Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೇವಲ 15 ನಿಮಿಷದ ಭೇಟಿಗೆ ಸಿಎಂ ಆಗಮನ: ನಿಷ್ಠೆ ತೋರುವುದೇ? ರಾಜಕೀಯ ಲೆಕ್ಕಾಾಚಾರವೇ? ರಾಹುಲ್ ಸ್ವಾಗತಿಸಲು ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಮೈಸೂರಿಗೆ

ಸುದ್ದಿಮೂಲ ವಾರ್ತೆ ಮೈಸೂರು, ಜ.12:
ಕಾಂಗ್ರೆೆಸ್ ನಾಯಕರಾದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ (ಜ. 13) ತಮಿಳುನಾಡು ಪ್ರವಾಸ ಕೈಗೊಂಡಿದ್ದು ಈ ವೇಳೆ ಮೈಸೂರಿನ ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ಆಗಮಿಸಿ ಇಲ್ಲಿಂದ ತೆರಳಲಿದ್ದಾರೆ.
ರಾಹುಲ್ ಗಾಂದಿ ಅವರನ್ನು ಸ್ವಾಾಗತಿಸಲು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಲಿದ್ದು, ಮಧ್ಯಾಾಹ್ನ ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ವಿಮಾನ ಬದಲಾವಣೆಗೆ ರಾಹುಲ್ ಗಾಂಧಿ ಕೆಲ ಕಾಲ ತಂಗಲಿದ್ದಾರೆ. ಈ ಸಂದರ್ಭ ರಾಹುಲ್ ಗಾಂಧಿಗೆ ಸ್ವಾಾಗತ ಕೋರಲು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸುತ್ತಿಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಸಹ ಸಿಎಂ ಜೊತೆ ಪ್ರಯಾಣ ಬೆಳೆಸಲಿದ್ದಾರೆ.
ಮಧ್ಯಾಾಹ್ನ 2.20ಕ್ಕೆೆ ಆಗಮಿಸುವ ರಾಹುಲ್ ಗಾಂಧಿ ಅವರು 2.35ಕ್ಕೆೆ ನೀಲಲಗಿರಿ ಜಿಲ್ಲೆಯ ಗೂಡ್ಲುರಿಗೆ ತೆರಳಿ ಖಾಸಗಿ ಶಾಲೆಯ ಗೋಲ್ಡನ್ ಜ್ಯೂಬ್ಲಿಿ ಸಮಾರಂಭದಲ್ಲಿ ಭಾಗವಹಿಸಿ ಸಂಜೆ ಮತ್ತೆೆ ಮೈಸೂರು ವಿಮಾನ ನಿಲ್ದಾಾಣಕ್ಕೆೆ ಆಗಮಿಸಿ ಅಲ್ಲಿಂದ ದೆಹಲಿಗೆ ತೆರಳುವರು.
ನಾಳೆ ಮಧ್ಯಾಾಹ್ನ ರಾಹುಲ್ ಆಗಮಿಸಿದಾಗ ಸ್ವಾಾಗತಿಸಿ, ಬಳಿಕ ಸಂಜೆ ಹಿಂದಿರುಗುವಾಗ ಬೀಳ್ಕೊೊಡುಗೆ ನೀಡಲು (ಸಂಜೆ 5.45 ಕ್ಕೆೆ ಆಗಮನ, 6 ಗಂಟೆಗೆ ನಿರ್ಗಮನ) ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬರುತ್ತಿಿರುವುದು. ಇದು ರಾಜಕೀಯ ವಲಯದಲ್ಲಿ ಹಲವು ವ್ಯಾಾಖ್ಯಾಾನಗಳಿಗೆ ಕಾರಣವಾಗಿದೆ.
ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ಕೆಲಕಾಲ ತಂಗಲಿರುವ ರಾಹುಲ್ ಗಾಂಧಿ ಸ್ವಾಾಗತಿಸಲು ಸಿಎಂ ಸಿದ್ದರಾಮಯ್ಯ ಖುದ್ದು ಧಾವಿಸುತ್ತಿಿರುವುದು, ಪಕ್ಷದ ಒಳಗಿನ ಶಕ್ತಿಿ ಸಮತೋಲನ, ನಾಯಕತ್ವದ ಗೌರವ ಹಾಗೂ ರಾಜಕೀಯ ಸಂದೇಶದ ದೃಷ್ಟಿಿಯಿಂದ ಮಹತ್ವ ಪಡೆದುಕೊಂಡಿದೆ.
ಹೈಕಮಾಂಡ್‌ಗೆ ನಿಷ್ಠೆೆ ಸಂದೇಶ ರವಾನೆ?
ಸಾಮಾನ್ಯವಾಗಿ ಪ್ರೋೋಟೋಕಾಲ್ ಮಟ್ಟದ ಭೇಟಿಗೆ ಉನ್ನತ ಮಟ್ಟದ ಅಧಿಕಾರಿಗಳು ಅಥವಾ ಪಕ್ಷದ ನಾಯಕರು ಹೋಗುವುದು ರೂಢಿ. ಆದರೆ ಈ ಬಾರಿ ಮುಖ್ಯಮಂತ್ರಿಿಗಳೇ ತಾವೇ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿಿದ್ದಾರೆ. ಕೆಲ ನಿಮಿಷಗಳಾದರೂ ರಾಹುಲ್ ಗಾಂಧಿ ಜತೆಗೆ ಸಮಯ ಕಳೆಯುವುದು, ಹೈಕಮಾಂಡ್‌ಗೆ ನಿಷ್ಠೆೆ, ಕೇಂದ್ರ ನಾಯಕತ್ವದೊಂದಿಗೆ ಆತ್ಮೀಯ ಸಂಬಂಧ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸುವ ಉದ್ದೇಶವಿರಬಹುದೇ ? ಎಂದು ಹೇಳಲಾಗುತ್ತಿಿದೆ.
ಇನ್ನೊೊಂದು ಕಡೆ, ರಾಜ್ಯದ ಆಡಳಿತದ ಹೊಣೆ ಹೊತ್ತಿಿರುವ ಮುಖ್ಯಮಂತ್ರಿಿ ತಮ್ಮ ದಿನನಿತ್ಯದ ಕಾರ್ಯಕ್ರಮಗಳನ್ನು ಬಿಟ್ಟು ಕೇವಲ ವಿಮಾನ ಬದಲಾವಣೆಯ ಸಂದರ್ಭಕ್ಕೆೆ ತೆರಳಿರುವುದನ್ನು ವಿರೋಧ ಪಕ್ಷಗಳ ಕೆಂಗಣ್ಣಿಿಗೆ ಗುರಿಯಾಗುವ ಸಾಧ್ಯತೆಯೂ ಇದೆ.
ಒಟ್ಟಾಾರೆ, ಈ ಘಟನೆ ಕೇವಲ ಪ್ರೋೋಟೋಕಾಲ್ ವಿಷಯವಲ್ಲ, ಬದಲಾಗಿ ಕಾಂಗ್ರೆೆಸ್ ಪಕ್ಷದ ಒಳರಾಜಕೀಯ, ನಾಯಕತ್ವದ ಮಹತ್ವ ಹಾಗೂ ಹೈಕಮಾಂಡ್-ರಾಜ್ಯ ಸರ್ಕಾರದ ಸಂಬಂಧದ ರಾಜಕೀಯ ಸಂಕೇತವಾಗಿ ವಿಶ್ಲೇಷಿಸಲಾಗುತ್ತಿಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ