಾನುಭಾವ ಶಿಬಿರ ಸಮಾರೋಪ ಸ್ವಾನುಭಾವದ ಜಾಗೃತಿಯಿಂದ ಮಾತ್ರ ಸಾರ್ಥಕತೆ ಸಾಧ್ಯ - ಆರ್.ಇಂದಿರಾ

ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ಮೊಬೈಲ್ ನೋಡಲು ಅಡ್ಡಿಿ ಇಲ್ಲ ಆದರೆ ಏನನ್ನು ನೋಡಿದರೆ ನಾವು ಏನಾಗುತ್ತೇವೆ ಎಂಬುದರ ಸ್ವಾಾನುಭಾವದ ಅರಿವು ಜಾಗೃತವಾಗಿದ್ದರೆ ಸಾರ್ಥಕತೆಯ ಬದುಕು ನಮ್ಮದಾಗಲಿದೆ ಎಂದು ಡಯಟ್‌ನ ನಿವೃತ್ತ ಪ್ರಾಾಂಶುಪಾಲರಾದ ಆರ್.ಇಂದಿರಾ ಅಭಿಪ್ರಾಾಯ ಪಟ್ಟರು.
ನಗರದ ಹೊರವಲಯದ ಮಾತೋಶ್ರೀ ತಪೋವನದ ಬಸವ ಕಲ್ಯಾಾಣ ಮಂಟಪದಲ್ಲಿ ಮಾತೋಶ್ರೀ ನೀಲಮ್ಮ ತಾಯಿಯವರ 24 ನೇ ಪುಣ್ಯಸ್ಮರಣೆ ಹಾಗೂ ಡಬ್ಬೇರು ಮಡುವಿನ ಪರಮಪೂಜ್ಯ ಸದ್ಗುರು ವಿದ್ಯಾಾನಂದ ಶರಣರ ಸ್ಮರಣೆ ನಿಮಿತ್ತ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಸೇವಾ ಪ್ರತಿಷ್ಠಾಾನ ಸಂಯಕ್ತಾಾಶ್ರಯದಲ್ಲಿ ಸ್ವಾಾನುಭಾವ ಶಿಬಿರದ ಸಮಾರೋಪ ಭಾಷಣ ಮಾಡಿದರು. ಮೂರರಿಂದ 80 ವರ್ಷದ ವಯೋಮಾನದವರಿಗೆ ಏನೇನೊ ಬೇಕು ಎನ್ನಿಿಸಿತ್ತು ಕೊನೆಗೆ ಬೇಕಾಗಿದ್ದು ಸ್ವಾಾನುಭಾವವೆ ಹೊರತು ಮತ್ತೇನೂ ಅಲ್ಲಘಿ. ಇಂದು ಮೊಬೈಲ್ ನಮ್ಮನ್ನು ದಾರಿ ತಪ್ಪಿಿಸಿದೆ. ಹಾಗಾಂತ ಮೊಬೈಲ್ ಕೆಟ್ಟದ್ದಲ್ಲ ಸ್ವಾಾನುಭಾವಕ್ಕೆೆ ಅನ್ವಯಿಸಿಕೊಳ್ಳದ ಕಾರಣ ದಾರಿ ತಪ್ಪಿಿಸುತ್ತಿಿದೆ.ನಮ್ಮನ್ನು ಬೇರೆ ಬೇರೆಯಾಗಿ ಕಳಚಿದೆ ಎಂದರು.
ಸ್ವಾಾನುಭಾವ ಮೂರು ದಿನಕ್ಕೆೆ ಬರುವಂತದ್ದಲ್ಲಘಿ, ಸಾಧಿಸಲು ಅಸಾಧ್ಯಘಿ. ಆದರೆ, ಪಂಚೇಂದ್ರಿಿಯಗಳ ಬಗ್ಗೆೆ ಅರಿವು ಇರುವಂತವರಿಗೆ ಆರನೇ ಜ್ಞಾನ ಸ್ವಾಾನುಭಾವ ಸಾಧಿಸಲು ಸುಲಭ ಎಂದರು.ಸ್ವಾಾನುಭಾವ ಪಡೆಯಲು ಆರಂಭಿಕ ಗುರುಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ವಾಸನಾನುಭಾವ ಗ್ರಾಾಣದಲ್ಲಿ ಗ್ರಾಾಣವಾದವರಿಗೆ ಲೆಕ್ಕಕ್ಕಿಿಲ್ಲ ಆದರೆ, ಈಗಿನವರಿಗೆ ಸ್ವಚ್ಚತೆ ಇಲ್ಲ ಎನ್ನಬಹುದು ಹಾಗಾಗಿ, ಭೌತಿಕ ವಿಜ್ಞಾನಕ್ಕಿಿಂತ ಧಾರ್ಮಿಕ ಅನುಭಾವದ ಅಗತ್ಯ ಇಂದು ಹೆಚ್ಚಿಿದೆ ಎಂದ ಅವರು ಅಂಕಗಳಿಗಿಂತ ಮಸ್ತಕಕ್ಕೆೆ ಕೊಡುವ ಚಿಂತನೆಯೆ ಸ್ವಾಾನುಭಾವ ಎನ್ನುವುದನ್ನು ವಿದ್ಯಾಾರ್ಥಿಗಳಿಗೆ ಶಿಕ್ಷಕರಾದವರು ಮನವರಿಕೆ ಮಾಡಿಕೊಡಬೇಕಾದ ಸವಾಲು ನಮ್ಮ ಮುಂದಿದೆ ಎಂದು ಹೇಳಿದರು.
ಸಂವಾದ ಇರಬೇಕು ಅದರಿಂದ ಅರಿವು ಸಾಧ್ಯ ಇದು ಬದುಕಲ್ಲಿ ನಿರಂತರವಾಗಿರುವಂತೆ ನೋಡಿಕೊಳ್ಳಬೇಕು ಎಂದ ಅವರು ವಿವಿಧ ಕಥೆ, ಪೌರಾಣಿಕ ಹಿನ್ನೆೆಲೆಯ ಕತೆಗಳನ್ನು ಉದಾಹರಿಸಿದರು.
ಸಂಶೋಧಕ ಚನ್ನಬಸಯ್ಯ ಹಿರೇಮಠ ಮಾತನಾಡಿ, ಅನುಭವದ ಮೂಲಕ ಅನುಭಾವಕ್ಕೆೆ ಹೋಗಬೇಕು. ಪ್ರಾಾಧ್ಯಾಾಪಕರು ವಿದ್ಯಾಾರ್ಥಿಗಳು ಅನುಭಾವದ ಕಡೆ ವಾಲಿ ಬದಲಾವಣೆ ನಮ್ಮಿಿಂದಾಗಲಿ ಎಂಬ ಮನೋಭಾವ ನಮ್ಮದಾಗಲಿ ಎಂದರು.
ಸಾನ್ನಿಿಧ್ಯ ವಹಿಸಿದ್ದ ಬೆನಕನಹಳ್ಳಿಿಯ ಶ್ರೀ ದೇವಾನಂದ ಶರಣರು ಮಾತನಾಡಿ, ಮಹಿಳೆಗೆ ಇರುವ ತಾಳ್ಮೆೆಘಿ, ಸಹನೆ ಪುರುಷರಲ್ಲಿರದು ಹೀಗಾಗಿ, ಮಹಿಳೆಯರಿಗೆ ಅನುಭಾವದ ರುಚಿ ದೊರೆತರೆ ಹೆಚ್ಚು ಅನುಕೂಲಕರ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ತಿಿನ ತಾಲೂಕಾಧ್ಯಕ್ಷ ಡಾ.ಬಿ.ವಿಜಯರಾಜೇಂದ್ರ ಮಾತನಾಡಿ, ಬಿಇಡಿ ವಿದ್ಯಾಾರ್ಥಿಗಳಿಗೆ ಈ ಶಿಬಿರ ಅತ್ಯಂತ ಉಪಯೋಗಕಾರಿಯಾಗಿದ್ದು ತತ್ವ ಶಾಸದ ಒಂದು ಭಾಗ ಶೈಕ್ಷಣಿಕ ಮನೋವಿಜ್ಞಾನಕ್ಕೆೆ ಮೂಲಜ್ಞಾನ ಇಲ್ಲಿ ಸಿಕ್ಕಂತಾಗಿದೆ ಎಂದರು.
ಹೊಸ ತಲೆಮಾರಿನ ಜನಾಂಗವನ್ನು ಪರಿಷತ್ತಿಿನ ಕಡೆ ತರಬೇಕು ಎಂಬ ಉದ್ದೇಶದಿಂದ ತಮ್ಮ ನೇತೃತ್ವದ ಸಮಿತಿ ಕಸಾಪ ನಡೆ ಕಾಲೇಜಿನ ಕಡೆಗೆ ಅಭಿಯಾನ ಆರಂಭಿಸಿದ್ದೇವೆ. ಯುವಕರ ಕಡೆ ಹೋಗುತ್ತಿಿದ್ದೇವೆ. ಸದಸ್ಯತ್ವ ಅಭಿಯಾನ ಮಾಡುತ್ತೇವೆ. ವಿಭಿನ್ನ ವಿಚಾರಗಳ ಮೂಲಕ ಯುವ ವಿದ್ಯಾಾರ್ಥಿ ಸಮುದಾಯಕ್ಕೆೆ ಸಾಹಿತ್ಯ ಪರಿಷತ್ತಿಿನ ಅಂಗಳಕ್ಕೆೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊೊಂಡ ವಿದ್ಯಾಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ನಂತರ ಪ್ರಾಾಧ್ಯಾಾಪಕರಿಗೆ, ವಿದ್ಯಾಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ವೇದಿಕೆಯಲ್ಲಿ ಮಂಡ್ಯದ ಆದಿಚುಂಚನಗಿರಿ ವಿವಿಯ ಸಹ ಪ್ರಾಾಧ್ಯಾಾಪಕ ಡಾ.ಟಿ.ಎಸ್.ವಾಸುದೇವ, ಹಿರಿಯ ಸಾಹಿತಿ ಬಿ.ಜಿ.ಹುಲಿ, ಪರಿಷತ್ತಿಿನ ಜಿಲ್ಲಾಾ ಸಂಘಟನಾ ಕಾರ್ಯದರ್ಶಿ ದಂಡಪ್ಪ ಬಿರಾದಾರ, ತಾಲೂಕು ಸಮಿತಿ ಸದಸ್ಯ ಮಂಜುನಾಥ ಪಾಟೀಲ ವಟಗಲ್, ಶಿವಯ್ಯ ಹಿರೇಮಠ, ಗೌರವ ಕಾರ್ಯದರ್ಶಿ ರಾವುತರಾವ್ ಬರೂರು, ಆಶೋಕಕುಮಾರ ಜೈನ್, ಡಾ.ರೇಖಾ ಪಾಟೀಲ, ಆಂಜನೇಯ್ಯ ಕಾವಲಿ, ದೇವೇಂದ್ರಮ್ಮಘಿ ಸೇರಿದಂತೆ ಹಲವರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ