Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಜಾರಿಗೆ ವೈ.ಎಂ. ಸತೀಶ್ ಆಗ್ರಹ

ಸುದ್ದಿಮೂಲ ವಾರ್ತೆ ಬೆಳಗಾವಿ/ಬಳ್ಳಾರಿ, ಡಿ.11:
ವಿಜಯನಗರ ಜಿಲ್ಲೆೆಯ ಹಗರಿಬೊಮ್ಮನಹಳ್ಳಿಿ ತಾಲೂಕಿನ ತಂಬ್ರಹಳ್ಳಿಿ 2ನೇ ಹಂತದ ಏತ ನೀರಾವರಿ ಯೋಜನೆಯ 1400 ಎಕರೆ ಭೂಮಿಗೆ ನೀರುಣಿಸಲು ಪುನರ್ ಸರ್ವೇ ಆಗಿದ್ದು ತ್ವರಿತವಾಗಿ ಕಾಮಗಾರಿ ಕೈಗೆತ್ತಿಿಕೊಳ್ಳಬೇಕು ಎಂದು ವಿಜಯನಗರ - ಬಳ್ಳಾಾರಿ ಸ್ಥಳೀಯ ಸಂಸ್ಥೆೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾಾರೆ.
ಬೆಳಗಾವಿಯ ‘ಸುವರ್ಣ ಸೌಧದಲ್ಲಿ ಸಣ್ಣ ನೀರಾವರಿ, ವಿಜ್ಞಾಾನ ಮತ್ತು ತಂತ್ರಜ್ಞಾಾನ ಸಚಿವ ಎನ್.ಎಸ್. ಬೋಸರಾಜು ಅವರಿಗೆ ಪ್ರಶ್ನೆೆ ಕೇಳಿರುವ ಶಾಸಕ ವೈ.ಎಂ. ಸತೀಶ್ ಅವರು, 1976ರಲ್ಲಿ ಪ್ರಾಾರಂಭವಾಗಿರುವ ತಂಬ್ರಹಳ್ಳಿಿ ಏತ ನೀರಾವರಿ ಯೋಜನೆ 3000 ಎಕರೆ ಭೂಮಿಗೆ ನೀರುಣಿಸುವ ಯೋಜನೆ ಆಗಿತ್ತು. ಆದರೆ, ಈವರೆಗೆ 1400 ಎಕರೆ ಭೂಮಿಗೆ ಈ ವರೆಗೆ ನೀರುಣಿಸುವ ಕೆಲಸ ಆಗಿಲ್ಲ. ಸರ್ಕಾರ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಾಯಿಸಿದರು.
ಆಗ, ಸಚಿವ ಎನ್.ಎಸ್. ಬೋಸರಾಜು ಅವರು, ತಂಬ್ರಹಳ್ಳಿಿ 2ನೇ ಹಂತದ ಏತ ನೀರಾವರಿ ಯೋಜನೆ ಪುನರುಜ್ಜೀವನಗೊಳಿಸಲು ವಿಶೇಷ ಘಟಕ ಯೋಜನೆ ಅಡಿಯಲ್ಲಿ ರೂ. 2.5 ಕೋಟಿ ಹಾಗೂ ಏತ ನೀರಾವರಿ ಯೋಜನೆ ಅಡಿಯಲ್ಲಿ ರೂ. 1.75 ಅನುದಾನ ನೀಡಲಾಗಿದೆ. ಪ್ರಸ್ತುತ ಈ ಯೋಜನೆ ವ್ಯಾಾಪ್ತಿಿಯ 1400 ಎಕರೆ ಭೂಮಿಯಲ್ಲಿ ಮನೆಗಳು, ಎಪಿಎಂಸಿ ಇನ್ನಿಿತರೆ ಕಟ್ಟಡಗಳು ನಿರ್ಮಾಣ ಆಗಿರುವ ಕಾರಣ ನೀರಾವರಿ ಪ್ರದೇಶವು ಕಡಿಮೆಯಾಗಿದೆ. ಬಾಕಿ ನೀರುಣಿಸುವ ಪ್ರದೇಶದ ತಾಂತ್ರಿಿಕ ಹಾಗೂ ಇನ್ನಿಿತರೆ ವಿಷಯಗಳನ್ನು ಆಧರಿಸಿದ ಯೋಜನೆ ಪುನರ್ ರೂಪಿಸಲಾಗುತ್ತದೆ ಎಂದರು.
ಅಲ್ಲದೇ, ಈ ಯೋಜನೆಯ ವ್ಯಾಾಪ್ತಿಿಯಲ್ಲಿ ಶಿಗೇನಹಳ್ಳಿಿ 1, 2, ಮತ್ತು 3, ತಂಬ್ರಹಳ್ಳಿಿ, ತಂಬ್ರಹಳ್ಳಿಿ ಎಕ್‌ಸ್‌‌ಟೆನ್ಶನ್ ಪ್ರದೇಶ, ಕೃಷ್ಣಾಾಪುರ, ಚಿಲಗೋಡು ಇನ್ನಿಿತರೆ ಪ್ರದೇಶಗಳು ಸೇರಿವೆ. ಈ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಿಸಲಾಗುತ್ತದೆ ಎಂಧು ಉತ್ತರಿಸಿದರು.
ಆಗ, ವೈ.ಎಂ. ಸತೀಶ್ ಅವರು, ಮೂರುವರೆ ವರ್ಷಗಳ ಹಿಂದೆ ಇದೇ ಪ್ರಶ್ನೆೆಗಳನ್ನು ಸದನದಲ್ಲಿ ಕೇಳಿದ್ದೆೆ. ಆಗ, ಸಚಿವರಾಗಿದ್ದ ಮಾಧುಸ್ವಾಾಮಿ ಅವರು, ಯೋಜನೆಯ ಪುನರ್ ಸರ್ವೇಗೆ ಆದೇಶ ನೀಡಿದ್ದರು. ಈ ಯೋಜನೆಯ ಪುನರ್ ಸರ್ವೇ ಪೂರ್ಣಗೊಂಡಿದೆ. ಕಾರಣ ತ್ವರಿತವಾಗಿ ಕಾಮಗಾರಿ ಕೈಗೆತ್ತಿಿಕೊಂಡು ರೈತರಿಗೆ ನೆರವಾಗಿ. ಕೃಷಿ ಭೂಮಿಗೆ ನೀರುಣಿಸುವ ಕೆಲಸವಾಗಲಿ ಎಂದು ಅವರು ಕೋರಿದರು.
ಸಚಿವ ಎನ್.ಎಸ್. ಬೋಸರಾಜ್ ಅವರು, ಹಣದ ಖರ್ಚಿನ ಲೆಕ್ಕಾಾಚಾರ ಹಾಕಿ ಹೆಚ್ಚಿಿನ ಹಣದ ಅಗತ್ಯವಿದ್ದಲ್ಲಿ ಬಜೆಟ್‌ನಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಿ, ಅನುದಾನ ನೀಡಲಾಗುತ್ತದೆ ಎಂದು ಉತ್ತರಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ